ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ನಿತ್ಯ ಕಾಡುವ ತಲೆನೋವು ಎಂದರೆ ಅದು ಟ್ರಾಫಿಕ್. ಒಮ್ಮೆ ಟ್ರಾಫಿಕ್ನಲ್ಲಿ ಸಿಲುಕಿದ್ರೆ, ಸಾಕು ಒಂದು ಕಿ.ಮೀ. ಪ್ರಯಾಣ ನೂರಾರು ಮೈಲುಗಳ ರೀತಿಯ ಅನುಭವವಾಗುತ್ತದೆ. ಸದ್ಯ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸ ಪ್ಲ್ಯಾನ್ ಒಂದು ರೆಡಿಯಾಗ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಮಾರ್ಗಗಳನ್ನು ಕಂಡುಕೊಂಡಿದೆ. ಪೊಲೀಸರು ಸಹ ಹೆಚ್ಚು ವಾಹನ ದಟ್ಟಣೆ ಉಂಟಾಗುವ ಸ್ಥಳಗಳಲ್ಲಿ 24*7 ಅಂತೆ ಸಿಬ್ಬಂದಿಯನ್ನ ನೇಮಿಸಿರುತ್ತಾರೆ. ಅದಾಗಿಯೂ ಬೆಂಗಳೂರು ಟ್ರಾಫಿಕ್ ಮಾತ್ರ ಕಡಿಮೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ನಗರದ ಜನಸಂಖ್ಯೆಯ ಏರಿಕೆ ಜೊತೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರಿನ ಹೃದಯ ಭಾಗದಲ್ಲಿ ಹೆಚ್ಚಿದ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಮತ್ತು ಅಪಘಾತ ನಿಯಂತ್ರಣಕ್ಕಾಗಿ ನಗರದ ಪ್ರಮುಖ ನಾಲ್ಕು ಭಾಗದಳಲ್ಲಿ, ನೂತನ ನಾಲ್ಕು ಮೇಲ್ಸೇತುವೆಗಳು ತಲೆ ಎತ್ತಲಿದ್ದು, ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ಗಳಿಂದ ಮುಕ್ತಿ ಸಿಗಲಿದೆ.
ಯಾವ ಮೇಲ್ಸೇತುವೆಗೆ ಎಷ್ಟು ವೆಚ್ಚ? :
1. ಇಟ್ಟಮಡು ಜಂಕ್ಷನ್ನಿಂದ ಕಾಮಾಕ್ಯ ಜಂಕ್ಷನ್ – 40.50 ಕೋಟಿ
2. ಬಸವೇಶ್ವರ ನಗರದಿಂದ ಪಶ್ಚಿಮ ಕಾರ್ಡ್ ರಸ್ತೆ – 30.64 ಕೋಟಿ
3. ಹಡ್ಸನ್ ವೃತ್ತದಿಂದ ಮಿನರ್ವ ವೃತ್ತದ ಮಾರ್ಗ (ಜೆ.ಸಿ ರಸ್ತೆ) – 20.64 ಕೋಟಿ
4. ಕನಕಪುರ ರಸ್ತೆಯಿಂದ ಸಾರಕ್ಕಿ ಜಂಕ್ಷನ್ -130 ಕೋಟಿ
5. ಒಟ್ಟು – 404.14 ಕೋಟಿ ವೆಚ್ಚದಲ್ಲಿ ನಾಲ್ಕು ಫ್ಲೈಓವರ್ಗಳ ನಿರ್ಮಾಣ
ನಗರದಲ್ಲಿ ಈಗಾಗಲ್ಲೇ 45 ಮೇಲ್ಸೇತುವೆಗಳಿದ್ದು, ಇದೀಗ ನೂತನ ನಾಲ್ಕು ಮೇಲ್ಸೇತುವೆಗಳು ತಲೆ ಎತ್ತಲಿದೆ. ಇಟ್ಟಮಡುಗು ಜಂಕ್ಷನ್, ಕಾಮಾಕ್ಯ ಜಂಕ್ಷನ್, ಸಾರಕ್ಕಿ ಜಂಕ್ಷನ್, ಕನಕಪುರ ರಸ್ತೆ, ಜೆಸಿ ರಸ್ತೆ ಹಾಗೂ ವೆಸ್ಟೆ ಆಫ್ ಕಾರ್ಡ್ ರಸ್ತೆ, ಬಸವೇಶ್ವರ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಸಲ್ಲಿಸಿದ್ದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಅಮೃತ್ ನಗರೋತ್ಥಾನ ಯೋಜನೆಯಡಿ 404.14 ಕೋಟಿ ನೀಡಲಿದೆ.
ಬಿಬಿಎಂಪಿ ಯೋಜನಾ ವಿಭಾಗದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಿಕೊಂಡು ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರ ಸೂಚಿಸಿದೆ.
ನೂತನ ನಾಲ್ಕು ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿ 404 ಕೋಟಿ ಅನುದಾನ ನೀಡಿದೆ. ಈಗಾಗಿ ಮೇಲ್ಸೇತುವೆಗಳ ಪ್ರಾಥಮಿಕ ಹಂತದ ಪ್ಲಾನ್ಗಳ ಕಾರ್ಯಗಳು ನಡೆಯುತ್ತಿದೆ. ಇನ್ನು ಎತ್ತರದ ಮೇಲ್ಸೇತುವೆ ನಿರ್ಮಿಸಬೇಕಿದ್ದು, ಎತ್ತರ, ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತು ವಿವಿಧ ಇಲಾಖೆಗಳ ಜೊತೆ ಚರ್ಚೆಗಳು ಮಾಡಬೇಕಿದೆ.
ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಟ್ರಾಫಿಕ್ ಕಿರಿಕಿರಿಯಿಂದ ಅನುಭವಿಸೋ ಕಷ್ಟ ಅಷ್ಟಿಷ್ಟಲ್ಲ. ಸದ್ಯ ಇದಕ್ಕೆಲ್ಲ ಬ್ರೇಕ್ ಹಾಕಲು, ನಗರದಲ್ಲಿ ನಾಲ್ಕು ಫ್ಲೈ ಓವರ್ಗಳು ತಲೆ ಎತ್ತುತ್ತಿದ್ದು, ಟ್ರಾಫಿಕ್ ಕಿರಿಕಿರಿಯ ತಲೆನೋವು ತಪ್ಪಲಿದೆ. ಆದ್ರೆ ಈ ಕಾಮಗಾರಿ ನಡೀಬೇಕಾದ್ರೆ ಮತ್ತಷ್ಟು ಟ್ರಾಫಿಕ್ ಉಂಟಾಗಲಿದ್ದು ಆದಷ್ಟು ಬೇಗ ಕಾಮಗಾರಿ ಮುಗಿಸಿದ್ರೆ ಒಳ್ಳೆಯದು.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು