Wednesday, January 22, 2025

ರಾಜೀನಾಮೆ ಕೇಳೋಕೆ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು : ಗೃಹಸಚಿವರ ರಾಜೀನಾಮೆ ಕೇಳೋಕೆ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ ಎಂದು ಕಾಂಗ್ರೆಸ್​​ ನಾಯಕರಿಗೆ ಸಿಎಂ ಬೊಮ್ಮಾಯಿ‌ ತಿರುಗೇಟು ನೀಡಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆಗೆ ಕೆಪಿಸಿಸಿ ಅಧ್ಯಕ್ಷ ಆಗ್ರಹ ವಿಚಾರಕ್ಕೆ ಸಂಬಂಧಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ ಅಧಿಕಾರ ಕಾಲದಲ್ಲೂ ಪಿಎಸ್ ಐ ಹಗರಣವಾಗಿತ್ತು. ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಹಿರಿಯ ಅಧಿಕಾರಿ ಆರೋಪಿಯಾಗಿದ್ದರು. ಆಗ ಯಾವುದೇ ಕ್ರಮ ತಗೊಂಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಬಲಕ್ಕೆ ನಿಂತು ಡಿಕೆಶಿ ಆರೋಪಕ್ಕೆ ಸಿಎಂ ಟಾಂಗ್​​ ನೀಡಿದ್ದಾರೆ.

ಇನ್ನು ನಾವು ನಮ್ಮ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮ್ಮದು ಜಿರೋ  ಟಾಲಾರೆನ್ಸ್ಯಾವುದನ್ನು ಸಹಿಸಿಕೊಳ್ಳುವುದಿಲ್ಲ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಇದ್ದಿದ್ರೆ ಸಿಸ್ಟಮೆಟಿಕ್ ಆಗಿ ಪ್ರಕರಣ ಮುಚ್ಚಿ ಹಾಕ್ತಿದ್ದರು. ಹೀಗಾಗಿ ಅವರಿಗೆ ರಾಜೀನಾಮೆ ಕೇಳೋಕೆ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್ ಎಸ್ ಎಲ್ ವರದಿ ತರಿಸಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದ್ದೆ. ನಮ್ಮ ಗೃಹ ಸಚಿವರು ದಕ್ಷತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬಂಧಿಸಿರುವ 50 ರಲ್ಲಿ 20 ಜನ ಪೋಲಿಸ್ ಅಧಿಕಾರಿಗಳಾಗಿದ್ದರೆ. ರಾಜೀನಾಮೆ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ಖಡಕ್​​ ಆಗಿ ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES