Monday, December 23, 2024

ಡಾಲಿ ಖಾಕಿ ಅವತಾರಕ್ಕೆ ಸ್ಯಾಂಡಲ್​​ವುಡ್ ಕ್ಲೀನ್ ಬೋಲ್ಡ್

ನಟ ರಾಕ್ಷಸ, ನಟ ಭಯಂಕರ ಡಾಲಿ ಧನಂಜಯ ಸದ್ಯ ಕನ್ನಡದ ಮೋಸ್ಟ್ ಬ್ಯುಸಿಯೆಸ್ಟ್ ನಟ. ಬೈರಾಗಿ ಸಿನಿಮಾದ ಯಶಸ್ಸಿನ ಮತ್ತಲ್ಲಿರೋ ಡಾಲಿ ಅಂಗೈಯಲ್ಲಿ ಇನ್ನು ನಾಲ್ಕು ಸಿನಿಮಾಗಳಿಗೆ. ಇದ್ರ ನಡುವೆ ಹೊಯ್ಸಳ ಸಿನಿಮಾದ ಪೋಸ್ಟರ್ ಪ್ರೇಕ್ಷಕರ ಎದೆಯಲ್ಲಿ ಕಿಚ್ಚು ಹಚ್ಚಿದೆ.  ಯೆಸ್.. ಟಗರು ಡಾಲಿಯ ಪೊಲೀಸ್ ಅವತಾರ ಹೇಗಿದೆ ಗೊತ್ತಾ..? ಈ ಸ್ಟೋರಿ ಓದಿ.

  • ಗುರುದೇವ್ ಹೊಯ್ಸಳ ಖದರ್ ನೋಡಿದ್ರೆ ಬೆಚ್ಚಿ ಬೀಳ್ತೀರ

ಕನ್ನಡದಲ್ಲಿ ಹೆಸರಾಂತ ಕಲಾವಿದರಿದ್ದಾರೆ. ಆದ್ರೆ, ಕೆಲವೇ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ  ನಟ ರಾಕ್ಷಸ ಎಂಬ ಬಿರುದು ಪಡೆದ ಮೋಸ್ಟ್ ಟ್ಯಾಲೆಂಟೆಡ್ ಆ್ಯಕ್ಟರ್ ಅಂದ್ರೆ ಧನಂಜಯ. ಟಗರು ಸಿನಿಮಾ ನಂತ್ರ ಡಾಲಿ ಧನಂಜಯ ಎಂದೇ ಖ್ಯಾತಿ ಪಡೆದ ಈತ, ಸಖತ್ ಬ್ಯುಸಿ ನಟರಲ್ಲಿ ಒಬ್ಬರಾಗಿದ್ದಾರೆ. ಸ್ಯಾಂಡಲ್​​ವುಡ್​​​​​​​ನಲ್ಲಿ ಮಿಂಚಿದ್ದಲ್ಲದೆ ಟಾಲಿವುಡ್’ಗೂ ಜಿಗಿದು, ಘರ್ಜಿಸಿದ ಕ್ರಿಯೇಟಿವ್ ನಟ.

ಡಾಲಿಯ ನಯಾ ಅವತಾರಗಳನ್ನು ಕಂಡು ಪ್ರೇಕ್ಷಕರು ಕೂಡ ಪೆಚ್ಚಾಗಿದ್ದಾರೆ. ಹೆಡ್ ಬುಷ್ ಚಿತ್ರದ ಟೀಸರ್ ಹಾಗೂ ಮೇಕಿಂಗ್ ಕೂಡ ಸಖತ್ ಥ್ರಿಲ್ ಫೀಲ್ ಕೊಟ್ಟಿದೆ. ಇದ್ರ ಜೊತೆಯಲ್ಲಿ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾದಲ್ಲಿ ಬಾರ್ ಸಪ್ಲೈಯರ್ ಆಗಿ ಡಾಲಿ ಮಿಂಚಲಿದ್ದಾರೆ. ಮಾನ್ಸೂನ್ ರಾಗ ಸಿನಿಮಾದಲ್ಲಿ ಮತ್ತೊಂದು ಪ್ರಯೋಗ. ಈ ಎಲ್ಲಾ ಸಿನಿಮಾಗಳ ನಡುವೆ ತಮ್ಮ ಸಿನಿಕರಿಯರ್’ನ 25ನೇ ಸಿನಿಮಾ ಹೊಯ್ಸಳ ಕೂಡ ಹಲವು ವಿಶೇಷತೆಗಳಿಂದ ಕುತೂಹಲ ಕೆರಳಿಸಿದೆ. ಪೊಲೀಸ್ ರೋಲ್’ನಲ್ಲಿ ಹೊಯ್ಸಳನಾಗಿ ಖಾಕಿ ಖದರ್ ತೋರಲಿದ್ದಾರೆ ಡಾಲಿ.

  • ಹೊಯ್ಸಳ  ಶೂಟಿಂಗ್.. ಅರಮನೆ ನಗರಿಯಲ್ಲಿ ಬೀಡು..!
  • ದಿಲೀಪ್, ಅರ್ಜುನ್ ಮಾಸ್ಟರ್ ಸಾರಥ್ಯದಲ್ಲಿ ಆ್ಯಕ್ಷನ್ ಸೀಕ್ವೆನ್ಸ್

ಟಗರು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಶಿವಣ್ಣನ ಜೊತೆ ಜಿದ್ದಿಗೆ ಬಿದ್ದಿದ್ದ ಡಾಲಿ, ಇದೀಗ ತಾನೇ ಪೊಲೀಸ್ ರೋಲ್ನಲ್ಲಿ ಕಾಣಿಸ್ತಿದ್ದಾರೆ. ಗುರುದೇವ್ ಹೊಯ್ಸಳ ರೋಲ್ನಲ್ಲಿ ಖಡಕ್ ಆಗಿ ಕಾಣಿಸ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಸದ್ಯ ಎಲ್ಲರಿಗೂ ಲಾಠಿಯ ಬಿಸಿ ಮುಟ್ಟಿಸಿದೆ. ಈ ಸಿನಿಮಾದಲ್ಲಿ ಧನಂಜಯ ಪುಂಡರನ್ನು ಬಾಲ ಬಿಚ್ಚದಂತೆ ಹೇಗೆ ಥಳಿಸ್ತಾರೆ ಅನ್ನೋ ಕುತೂಹಲವಂತೂ ಪ್ರೇಕ್ಷಕರಿಗೆ ಇದೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಜಯ್ ನಾಗೇಂದ್ರ ಹೊಯ್ಸಳ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಟಗರು, ಸಲಗ ರೈಟರ್ ಮಾಸ್ತಿಯ ಡೈಲಾಗ್ಸ್ ಸಿನಿಮಾಗಿರಲಿದೆ. ಹೊಯ್ಸಳ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು ಶೂಟಿಂಗ್ ಕೆಲಸದಲ್ಲಿ ಸಖತ್ ಬ್ಯುಸಿ ಇದೆ. ದಿಲೀಪ್ ಸುಬ್ರಮಣ್ಯ, ಅರ್ಜುನ್ ಮಾಸ್ಟರ್ ಸಾರಥ್ಯದಲ್ಲಿ ಅದ್ಭುತವಾಗಿ ಫೈಟ್ ಸೀನ್ ಶೂಟ್ ಮಾಡಲಾಗ್ತಿದೆ.  ಒಟ್ಟಾರೆಯಾಗಿ ಧನಂಜಯ ಅವರ ನ್ಯೂ ಲುಕ್ ಸಖತ್ ಇಂಪ್ರೆಸ್ ಆಗಿದೆ.

ಹೊಯ್ಸಳ ಸಿನಿಮಾದಲ್ಲಿ ಧನಂಜಯ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಸಿಗಲಿದ್ದಾರೆ. ಈ ವಿಚಾರಿದಂದ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮನೆ ಮಾಡಿದೆ. ಇದ್ರ ಜೊತೆಯಲ್ಲಿ ಅಚ್ಯುತ್ಕುಮಾರ್, ಪ್ರತಾಪ್ ನಾರಾಯಣ್, ಅವಿನಾಶ್ ಕೆಜಿಎಫ್, ರಘು ಶಿವಮೊಗ್ಗ ಸೇರಿದಂತೆ ದೊಡ್ಡ ತಾರಾಗಣವಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಆಗಲಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರೋ ಹೊಯ್ಸಳ ಸಿನಿಮಾ ಯಾವ ಲೆವೆಲ್ಗೆ ಸದ್ದು ಮಾಡುತ್ತೋ ಕಾದು ನೋಡ್ಬೇಕು.

ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES