Wednesday, January 22, 2025

ಗಾಡ್​ಫಾದರ್​ಗೆ ಮೋದಿ ಗಾಳ; ಚಿರು ಪಾಲಿಟ್ರಿಕ್ಸ್..?

ಮೆಗಾಸ್ಟಾರ್ ಚಿರಂಜೀವಿ ಈಗ ಟಾಲಿವುಡ್​​ನ ಗಾಡ್​ಫಾದರ್.. ಅದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೀಗ ಈ ಮುಠಾಮೇಸ್ತ್ರಿ ಮೇಲೆ ಪ್ರಧಾನಿ ಮೋದಿ ಕಣ್ಣು ಬಿದ್ದಿದೆ. ಮತ್ತೆ ಪಾಲಿಟಿಕ್ಸ್​ಗೆ ಅವ್ರನ್ನ ಕರೆತರೋ ಪ್ರಯತ್ನಗಳು ನಡೀತಿವೆ. ಹಾಗಾದ್ರೆ ಚಿರು ಮತ್ತೆ ರಾಜಕಾರಣಕ್ಕೆ ಕಂಬ್ಯಾಕ್ ಮಾಡ್ತಾರಾ..? ಗಾಡ್​ಫಾದರ್​ ಸಿನಿಮಾಗೂ ರಿಯಾಲಿಟಿಗೂ ಇರೋ ಲಿಂಕ್ ಏನು ಅಂತೀರಾ..?

ಗಾಡ್​ಫಾದರ್​ಗೆ ಮೋದಿ ಗಾಳ.. ಚಿರು ಪಾಲಿಟ್ರಿಕ್ಸ್..?

ಮೆಗಾಸ್ಟಾರ್ ಸಿನಿಮಾ & ರಿಯಲ್ ಲೈಫ್​ನಲ್ಲಿ ಸಾಮ್ಯತೆ

ಆತ್ಮೀಯವಾಗಿ ಮಾತನಾಡಿಕೊಂಡ ಮೋದಿ- ಚಿರು

ಬಿಜೆಪಿ ಮುಖೇನ ರಾಜಕಾರಣಕ್ಕೆ ಚಿರು ಕಂಬ್ಯಾಕ್..?

ಭಾರತೀಯ ಚಿತ್ರರಂಗದಲ್ಲಿ ಮೆಗಾಸ್ಟಾರ್ ಅಂದಾಕ್ಷಣ ಥಟ್ ಅಂತ ಮೈಂಡ್​ಗೆ ಬರೋದು ಚಿರಂಜೀವಿ ಒಬ್ರೇ. ಕಾರಣ ಅವ್ರ ಸಿನಿಮಾಗಳು, ಅದ್ರಲ್ಲಿನ ಪಾತ್ರಗಳು, ಡ್ಯಾನ್ಸ್, ಫೈಟ್ಸ್, ಸ್ಟೈಲು, ಮ್ಯಾನರಿಸಂ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದೆ. ಕೋಟ್ಯಂತರ ಅಭಿಮಾನಿಗಳನ್ನ ಮನಸೂರೆಗೊಂಡಿದೆ. ಹಾಗಾಗಿಯೇ ಅವ್ರ ಮಗ ಸ್ಟಾರ್ ಆದ್ರೂ, ಅವ್ರು ಮಾತ್ರ ಮೆಗಾಸ್ಟಾರ್ ಆಗಿ ಮಿಂಚ್ತಿದ್ದಾರೆ. ಅಂದಹಾಗೆ 149 ಸಿನಿಮಾಗಳನ್ನ ಮಾಡಿದ ಅವ್ರು ಪಾಲಿಟಿಕ್ಸ್ ಕಡೆ ವಾಲಿದ್ರು. ಪ್ರಜಾರಾಜ್ಯಂ ಪಾರ್ಟಿ ಕಟ್ಟಿದ್ರು. ಕೊನೆಗೆ ಕಾಂಗ್ರೆಸ್ ಪಕ್ಷ ಸೇರಿ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು.

ಅದ್ಯಾಕೋ ರಾಜಕಾರಣ ಅವ್ರಿಗೆ ಆಗಿಬರಲಿಲ್ಲ. ಅದ್ರಿಂದ ಬೇಸತ್ತು, ಕೊನೆಗೆ ಕಲಾದೇವಿಯ ಕೈ ಮುಗಿದು ಮತ್ತೆ ವಾಪಸ್ಸಾದ್ರು. ಖೈದಿ ನಂ. 150 ಚಿತ್ರದಿಂದ ತಮ್ಮ 150ನೇ ಸಿನಿಮಾಗಾಗಿ ಮತ್ತೆ ಬಣ್ಣ ಹಚ್ಚಿ, ಚಿರು ಈಸ್ ಬ್ಯಾಕ್ ಅಂದ್ರು. ಸೈರಾ ನರಸಿಂಹ ರೆಡ್ಡಿ, ಆಚಾರ್ಯ ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಮಾಡಿದ್ರೂ ಹೇಳಿಕೊಳ್ಳೋ ಸಕ್ಸಸ್ ಸಿಗಲಿಲ್ಲ. ಇದೀಗ ಗಾಡ್​ಫಾದರ್ ಆಗಲು ಹೊರಟಿದ್ದಾರೆ. ಇದು ಸಿನಿಮಾ ಟೈಟಲ್ ಆದ್ರೂ ಸಹ, ಟಾಲಿವುಡ್ ಪಾಲಿಗೆ ಇವ್ರೇ ಸದ್ಯದ ಗಾಡ್​ಫಾದರ್.

ಮಲಯಾಳಂ ಬ್ಲಾಕ್ ಬಸ್ಟರ್ ಹಿಟ್ ಲೂಸಿಫರ್ ರಿಮೇಕ್ ಇದಾಗಿದ್ದು, ಮೋಹನ್​ಲಾಲ್ ಪಾತ್ರವನ್ನು ಚಿರು ನಿಭಾಯಿಸ್ತಿದದ್ದಾರೆ. ರಾಮ್ ಚರಣ್ ಅವ್ರೇ ಅಪ್ಪನಿಗಾಗಿ ಸಿನಿಮಾ ನಿರ್ಮಿಸ್ತಿದ್ದು, ಇದು ರಾಜಕಾರಣದ ಆಂತರಿಕ ಹಾಗೂ ಬಾಹ್ಯ ಯುದ್ಧದ ಕುರಿತ ಕಥಾನಕ ಆಗಿದೆ. ಅಲ್ಲಿಗೆ ಪಾಲಿಟಿಕ್ಸ್​​ನಿಂದ ಹೊರಬಂದಿರೋ ಚಿರುಗೆ, ಸಿನಿಮಾ ಮೂಲಕ ಮತ್ತೆ ಪಾಲಿಟಿಕ್ಸ್ ಸುರುಳಿಯಂತೆ ಸುತ್ತಿಕೊಳ್ತಿದೆ. ಇದು ಸಿನಿಮಾ ಆದ್ರೂ ನಿಜ ಜೀವನಕ್ಕೆ ಸಾಕಷ್ಟು ಸಾಮ್ಯತೆ ಕಾಣುವಂತಿದೆ.

ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ- ಚಿರು ಒಂದೇ ವೇದಿಕೆಯಲ್ಲಿ ಬಹಳ ಆತ್ಮೀಯವಾಗಿ ಮಾತನಾಡಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲೂರಿ ಸೀತಾರಾಮ ರಾಜು ಅವ್ರ 125ನೇ ಜಯಂತ್ಯೋತ್ಸವ ಪ್ರಯುಕ್ತ ಆಂಧ್ರದ ಭೀಮಾವರಂಗೆ ಆಗಮಿಸಿದ್ದ ಮೋದಿಗೆ ಚಿರಂಜೀವಿ ಅವ್ರೇ ಶಾಲು ಹಾಕಿ ವೇದಿಕೆಗೆ ಬರಮಾಡಿಕೊಂಡ್ರು. ಅದಕ್ಕೆ ಸಿಎಂ ಜಗನ್ ಕೂಡ ಸಾಕ್ಷಿ ಆಗಿದ್ರು.

ಒಟ್ಟಾರೆ ಸಿಕ್ಕಾಪಟ್ಟೆ ವರ್ಚಸ್ಸು ಇರೋ ಚಿರಂಜೀವಿ ಅವ್ರಿಗೆ ಮೋದಿ ಗಾಳ ಹಾಕಿದ್ದಾರೆ. ಬಿಜೆಪಿಗೆ ಬರುವಂತೆ ಕಾರ್ಪೆಟ್ ಹಾಸಿದ್ದಾರೆ ಅನ್ನೋದು ಸದ್ಯದ ಟಾಕ್. ಆದ್ರೆ ಮೆಗಾಸ್ಟಾರ್ ಮತ್ತೆ ರಾಜಕಾರಣದತ್ತ ವಾಲುತ್ತಾರಾ ಇಲ್ವಾ ಅನ್ನೋದು ಯಕ್ಷ ಪ್ರಶ್ನೆ. ಇನ್ನು ಗಾಡ್​ಫಾದರ್ ಸಿನಿಮಾದ ಕಥೆ ರಾಜಕಾರಣದ ಸುತ್ತಲೇ ಸುತ್ತೋ ಇಂಟರೆಸ್ಟಿಂಗ್ ಸ್ಟೋರಿಲೈನ್ ಹೊಂದಿದ್ದು, ಸಲ್ಮಾನ್ ಖಾನ್ ಕೂಡ ಇದ್ರಲ್ಲಿ ಚಿರುಗೆ ಸಾಥ್ ನೀಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES