Wednesday, January 22, 2025

ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟ ‘ಓ ಮೈ ಲವ್​​’ ಚಿತ್ರತಂಡ

ಅಪ್ಪ ಅಂದುಕೊಂಡಂತೆ, ಕನ್ನಡ ಕಲಾಭಿಮಾನಿಗಳು ನಿರೀಕ್ಷೆ ಮಾಡಿದಂತೆ ದೊಡ್ಡ ಮಟ್ಟದ ಪ್ರೊಮೋಷನ್ಸ್​ನಿಂದ ರೀ ಲಾಂಚ್ ಆಗ್ತಿದ್ದಾರೆ ಸುಪ್ರೀಂ ಹೀರೋ ತನಯ ಅಕ್ಷಿತ್ ಶಶಿಕುಮಾರ್. ಉತ್ತರ ಕರ್ನಾಟಕದ ಜನತೆಯ ಆಶೀರ್ವಾದದಿಂದ ತನ್ನ ಪ್ರೇಮದ ಹೊಳೆ ಹರಿಸುತ್ತಿದ್ದಾರೆ.

ದಾವಣಗೆರೆ, ತೋರಣಗಲ್ಲಿನಲ್ಲಿ ಅಕ್ಷಿತ್ ಪ್ರೇಮದ ಹೊಳೆ

ಪ್ರಾಮಿಸಿಂಗ್ ಕಂಟೆಂಟ್, ಅದ್ಭುತ ಮೇಕಿಂಗ್​ನ ಕಥಾನಕ

ಇಂಡಸ್ಟ್ರಿಗೆ ಸಾಕಷ್ಟು ಮಂದಿ ಹೀರೋಗಳ ಎಂಟ್ರಿ ಆಗ್ತಿರುತ್ತೆ. ಆದ್ರೆ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಎಂಟ್ರಿ ಕೊಂಚ ಡಿಫರೆಂಟ್. ಕಾರಣ ಈತನಿಗೆ ಅಭಿನಯ ಅನ್ನೋದು ರಕ್ತಗತವಾಗಿಯೇ ಬಂದು ಬಿಟ್ಟಿದೆ. ಹಾಗಾಗಿ ಬಹಳ ಲೀಲಾಜಾಲವಾಗಿ, ಸ್ವಾಭಾವಿಕವಾಗಿ ನುರಿತ ಕಲಾವಿದನಂತೆ ಕಾಣ್ತಿದ್ದಾರೆ. ನಮ್ಮ ಚಂದನವನಕ್ಕೆ ಒಬ್ಬ ಪ್ರಾಮಿಸಿಂಗ್ ಹೀರೋ ಅನಿಸಿಕೊಳ್ಳಲಿದ್ದಾರೆ.

ಫ್ರೆಂಡ್ ಹಾಗೂ ಗರ್ಲ್​ ಫ್ರೆಂಡ್​ಗೆ ಹಾರ್ಡ್​ ಕೋರ್ ಫ್ಯಾನ್ ಆಗಿ ಬರ್ತಿರೋ ಅಕ್ಷಿತ್, ಕೀರ್ತಿ ಅನ್ನೋ ಉತ್ತರ ಕರ್ನಾಟಕದ ಪ್ರತಿಭೆ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಇದಕ್ಕೆ ಸ್ಮೈಲ್ ಶ್ರೀನು ಆ್ಯಕ್ಷನ್ ಕಟ್ ಹೇಳಿದ್ದು, ರಾಮಾಂಜಿನಿ ಬಂಡವಾಳ ಹೂಡಿದ್ದಾರೆ. ಚರಣ್ ಅರ್ಜುನ್ ಸಂಗೀತ, ಹಾಲೇಶ್ ಸಿನಿಮಾಟೋಗ್ರಫಿ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ.

ಸಿನಿಮಾ ರಿಲೀಸ್​ಗೂ ಹದಿನೈದು ದಿನ ಮೊದಲೇ ಪ್ರೊಮೋಷನ್ಸ್ ಶುರು ಮಾಡಿರೋ ನಿರ್ದೇಶಕ ಸ್ಮೈಲ್ ಶ್ರೀನು, ಅಕ್ಷಿತ್​ರನ್ನ ರಾಜ್ಯದ ಮೂಲೆ ಮೂಲೆಯಲ್ಲಿ ಕನ್ನಡಿಗರ ಮುಂದೆ ಜೈ ಕಾರ ಹಾಕಿಸ್ತಿದ್ದಾರೆ. ದಾವಣಗೆರೆ, ಬಳ್ಳಾರಿ, ತೋರಣಗಲ್​ನಲ್ಲಿ ಚಿತ್ರತಂಡಕ್ಕೆ ಸಾವಿರಾರು ಮಂದಿ ಸಾಥ್ ನೀಡಿ ಶುಭ ಹಾರೈಸಿದ್ದಾರೆ.

ಹೋದಲ್ಲೆಲ್ಲಾ ಬೊಗಸೆ ಪ್ರೀತಿ ನೀಡಿ, ಮನತುಂಬಿ ಹೃದಯದಿಂದ ಇವ್ರನ್ನ ಹರಸುತ್ತಿದ್ದಾರೆ. ಅದ್ರಲ್ಲೂ ಅಕ್ಷಿತ್ ಭವಿಷ್ಯದ ಸ್ಟಾರ್ ಅಂತ ಜನ ಈಗಾಗ್ಲೇ ಸ್ವೀಕರಿಸಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಆತನ ಹಾರ್ಡ್​ ವರ್ಕ್​, ಡೆಡಿಕೇಷನ್ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್​ನಿಂದ ಗೊತ್ತಾಗ್ತಿದೆ. ಪ್ರೀತಿಯ ಹೊಳೆ ಹರಿಸಲು ಸಜ್ಜಾಗಿರೋ ಅಕ್ಷಿತ್​ಗೆ ಕನ್ನಡಿಗರೇ ನಿರೀಕ್ಷೆಗೂ ಮೀರಿದ ಪ್ರೀತಿ ನೀಡ್ತಿರೋದು ನಿಜಕ್ಕೂ ಖುಷಿಯ ವಿಚಾರ.

ನಿರ್ಮಾಪಕ ರಾಮಾಂಜಿನಿ ಅವ್ರ ಊರಾದ ತೋರಣಗಲ್​ನಲ್ಲಿ ಪ್ರೊಮೋಷನ್ಸ್ ವೇಳೆ ಜನ ಕಿಕ್ಕಿರಿದು ತುಂಬಿದ್ರು. ಇನ್ನು ಚಿತ್ರದಲ್ಲಿ ಕಲಾಸಾಮ್ರಾಟ್ ಎಸ್ ನಾರಾಯಣ್, ಸಾಧು ಕೋಕಿಲಾ, ಮಗಧೀರ ಖ್ಯಾತಿಯ ದೇವ್​ಗಿಲ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಕಾಣಸಿಗಲಿದ್ದಾರೆ. ಸ್ಟೂಡೆಂಟ್ ಆಗಿ ಇದೇ ಜುಲೈ 15ಕ್ಕೆ ಥಿಯೇಟರ್ ರೂಲ್ ಮಾಡೋಕೆ ಬರ್ತಿರೋ ಅಕ್ಷಿತ್​ಗೆ ಶುಭ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES