Thursday, December 26, 2024

ಮದ್ಯ ಪ್ರಿಯರಿಗೆ ಶಾಕ್ ಕೊಡಲಿರುವ ಮದ್ಯ ಮಾರಾಟಗಾರರು ?

ಬೆಂಗಳೂರು : ಕೆಎಸ್ಬಿಸಿಎಲ್ ಡಿಪೋಗಳಿಂದ ಮದ್ಯ ಖರೀದಿಸದಿರಲು ಬಾರ್ ಮಾಲೀಕರು ನಿರ್ಧಾರ ಮಾಡಿದ್ದಾರೆ.

ಮದ್ಯ ಪ್ರಿಯರ ಜೊತೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿದ್ದು, ನಾಳೆಯಿಂದ ಬೆಂಗಳೂರಿನಲ್ಲಿ ಮದ್ಯ ಸಿಗೋದು ಅನುಮಾನ ಉಂಟಾಗಿದೆ. ಬೆಂಗಳೂರಿನ ಕೆಎಸ್ಬಿಸಿಎಲ್ ಡಿಪೋಗಳಿಂದ ಮದ್ಯ ಖರೀದಿಸದಿರಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯ ಖರೀದಿ ಮಾಡದಿರಲು ನಿರ್ಧಾರಿಸಿದ್ದಾರೆ.

ಇನ್ನು, ಸರ್ಕಾರದ ಇಂಡೆಂಟ್ ಪದ್ದತಿಗೆ ಮದ್ಯದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೀಗಾಗಿ ಕೇವಲ ಸ್ಟಾಕ್ ಇಟ್ಟಿಕೊಂಡಿರೋ ಅಂಗಡಿಗಳಲ್ಲಿ ಮದ್ಯ ಮಾರಟ ಮಾಡಲಾಗಿದೆ. ಮದ್ಯ ಖರೀದಿ ನಿಂತ್ರೆ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟದ ಭೀತಿ ಉಂಟಾಗಿದೆ. ನೂತನ ಸಾಫ್ಟ್‌ವೇರ್ ವಿರುದ್ದ ಕಳೆದ ಒಂದೂವರೆ ತಿಂಗಳಿಂದ ಮದ್ಯ ಮಾರಾಟಗಾರರು ಹೋರಾಟ ಮಾಡುತ್ತಿದ್ದಾರೆ. ಆದರೆ ವೆಬ್ ಇಂಡೆಂಟ್ ಲೋಪ ದೋಷ ಸರಿಪಡಿಸದ ಸರ್ಕಾರ ಒಂದು ಕಡೆ ಲೈಸೆನ್ಸ್ ರಿನೀವಲ್ ಪ್ರಾಬ್ಲಂ ಆಗಿದ್ದು, ಮತೊಂದು ಕಡೆ ಸ್ಟಾಕ್ ಇಂಡೆಂಟ್ ಪ್ಲಾಬ್ಲಂ ಉಂಟಾಗಿದೆ. ಎಂ.ಎಸ್.ಐ. ಎಲ್ ನ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ತಿಂಗಳಿಗೆ 2 ಸಾವಿರ ಕೋಟಿ ನಷ್ಟ ಉಂಟಾಗಿದೆ.

RELATED ARTICLES

Related Articles

TRENDING ARTICLES