Monday, December 23, 2024

UK ನಲ್ಲಿ ಬುದ್ಧಿವಂತನ ‘UI’ ಕ್ರೇಜ್

ಉಪ್ಪಿಗಿಂತ ರುಚಿ ಬೇರೆ ಇಲ್ಲ.. ಅದನ್ನ ಒಪ್ಪಿಕೊಂಡೋರು ದಡ್ಡರಲ್ಲ. ಯೆಸ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಉಪೇಂದ್ರ ಏನೇ ಮಾಡಿದ್ರು ಡಿಫರೆಂಟ್. ಅವ್ರ ನಿರ್ದೇಶನದ ಸಿನಿಮಾಗಾಗಿ ಬಹಳ ಕಾತರದಿಂದ ಕಾಯ್ತಿದ್ದ ಡೈಹಾರ್ಡ್​ ಫ್ಯಾನ್ಸ್​ ಇದೀಗ ಯುಐ ಸಿನಿಮಾದಿಂದ ಸಖತ್ ಥ್ರಿಲ್ ಆಗಿದ್ದಾರೆ. ಅದು ಸಪ್ತಸಾಗರದಾಚೆಗೂ ಸದ್ದು ಮಾಡ್ತಿರೋದು ಕ್ರೇಜ್ ಕಾ ಬಾಪ್ ಅನಿಸಿದೆ.

UK ನಲ್ಲಿ ಬುದ್ಧಿವಂತನ ‘UI’ ಕ್ರೇಜ್ ಒಮ್ಮೆ ನೋಡಿ

ಇದು ಉಪ್ಪಿ ಡೈರೆಕ್ಷನ್ ಗತ್ತು.. ಕಂಟೆಂಟ್ ಗಮ್ಮತ್ತು

ಮೇಕಿಂಗ್ ಹಂತದಲ್ಲೇ ವಿದೇಶದಲ್ಲಿ UI ಸೌಂಡ್

ಕ್ರಿಕೆಟ್ ಸ್ಟೇಡಿಯಂನಲ್ಲಿ ಬುದ್ದಿವಂತನಿಗೆ ಜೈಕಾರ..!

ಡಿಫರೆಂಟ್​ಗೆ ಕೇರ್ ಆಫ್ ಅಡ್ರೆಸ್ ಅಂದ್ರೆ ಅದು ಒನ್ ಅಂಡ್ ಓನ್ಲಿ ರಿಯಲ್ ಸ್ಟಾರ್ ಉಪೇಂದ್ರ. ತಮ್ಮ ಸಿನಿಮಾಗಳಿಂದ ಸಮಾಜದಲ್ಲಿನ ಸಾಕಷ್ಟು ಸೂಕ್ಷ್ಮ ವಿಚಾರಗಳನ್ನು ನೇರವಾಗಿ ಹೇಳೋ ಕ್ರಿಯೇಟೀವ್ ಮೈಂಡ್. ಹತ್ತು ವರ್ಷದಲ್ಲಿ ನಡೆಯೋದನ್ನ ಇಂದೇ ತಮ್ಮ ಚಿತ್ರಗಳಲ್ಲಿ ವಿಶ್ಯುವಲ್ ಟ್ರೀಟ್ ಕೊಡೋ ಮಹಾನ್ ಮಾಂತ್ರಿಕ.

ಡೈರೆಕ್ಷನ್ ಬಿಟ್ಟು ಬರೀ ನಟನೆ ಹಾಗೂ ಪ್ರಜಾಕೀಯದಲ್ಲಿ ಬ್ಯುಸಿ ಇದ್ದ ಉಪ್ಪಿ, ಇದೀಗ ಯು ಅಡ್ ಐ ಚಿತ್ರದಿಂದ ಐ ಆ್ಯಮ್ ಬ್ಯಾಕ್ ಅಂದಿದ್ದಾರೆ. ಕೆಪಿ ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ನಿರ್ಮಾಣದಲ್ಲಿ ತಯಾರಾಗ್ತಿರೋ ಯುಐ ಸಿನಿಮಾದಲ್ಲಿ ಉಪ್ಪಿ ಕೊಂಬಿರೋ ಕುದುರೆ ಏರಿ ನಾಮದ ಬಗ್ಗೆ ನಾನು ನೀನು ಕಥೆ ಹೇಳಲಿದ್ದಾರೆ. ರೀಸೆಂಟ್ ಆಗಿ ಸಿನಿಮಾ ಸೆಟ್ಟೇರಿತ್ತು. ನಾಮ ಯಾರಿಂದ ಯಾರಿಗೆ ಹೇಗೆ ಅನ್ನೋದನ್ನ ಉಪ್ಪಿ ಹೇಳಿರಲಿಲ್ಲ. ಆದ್ರೀಗ ಶೂಟಿಂಗ್ ಭರದಿಂದ ಸಾಗ್ತಿದ್ದು, ಮೊದಲ ಹಂತದ ಶೂಟಿಂಗ್ ಸಖತ್ ಸದ್ದು ಮಾಡ್ತಿದೆ.

ಚಿತ್ರದ ಒಂದೊಂದು ಪೋಸ್ಟರ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ಪ್ರೇಕ್ಷಕರ ತಲೆಗೆ ಪೋಸ್ಟರ್​ಗಳಿಂದಲೇ ಹುಳ ಬಿಟ್ಟಿದ್ದಾರೆ ಉಪ್ಪಿ. ಈ ಪ್ಯಾನ್ ಇಂಡಿಯಾ ಸಿನಿಮಾದ ನಿರೀಕ್ಷೆ ಬರೀ ನಮ್ಮ ಭಾರತೀಯರಿಗಷ್ಟೇ ಅಲ್ಲ, ವಿದೇಶಿಗರಿಗೂ ಗುಂಗಿಡಿಸ್ತಿದೆ. ಇಂಡಿಯಾ- ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಮ್ಯಾಚ್ ವೇಳೆ ಸ್ಟೇಡಿಯಂ ಬಳಿ ಇಂಗ್ಲೆಂಡ್​ನಲ್ಲಿರೋ ಕನ್ನಡಿಗರು ಯುಐ ಹಾಗೂ ಉಪ್ಪಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಅದೇನೇ ಇರಲಿ, ಉಪ್ಪಿಯ ಕ್ರಿಯಾಶೀಲತೆ ಹಾಗೂ ನಿರ್ದೇಶನಾ ಕೌಶಲ್ಯಗಳಿಗೆ ಎಂಥವ್ರೂ ತಲೆದೂಗಲೇಬೇಕು. ಅವ್ರ ಸಿನಿಮಾ ಕಥೆ, ಕಾನ್ಸೆಪ್ಟ್, ಅದ್ರ ನಿರೂಪಣಾ ಶೈಲಿ ಎಲ್ಲರಿಗಿಂದ ವಿಭಿನ್ನ ಹಾಗೂ ವಿಶೇಷ. ಅದು ಈ ಬಾರಿಯೂ ಪ್ರೂವ್ ಆಗಲಿದ್ದು, ಕ್ರೇಜ್ ಯಾವ ಮಟ್ಟಕ್ಕಿದೆ ಅನ್ನೋದಕ್ಕೆ ಇದಕ್ಕಿಂತ ಮಹತ್ವದ ನಿದರ್ಶನ ಮತ್ತೊಂದು ಬೇಕಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES