Monday, December 23, 2024

ಹರ್ಷಿಕಾ – ಭುವನ್​ ಕೈಂಕರ್ಯಕ್ಕೆ ‘ಮದರ್ ಥೆರೆಸಾ’ ಗರಿ

ಹರ್ಷಿಕಾ ಪೊಣಚ್ಚ ತಮ್ಮ ಮುದ್ದು ಅಭಿನಯದ ಮೂಲಕವೇ ಕನ್ನಡಿಗರಿಗೆ ಚಿರಪರಿಚಿತ. ತಮ್ಮ ತುಂಟು ಅಭಿನಯದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪ್ರತಿಭಾನ್ವಿತ ಕಲಾವಿದೆ. ಹರ್ಷಿಕಾ ಕೇವಲ ನಟನೆಯಲ್ಲಿ ಮಾತ್ರ ಗುರುತಿಸಿಕೊಳ್ಳದೇ ಸಾಮಾಜಿಕ ಕೆಲಸಗಳಲ್ಲು ತಮ್ಮ ಕೈಲಾದ ಸೇವೆ ಸಲ್ಲಿಸಿದವ್ರು. ಇದೀಗ ಇವ್ರ ಸೇವೆ ಗುರುತಿಸಿ ಪ್ರಶಸ್ತಿ ಹರಿಸಿ ಬಂದಿದೆ.

  • ನಟನೆಗೂ ಸೈ.. ನೊಂದವರ ಸೇವೆಗೂ ಜೈ.. ಕರುಣಾಮಯಿ

ಸ್ಯಾಂಡಲ್​ವುಡ್​​ನಲ್ಲಿ  ಈ ನಟಿ ಸ್ಮೈಲಿಂಗ್​​ ಕ್ವೀನ್​ ಅಂತಾನೆ ಫೇಮಸ್​​​​. ಸದಾ ಲವಲವಿಕೆಯ ಮುದ್ದು ಪೋರಿ ಹರ್ಷಿಕಾ. ತೆರೆಯ ಮೇಲೂ ಅಧ್ಬುತವಾಗಿ ಆ್ಯಕ್ಟ್​ ಮಾಡ್ತಾ ತನಗೆ ಒಲಿದು ಬಂದ ಪಾತ್ರಗಳಿಗೆ ನ್ಯಾಯ ಒದಗಿಸೋ ಪ್ರಾಮಾಣಿಕ ಕಲಾವಿದೆ. ಅವ್ರ ಮುಖದ ಮೇಲಿನ ನಗು ಸ್ವಾರ್ಥವಾಗಿರದೆ ನೊಂದವರ ಆಶಾಕಿರಣವಾಗಿದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡೋ ಮನಸ್ಸುಳ್ಳ ಈ ನಟಿ ಅನೇಕ ಬಡವರಿಗೆ ಧೀನ ದಯಾಳುವಾಗಿದ್ದಾರೆ.

ಇಡೀ ಜಗತ್ತನ್ನೇ ಬಾಧಿಸಿದ ಕೊರೋನಾ ಕಾಲ ನಿಮಗೆಲ್ಲಾ ಮರೆಯೋಕೆ ಸಾಧ್ಯ ಇಲ್ಲ. ಇಂತಹ ಸಮಯದಲ್ಲಿ ನಮ್ಮ ನೆರೆ ಹೊರೆಯವರೇ ಸಹಾಯಕ್ಕೆ ಬಾರದ ಅನೇಕ ನಿದರ್ಶನಗಳು ನಡೆದಿವೆ. ಒಪ್ಪತ್ತಿನ ಊಟಕ್ಕು  ಪರಿತಪಿಸಿದ ಅನೇಕ ಬಡ ಕುಟುಂಬಗಳು ನಲುಗಿ ಹೋಗಿದ್ದನ್ನು ನೋಡಿದ್ದೇವೆ.  ಆಸ್ಪತ್ರೆಗೆ ಸೇರಿದ ಸಮಯದಲ್ಲಿ ಔಷದ ಭರಿಸುವ ಸಾಮರ್ಥ್ಯವಿಲ್ಲದೆ ಕಷ್ಟಪಟ್ಟವರು ಇದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನೆರವಾಗಿ ನಿಂತವರಲ್ಲಿ ಹರ್ಷಿಕಾ ಪೊಣಚ್ಚ ಕೂಡ ಒಬ್ರು.

  • ಭುವನಂ ಸಂಸ್ಥೆಯ ಜೊತೆ ಕೈ ಜೋಡಿಸಿದ್ದ ನಟಿ ಹರ್ಷಿಕಾ
  • ಕಷ್ಟದಲ್ಲಿದ್ದವರಿಗೆ ಕಂಬನಿ ಮಿಡಿದಿದ್ದ ಬಿಗ್​ ಬಾಸ್​​ ಕುವರ

ಫ್ಲೊ…

ಬಿಗ್​ಬಾಸ್​ ಖ್ಯಾತಿಯ ನಟ ಭುವನ್ ಅವರ ಭುವನಂ ಸಂಸ್ಥೆಯು ಕೊರೋನಾ ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿತ್ತು. ಈ ಸಂಸ್ಥೆಯೊಂದಿಗೆ ಕೈಜೋಡಿಸಿದ್ದ ನಟ ಹರ್ಷಿಕಾ , ಬಿಗ್​ ಬಾಸ್​ ಖ್ಯಾತಿಯ ಭುವನ್​ ಜೊತೆ ಸೇರಿ ರಾಜ್ಯದ ನಾನಾ ಭಾಗಗಳಿಗೆ ತೆರಳಿ ನೆರವು ನೀಡಿದ್ರು. ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ದವಸ ಧಾನ್ಯ ಕೊಟ್ಟಿದ್ರು. ಆಸ್ಪತ್ರಗಳಿಗೆ ಪಿಪಿಇ ಕಿಟ್​​, ಔಷದಗಳ ಪೂರೈಕೆ ಮಾಡಿದ್ರು. ಕೊರೋನಾ ಪೇಷೆಂಟ್​​ಗಳ ಜೊತೆ ಕಾಲ ಕಳೆದು ಆತ್ಮ ವಿಶ್ವಾಸ ತುಂಬಿ, ಅವರ ಜೊತೆ ಕುಣಿದು ಕುಪ್ಪಳಿಸಿದ್ರು.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದ ಈ ಜೋಡಿ ಸೋಂಕಿತರಿಗೆ ಧನಸಹಾಯವನ್ನು ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂದ ಅಭಯ ಹಸ್ತ ಚಾಚಿದ್ರು. ಕೆಲಸ ಕೊಡಿಸಿವುದು ಮಾತ್ರವಲ್ಲದೆ, ಮೊಬೈಲ್​ ಆಕ್ಸಿಜನ್​ ಸಿಲಿಂಡರ್​ ವ್ಯವಸ್ಥೆ ಕೂಡ ಮಾಡಿದ್ರು. ತಮ್ಮದೇ ಆದ ರೀತಿಯಲ್ಲಿ ಕೈಲಾದಷ್ಟು ಸಹಾಯ ಮಾಡಿದ್ದ ಜೋಡಿಗೆ ಮದರ್​ ತೆರೆಸಾ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ಈ ಪ್ರಶಸ್ತಿಯನ್ನು ದಿ ನ್ಯುಸ್​ ಪೇಪರ್ಸ್​ ಅಸೋಸಿಯೇಷನ್​​ ಆಫ್​ ಕರ್ನಾಟಕ ನೀಡಿ ಗೌರವಿಸಿದೆ.

ಭುವನಂ ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿರುವ ಹರ್ಷಿಕಾ ಪೊಣಚ್ಚ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಸಂತಸದ ಕ್ಷಣಗಳನ್ನು ತಮ್ಮ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಸಿನಿಮಾ, ಹಣದ ಹಿಂದೆ ಓಡುವ ಅನೇಕ ವ್ಯಕ್ತಿಗಳ ಮುಂದೆ ಕಲಾಸೇವೆಯ ಜೊತೆ ಜನಪರಸೇವೆಯಲ್ಲಿ ಬ್ಯುಸಿ ಇರೋ ಹರ್ಷಿಕಾ ಪೊಣಚ್ಚ ಹಾಗೂ ಭುವನ್​ ಅವ್ರಿಗೆ ದೇವರು ಸೇವೆ ಮಾಡುವ ಶಕ್ತಿ ನೀಡಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES