Friday, April 19, 2024

KSRTC ಬಸ್​​ ಪ್ರಯಾಣ ದರ ಪರಿಷ್ಕರಣೆಗೆ ಸರ್ಕಾರ ಚಿಂತನೆ

ಬೆಂಗಳೂರು : ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗ್ಬಿಟ್ಟಿದೆ. ಪೆಟ್ರೋಲ್- ಡೀಸೆಲ್, ಅಡುಗೆ ಎಣ್ಣೆ, ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡ್ತಿದೆ. ಇದ್ರ ನಡುವೆ ಇದೀಗ KSRTC ಬಸ್ ಪ್ರಯಾಣ ದರ ಪರಿಷ್ಕರಣೆಗೆ ಮತ್ತೆ ಕಸರತ್ತು ಆರಂಭಿಸಿದೆ. ಸಿಎಂ ಅಸ್ತು ಅಂದ್ರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ.

ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರೋ ಹೊತ್ತಿನಲ್ಲಿ ಬಸ್ ದರ ಏರಿಕೆಗೆ ಕಸರತ್ತು ಆರಂಭವಾಗಿದೆ. ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ರೋಸಿಹೋಗಿದ್ದಾರೆ. ಬ್ಯಾಗಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಜೇಬಲ್ಲಿ ವಸ್ತು ತರೋ ಸ್ಥಿತಿ ಬಂದ್ಬಿಟ್ಟಿದೆ. ಅದ್ರಲ್ಲೂ ಸಗಟು, ಡೀಸೆಲ್ ಹಾಗೂ ಪೆಟ್ರೋಲ್ ದರ ದಿನದಿನವೂ ಏರುತ್ತಲೇ ಸಾಗ್ತಿದೆ. ಇದ್ರ ಮಧ್ಯೆ ಕೆಎಸ್ಆರ್ಟಿಸಿ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಾರಿ ಶೇ 20 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಕಳಿಸಿದ್ದ ನಿಗಮ ಇದೀಗ ಬರೋಬ್ಬರಿ ಶೇಕಡಾ 38 ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ.

ಸದ್ಯ ಡೀಸೆಲ್ ದರ ಏರಿಕೆಯಿಂದ ನಿಗಮಕ್ಕೆ ಪ್ರತಿನಿತ್ಯ ಲಕ್ಷಾಂತರ ರೂ ಹೆಚ್ಚುವರಿ ಹೊರೆಯಾಗ್ತಿದೆ. ಬಲ್ಕ್ ಡೀಸೆಲ್ ದರವೂ ದುಪ್ಪಟ್ಟಾಗಿದೆ. ಹೀಗಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಮೂರು ನಾಲ್ಕು ವರ್ಷದಿಂದ ಟಿಕೆಟ್ ದರ ಏರಿಕೆಯೂ ಆಗಿಲ್ಲ. ಬಸ್ ಬಿಡಿಭಾಗಗಳು ಬಹಳಷ್ಟು ದುಬಾರಿಯಾಗಿದೆ. ಜೊತೆಗೆ ಬಸ್ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದರಿಂದ ಟಿಕೆಟ್ ರೆವೆನ್ಯೂ ಕಲೆಕ್ಷನ್ ಸಹ ಪಾತಾಳಕ್ಕೆ ಇಳಿದಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ನಾವು ಬಸ್ ರಸ್ತೆಗಿಳಿಸೋದು ಕಷ್ಟ. ಸದ್ಯದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕನಿಷ್ಠ 38 ಶೇಕಡಾ ದರ ಏರಿಕೆ ಮಾಡ್ಬೇಕೆಂದು ಕೆಎಸ್ಆರ್ಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಇನ್ನು ಶೇಕಡಾ 38 ರಷ್ಟು ದರ ಏರಿಕೆ ಪ್ರಸ್ತಾವನೆಗೆ ಸಿಎಂ ಹೌ ಹಾರಿದ್ದಾರೆ. ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚಾಗಿದೆ. ಇಂಥಾ ಪರಿಸ್ಥಿತಿಯಲ್ಲಿ 38 ಶೇಕಡಾ ದಷ್ಟು ಬಸ್ ಟಿಕೆಟ್ ದರ ಏರಿಸಿದ್ರೆ ಜನ ಸುಮ್ನೆ ಬಿಡ್ತಾರಾ ಇದು ಆಗದ ಮಾತು ಎಂದು ನಿಗಮಕ್ಕೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಸದ್ಯದ ನಿಗಮದ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಕನಿಷ್ಠ ದರವಾದ್ರೂ ದರ ಏರಿಕೆ ಮಾಡ್ಲೇ ಬೇಕು ಎಂದು ನಿಗಮ ಸರ್ಕಾರದ ಮುಂದೆ ಮಂಡಿಯೂರಿದೆ. ಸಿಎಂ ಕೂಡ ದರ ಏರಿಕೆಗೆ ಸಕಾರಾತ್ಮಕ ಸ್ವಂದಿಸಿದ್ದು ಒಂದೆರಡು ದಿನಗಳಲ್ಲಿ ಕ್ರಮದ ಭರವಸೆ ನೀಡಿದ್ದಾರೆ ಅಂತ ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ‌.

ಒಟ್ಟಿನಲ್ಲಿ ಒಂದು ವೇಳೆ ಸರ್ಕಾರ ಕೆಎಸ್ಆರ್ಟಿಸಿ ಪ್ರಸ್ತಾವನೆ ಗ್ರೀನ್ ಸಿಗ್ನಲ್ ನೀಡಿದ್ರೆ ಪ್ರತಿ ಸ್ಟೇಜ್ ಆಧಾರದ ಮೇಲೆ 3 ರಿಂದ 4 ರೂ. ಹೆಚ್ಚು ಸಾಧ್ಯತೆ ಇದೆ. ಕಳೆದ ಎರಡುಬಾರಿ ದರ ಏರಿಕೆ ಪ್ರಸ್ತಾವನೆಯನ್ನೂ ಸಿಎಂ ತಿರಸ್ಕರಿಸಿದ್ರು. ಈಗ ಮತ್ತೆ ಶೇಕಡಾ 38 ದರ ಏರಿಕೆ ಪ್ರಸ್ತಾವನೆ ಸರ್ಕಾರ ಮುಂದೆ ಇದೆ. ಆದ್ರೆ ನಿಗಮ ಮಾತ್ರ ದರ ಏರಿಕೆ ಆಗದೇ ಬಸ್ ರಸ್ತೆಗಿಳಿಸೋದು ಕಷ್ಟ ಅಂತಿದೆ. ಇದ್ರಮಧ್ಯೆ ಜನಸಾಮಾನ್ಯರು ಬಸ್ ದರವೂ ಏರಿದ್ರೆ ನಮ್ಮ ಗತಿ ಏನು ಅಂತ ಚಿಂತೆಗೀಡಾಗಿದ್ದಾರೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES