ಬೆಂಗಳೂರು : ಎಸಿಬಿ ದಾಳಿಗೆ ಬಹುಕೋಟಿ IMA ಹಗರಣದ ಲಿಂಕ್ ಆಗಿದ್ದು, ED ಸಾಕ್ಷ್ಯಾಧಾರಗಳ ಮೇಲೆ ACB ಪೊಲೀಸರು ದಾಳಿ ಮಾಡಿದ್ದಾರೆ.
2009ರ ಜೂನ್ 6ರಂದು IMA ಮಾಲೀಕ ಮನ್ಸೂರ್ ಅಲಿ ಖಾನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 420, 120 B ಅಡಿಯಲ್ಲಿ ಮನ್ಸೂರ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆ ಆ್ಯಕ್ಟ್ ಅಡಿಯಲ್ಲಿ EDಯಿಂದ ಮನ್ಸೂರ್ ವಿರುದ್ಧ ಕೇಸ್ ದಾಖಲಾಗಿದ್ದು, ED ವಿಚಾರಣೆ ವೇಳೆ ಫ್ಲ್ತಾಟ್ ಖರೀದಿ ಸಂಬಂಧ ಜಮೀರ್ ಗೆ ಮನ್ಸೂರ್ ಮೂಲ ಬೆಲೆಗಿಂತ ಹೆಚ್ಚಿನ ಹಣ ನೀಡಿದ್ದು ಬಹಿರಂಗವಾಗಿದೆ.
ಇನ್ನು, 2021ರ ಆಗಸ್ಟ್ 8 ಹಾಗೂ 9ರಂದು ಜಮೀರ್ ನಿವಾಸದ ಮೇಲೆ ED ಅಧಿಕಾರಿಗಳ ದಾಳಿ, ಹಲವು ಮಹತ್ವದ ದಾಖಲೆಗಳು ವಶಕ್ಕೆ ಪಡೆದುಕೊಂಡಿದ್ದು, ಜಮೀರ್ ನಿವಾಸದ ಮೇಲಿನ ED ದಾಳಿ ವೇಳೆ ಆದಾಯಕ್ಕೂ ಮೀರಿದ ಅಕ್ರಮ ಹಣ, ಆಸ್ತಿ ದಾಖಲೆಗಳು ಪತ್ತೆಯಾಗಿದೆ. 2022ರ ಫೆಬ್ರವರಿ 28ರಂದು ಮನಿ ಲಾಂಡರಿಂಗ್ ಆ್ಯಕ್ಟ್-2002ರ ಅನ್ವಯ ED ನಿರ್ದೇಶನದ ಮೇರೆಗೆ ಜಮೀರ್ ವಿರುದ್ಧ ಅಕ್ರಮ ಆಸ್ತಿ ಸಂಗ್ರಹ ಕೇಸ್ ದಾಖಲಿಸಲು, ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ED ತನಿಖೆ ವೇಳೆ ಜಮೀರ್ ಅಹ್ಮದ್ ಖಾನ್ ಕುರಿತು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಜಮೀರ್ ಆಸ್ತಿ ವಿವರ ಕಂಡು ED ಅಧಿಕಾರಿಗಳು ಫುಲ್ ಶಾಕ್ ಆಗಿದ್ದಾರೆ. ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿ ಪ್ರಕಾರ ಜಮೀರ್ ತಮ್ಮ ಆದಾಯಕ್ಕೂ ಮೀರಿ ಬರೋಬ್ಬರಿ ಶೇ.2031ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ! ED ಅಧಿಕಾರಿಗಳಿಗೆ 87 ಕೋಟಿ 44 ಲಕ್ಷದ 5 ಸಾವಿರದ 57 ರೂಪಾಯಿ ಅಕ್ರಮ ಪತ್ತೆಯಾಗಿದೆ.
ಅದಲ್ಲದೇ, 2022ರ ಏಪ್ರಿಲ್ 20ರಂದು ಜಮೀರ್ ಕೇಸ್ ಸಂಬಂದ ACB ಅಧಿಕಾರಿಗಳನ್ನ ದೆಹಲಿಗೆ ಕರೆಸಿಕೊಂಡ ED ಅಧಿಕಾರಿಗಳು, ಜಮೀರ್ ಅಕ್ರಮ ಆಸ್ತಿ, ಹಣದ ಕುರಿತು ಎಸಿಬಿ ಅಧಿಕಾರಿಗಳಿಗೆ ಸಂಪೂರ್ಣ ಲಿಸ್ಟ್, ಮಾಹಿತಿ ನೀಡಿದ ED ಅಧಿಕಾರಿಗಳು ತಾವು ಸಿದ್ಧಪಡಿಸಿದ್ದ ಅಕ್ರಮ ಆಸ್ತಿ ವಿವರಗಳ ವರದಿ, ಅದಕ್ಕೆ ಪೂರಕವಾದ ದಾಖಲೆಗಳು ಎಸಿಬಿಗೆ ಹಸ್ತಾಂತರ ಮಾಡಿದ್ದು, ಜಾರಿ ನಿರ್ದೇಶನಾಲಯ ನೀಡಿದ ವರದಿ, ನಿರ್ದೇಶನದ ಅನ್ವಯ 2022ರ ಮೇ 5ರಂದು ಜಮೀರ್ ಅಹ್ಮದ್ ವಿರುದ್ಧ ಎಸಿಬಿಯಲ್ಲಿ FIR ದಾಖಲಾಗಿದೆ.