Monday, December 23, 2024

ಪವಿತ್ರಾ ಮ್ಯಾರೇಜ್ ಸ್ಟೋರಿ ಬಿಚ್ಚಿಟ್ರು ಸುಚೇಂದ್ರ ಪ್ರಸಾದ್

ಪವಿತ್ರಾ ಲೋಕೇಶ್ ಅನ್ನೋ ನಟೀಮಣಿ, ಕನ್ನಡದ ಜೊತೆ ತೆಲುಗು ಚಿತ್ರರಂಗವನ್ನೂ ಅಪವಿತ್ರ ಮಾಡ್ತಿದ್ದಾರೆ. ಮೊನ್ನೆಯಷ್ಟೇ ನಾನು ಸುಚೇಂದ್ರ ಪ್ರಸಾದ್ ಜೊತೆ ಲಿವ್ ಇನ್ ರಿಲೇಷನ್​ಶಿಪ್​​ನಲ್ಲಿದ್ದೆ ಅಂದಿದ್ರು. ಆದ್ರೀಗ ಅವ್ರ ವಿವಾಹ ಸಂಪ್ರದಾಯಬದ್ಧ ಅನ್ನೋದನ್ನ ಸ್ವತಃ ಸುಚೇಂದ್ರ ಅವ್ರೇ ಬಹಿರಂಗ ಪಡಿಸಿದ್ದಾರೆ.

ಪವಿತ್ರಾ ಮ್ಯಾರೇಜ್ ಸ್ಟೋರಿ ಬಿಚ್ಚಿಟ್ರು ಸುಚೇಂದ್ರ ಪ್ರಸಾದ್

ನಮ್ದು ಲಿವ್ ಇನ್ ಅಂದಿದ್ದ ಪವಿತ್ರಾಗೆ ಸುಚೇಂದ್ರ ಶಾಕ್..!

ಕನ್ನಡ & ತೆಲುಗು ಇಂಡಸ್ಟ್ರಿಯನ್ನ ಅಪವಿತ್ರಗೊಳಿಸಿದ ನಟಿ

ಈಕೆಯಿಂದ ರಟ್ಟಾಯ್ತು 2 ಸುಂದರ ಕುಟುಂಬಗಳ ಗುಟ್ಟು

ಹನ್ನೆರಡು ವರ್ಷಗಳ ದಾಂಪತ್ಯ ಜೀವನವನ್ನು ಹನ್ನೊಂದು ಸೆಕೆಂಡ್​ನಲ್ಲಿ ಹೊಡೆದು ಹಾಕಿದ್ರು ಪವಿತ್ರಾ ಲೋಕೇಶ್ ಅನ್ನೋ ಬಹುಭಾಷಾ ನಟಿ. ಈಕೆ ನಟನೆಯನ್ನು ಬರೀ ತೆರೆ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಮುಂದುವರೆಸಿರೋದು ನಿಜಕ್ಕೂ ಕುತೂಹಲ ಮೂಡಿಸಿದೆ. ಹೌದು.. ತೆಲುಗಿನ ಪ್ರತಿಷ್ಠಿತ ಕುಟುಂಬ ಸೂಪರ್ ಸ್ಟಾರ್ ಕೃಷ್ಣ ಅವ್ರ ಪುತ್ರ ನಟ ನರೇಶ್​ರನ್ನ ಬುಟ್ಟಿಗೆ ಹಾಕಿಕೊಂಡಿರೋ ಪವಿತ್ರಾ, ಎರಡು ಇಂಡಸ್ಟ್ರಿಗಳನ್ನ ಅಪವಿತ್ರಗೊಳಿಸ್ತಿದ್ದಾರೆ.

ಹೌದು.. ನಾನು ಸುಚೇಂದ್ರ ಪ್ರಸಾದ್ ಜೊತೆ ಆರು ವರ್ಷ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದೆ, ಐದು ವರ್ಷದಿಂದ ನಾವು ಜೊತೆಗೆ ಇಲ್ಲ. ಬೇರೆ ಬೇರೆ ಫ್ಲ್ಯಾಟ್​ಗಳಲ್ಲಿ ವಾಸವಾಗಿದ್ದೇವೆ ಎಂದಿದ್ರು. ಆದ್ರೆ ಇದೀಗ ಪವಿತ್ರಾ ಹೇಳಿರೋದೆಲ್ಲ ಶುದ್ಧ ಸುಳ್ಳು ಅನ್ನೋದು ಬಟಾಬಯಲಾಗಿದೆ. ಅವರ ಪತಿ ಸುಚೇಂದ್ರ ಪ್ರಸಾದ್ ಮಾತ್ರ ನಮ್ಮದು ಪಾಣಿಗ್ರಹಣ ಸಂಪ್ರದಾಯಬದ್ಧ ವಿವಾಹ. ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ  ನಮ್ಮದು ಸತಿ- ಪತಿ ಜೀವನದ ದಾಂಪತ್ಯ ಎಂದು ಹೇಳುವ ಮೂಲಕ ತನ್ನ ಹೆಂಡ್ತಿಯ ಸುಳ್ಳನ್ನ ಜಗಜ್ಜಾಹೀರು ಮಾಡಿದ್ದಾರೆ.

ಅಲ್ಲದೆ, ನಿಮಗೆ ಅಷ್ಟಕ್ಕೂ ದಾಖಲೆಗಳು ಬೇಕಂದ್ರೆ ನನ್ನ ಪಾಸ್​​ಪೋರ್ಟ್​ನಲ್ಲಿ ಹೆಂಡತಿ ಜಾಗದಲ್ಲಿ ಅವ್ರ ಹೆಸರಿದೆ. ಅವ್ರ ಪಾಸ್​ಪೋರ್ಟ್​ನಲ್ಲಿ ಗಂಡ ಜಾಗದಲ್ಲಿ ನನ್ನ ಹೆಸರಿದೆ ಎಂದಿದ್ದಾರೆ. ಆಧಾರ್ ಕಾರ್ಡ್​ ಸೇರಿದಂತೆ ಎಲ್ಲಾ ದಾಖಲೆಗಳಲ್ಲೂ ನಾವು ಸತಿ- ಪತಿ ಎಂದಿದ್ದಾರೆ. ಇನ್ನು ಅನೇಕ ಧಾರ್ಮಿಕ ಮುಖಂಡರು ಸಾಲು ಸಾಲು ಕಾರ್ಯಕ್ರಮಗಳಿಗೆ ನಮ್ಮನ್ನ ಆಹ್ವಾನಿಸಿದ್ರು. ಇದಕ್ಕಿಂತ ಪುರಾವೆಗಳು ಬೇಕೆ ಎಂದಿದ್ದಾರೆ. ಅರ್ಥಾತ್ ಪವಿತ್ರಾ ಲೋಕೇಶ್ ಅವ​ರನ್ನ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ಈಕೆ ತನ್ನ ವೈಯಕ್ತಿಕ ಹಿತಾಸಕ್ತಿ ಈಡೇರಿಸಿಕೊಳ್ಳೋಕೆ ಇಲ್ಲಿ ಹಾಲಿನಂತ ಸುಚೇಂದ್ರ ಪ್ರಸಾದ್ ಕುಟುಂಬ, ಅಲ್ಲಿ ನರೇಶ್-ರಮ್ಯಾ ರಘುಪತಿ ಕುಟುಂಬವನ್ನು ಹೊಡೆಯುತ್ತಿದ್ದಾರೆ. ಒಟ್ಟೊಟ್ಟಿಗೆ ಎರಡು ಕುಟುಂಬಗಳಲ್ಲಿ ಬಿರುಗಾಳಿ ಎಬ್ಬಿಸಿರೋ ಪವಿತ್ರಾ ಲೋಕೇಶ್ ಅವ​ರನ್ನ ತೆಲುಗು ಹಾಗೂ ಕನ್ನಡ ಚಿತ್ರರಂಗಗಳು ಬ್ಯಾನ್ ಮಾಡಿದ್ರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಈ ಕುರಿತು ಫಿಲ್ಮ್ ಚೇಂಬರ್​ಗಳಲ್ಲಿ ಮಾತುಕತೆ ಕೂಡ ನಡೆಯುತ್ತಿದ್ದು, ಏನಾಗುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ ಸ್ಟಾರ್ಸ್​ ಸಮಾಜಕ್ಕೆ ಮಾದರಿ ಆಗೋದು ಬಿಟ್ಟು ಹೀಗೆ ಕಳಂಕ ಆಗ್ತಿರೋದು ನಿಜಕ್ಕೂ ಬೇಸರದ ಸಂಗತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES