Wednesday, January 22, 2025

ಕಿಚ್ಚು ಹಚ್ಚಿದೆ ‘ವಿಕ್ರಾಂತ್​​ ರೋಣ’ ಮೆಚ್ಚಿದ ಜೋಗುಳ ಗೀತೆ

ರಾ.ರಾ.ರಕ್ಕಮ್ಮ ಹಾಡಿಗೆ ಕುಂತಲ್ಲೇ ಮೈ ಕೈ ಕುಣಿಸಿ ಸುಸ್ತಾಗಿದ್ದ ಚಿತ್ರರಂಗ ಮತ್ತೊಮ್ಮೆ ರಾಜಕುಮಾರಿ ಗೀತೆಗೆ ಮರುಳಾಗಿದೆ. ವಿಕ್ರಾಂತ್​ ರೋಣ ಸಿನಿಮಾದ ಎರಡನೇ ಲಿರಿಕಲ್​ ಗೀತೆ ರಿಲೀಸ್ ಆಗಿದ್ದು, ಈ ಹಾಡಿನ ಮೋಡಿಗೆ ಸಂಗೀತ ಪ್ರೇಮಿಗಳು ತಲೆದೂಗುತ್ತಿದ್ದಾರೆ. ಬೆಚ್ಚಿಬೀಳಿಸಲು ರೆಡಿಯಾಗಿದ್ದ ಗುಮ್ಮ ಜೋಗುಳ ಗೀತೆಯ ಮೂಲಕ ಹಾಡಿ ಮಲಗಿಸುತ್ತಿದ್ದಾನೆ.

  • ರಾಜಕುಮಾರಿಯ ಗೀತೆಗೆ ತಲೆದೂಗಿದ ಚಿತ್ರಪ್ರೇಮಿಗಳು

ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ಯ ಚಾಲ್ತಿಯಲ್ಲಿರೋ ಹೆಸರು ವಿಕ್ರಾಂತ್​ ರೋಣ. ಗಲ್ಲಿ ಗಲ್ಲಿಗಳಲ್ಲೂ, ಸ್ಯಾಂಡಲ್​​ವುಡ್​​ನ ಮೂಲೆ  ಮೂಲೆಯಲ್ಲು ಸೌಂಡ್​ ಮಾಡ್ತಿರೋ ವಿಕ್ರಾಂತ್​ ರೋಣನ  ಹವಾ ಕಡಿಮೆ ಏನಿಲ್ಲ. ಕಿಚ್ಚ ಹಚ್ಚಿದ ಕಿಚ್ಚಿನ ಕಿಡಿ ವರ್ಲ್ಡ್​ ವೈಡ್​​ ಹಬ್ಬಿ ಸುದ್ದಿ ಮಾಡ್ತಾ ಇದೆ. ಐ ಕಾಂಟ್​ ವೈಟ್​​ ಅಂತಿದೆ ಸಿನಿಮದುನಿಯಾ. ಗುಮ್ಮ ಕೂಡ ಬೆಚ್ಚಿ ಬೆವರಿಳಿಸೋಕೆ ತಯಾರಿ ನಡೆಸಿದ್ದಾನೆ. ಈ ನಡುವೆ ಚಿತ್ರದ ರಾಜಕುಮಾರಿ ಗೀತೆ ರಿಲೀಸ್​ ಆಗಿ ಹಲ್​ಚಲ್​ ಎಬ್ಬಿಸ್ತಿದೆ.

ಮೊದಲು ರಿಲೀಸ್ ಆಗಿದ್ದ ರಾ.ರಾ ರಕ್ಕಮ್ಮ ಹಾಡು ಸಖತ್​ ಹಿಟ್ ಆಗಿದೆ. ಇನ್ಯಾವ ಹಾಡು ಮತ್ತೆ ದಾಖಲೆ ಬರೆಯುತ್ತೋ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ರಾಜಕುಮಾರಿ ಜೋಗುಳ ಗೀತೆ ಸರ್ಪ್ರೈಸ್​ ನೀಡಿದೆ. ಕಿಚ್ಚ ಮೆಚ್ಚಿಕೊಂಡಿದ್ದ ಈ ಹಾಡು ನಿರೀಕ್ಷೆಗೂ ಮೀರಿ ಸದ್ದು ಮಾಡ್ತಿದೆ. ವಿಕ್ರಾಂತ್​ ರೋಣ ಹೇಳಿದಂತೆ ಈ ಹಾಡನ್ನ ಅಭಿಮಾನಿಗಳು ರಿಪೀಟ್​ ಮೋಡ್​​ನಲ್ಲಿ ಕೇಳಿ ಎಂಜಾಯ್​ ಮಾಡ್ತಿದ್ದಾರೆ. ವಿಜಯ್​ ಪ್ರಕಾಶ್​ ಮೆಲಡಿ ಕಂಠದ ಆಲಾಪನೆಯಲ್ಲಿ ತೇಲ್ತಿದ್ದಾರೆ.

  • ರಾ.ರಾ ರಕ್ಕಮ್ಮ ಹಿಟ್..ರಾಜಕುಮಾರಿ ಸೂಪರ್​ ಹಿಟ್​
  • ಕನಸಿನ ತೇರು ಏರಿ ಅಪ್ಪ – ಮಗಳ ಇರುಳಿನ ಸವಾರಿ

ವಿಕ್ರಾಂತ್​ ರೋಣ ಸಿನಿಮಾದಲ್ಲಿ  ಹಿಂದೆಂದೂ ನೋಡಿರದ ವಿನೂತನ ಪ್ರಯತ್ನ ಮಾಡಲಾಗಿದೆ. ಫ್ಯಾಂಟಸಿ ಜಗತ್ತಿನ ಮಹಾದೃಶ್ಯವೈಭವವನ್ನು ಈ ಸಿನಿಮಾದಲ್ಲಿ ನೀವು ನೋಡಬಹುದು. ಟೆಕ್ನಿಕಲ್ಲಿ ಅಧ್ಬುತವಾಗಿ ಮೂಡಿಬರ್ತಾ ಇರೋ 3ಡಿ ವರ್ಷನ್​ ಸಿನಿಮಾ ವಿಕ್ರಾಂತ್​ ರೋಣ. ಈ ಸಿನಿಮಾಗಾಗಿ ಇಡೀ ಜಗತ್ತು ಎದುರು ನೋಡ್ತಾ ಇದೆ. ಪ್ರತಿ ಹೆಜ್ಜೆಯಲ್ಲೂ ಒಂದಿಲ್ಲೊಂದು ವಿಶೇಷತೆಗಳಿಂದ ದೊಡ್ಡ ಸುದ್ದಿ ಮಾಡ್ತಾ ಇರೋ ರೋಣನ ಆರ್ಭಟ ಯಾವ ಲೆವೆಲ್​​ ತಲುಪುತ್ತೆ ಅನ್ನೋ ಕುತೂಹಲ ಕೂಡ ಎಲ್ಲರಲ್ಲೂ ಇದೆ.

ರಾ.ರಾ ರಕ್ಕಮ್ಮ ಹಾಡು ಹಿಟ್​ ಆದ್ರೆ,  ರಾಜಕುಮಾರಿ ಜೋಗುಳ ಹಾಡು ಸೂಪರ್​ ಹಿಟ್​ ಅಂತಿದೆ ಚಿತ್ರಲೋಕ. ಅಪ್ಪ ಮಗಳ ಬಾಂಧ್ಯವ್ಯವನ್ನು ಈ ಹಾಡಲ್ಲಿ ಅಚ್ಚಕಟ್ಟಾಗಿ ತೋರಿಸಲಾಗಿದೆ. ಮುದ್ದಿನ ರಾಜಕುಮಾರಿಯನ್ನು ಮಲಗಿಸ್ತಾ ಇರೋ ತಂದೆ ನಾನಿದ್ದೀನಿ ಎದರಬೇಡ ಎಂದು ಧೈರ್ಯ ತುಂಬ್ತಾ ಇದ್ದಾನೆ. ತುಂಬಾ ಸೊಗಸಾಗಿ ಮೂಡಿ ಬಂದಿರೋ ಈ ಹಾಡಿಗೆ ಖ್ಯಾತ ಗಾಯಕ ವಿಜಯ್​ ಜೀವ ತುಂಬಿದ್ದಾರೆ. ಈ ಮುಂಚೆ ಕಿಚ್ಚ ಕೂಡ ಈ ಹಾಡು ನನ್ನ ಮೋಸ್ಟ್ ಫೇವರಿಟ್​ ಅಂತಾ ಟ್ವೀಟ್​ ಮಾಡಿದ್ರು.

ಅಜನೀಶ್​ ಲೋಕನಾಥ್​ ಮ್ಯೂಸಿಕ್​ ಕಂಪೋಸಿಂಗ್​ ನಲ್ಲಿ ಅದ್ಭುತವಾಗಿ ಟ್ಯೂನ್​ ಮಾಡಲಾಗಿರುವ ಲುಲ್ಲುಬಿ ಹಾಡಿಗೆ ಅನೂಪ್​ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸದ್ಯ ಈ ಹಾಡು ಸಖತ್​ ವೈರಲ್​ ಆಗಿದ್ದು, ಎಲ್ಲಾ ಕಡೆ ಸೌಂಡ್​ ಮಾಡ್ತಿದೆ. ವಿಕ್ರಾಂತ್​ ರೋಣ ಸಿನಿಮಾ ಅನೂಪ್​ ಬಂಡಾರಿ ಅವ್ರ ಕಲಾಕಂಚದಲ್ಲಿ ಅರಳಿದ ಸಿನಿಮಾ. ಜಾಕ್​ ಮಂಜು, ಶಾಲಿನಿ ಮಂಜುನಾಥ್​ ನಿರ್ಮಾಣದಲ್ಲಿ ತೆರೆಗೆ ಬರ್ತಾ ಇದೆ. ಕಿಚ್ಚ ಸುದೀಪ್​, ಜಾಕ್ವೆಲಿನ್​, ನಿರೂಪ್​ ಭಂಡಾರಿ ಸೇರಿ ಮುಂತಾದವರ ತಾರಾಬಳಗವಿದೆ. ವಿಲಿಯಮ್​ ಡೇವಿಡ್​ ಕ್ಯಾಮೆರಾ ಕಣ್ಣಲ್ಲಿ ಹೊಸ ಜಗತ್ತಿನ ಅನಾವರಣವಾಗಲಿದೆ. ಸದ್ಯ ರಿಲೀಸ್​ ಆಗಿರೋ ರಾಜಕುಮಾರಿ ಲಿರಿಕಲ್​ ಹಾಡು ಚಿತ್ರಕ್ಕೆ ಮತ್ತಷ್ಟು ಮೈಲೇಜ್​ ಕೊಟ್ಟಿದೆ. ಜುಲೈ 28ಕ್ಕೆ ರಿಲೀಸ್​ ಆಗ್ತಿರೋ ರೋಣನಿಗೆ ಮತ್ತೊಮ್ಮೆ ಆಲ್​ ದಿ ಬೆಸ್ಟ್​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES