ಚಾಮರಾಜನಗರ : ಮೈದಾನದ ವಿವಾದ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೈದಾನವನ್ನ ಯಾವ್ದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ರಕ್ತಕೊಟ್ಟಾದ್ರೂ ಚಾಮರಾಜಪೇಟೆ ಆಟದ ಮೈದಾನವನ್ನು ಉಳಿಸಿಕೊಳ್ತೇವೆ ಅಂತ ಸ್ಥಳೀಯರು ಬಿಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಹಿಂದೂಗಳನ್ನ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಆಟದ ಮೈದಾನ ಉಳಿವಿಗಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಹಾಗೂ 25ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಬಂದ್ಗೆ ಕರೆ ನೀಡಿವೆ. ಜುಲೈ 12ಕ್ಕೆ ಚಾಮರಾಜಪೇಟೆ ಸಂಪೂರ್ಣ ಬಂದ್ ಆಗಲಿದೆ. ಬಂದ್ ದಿನ ಬೆಳಗ್ಗೆ 10 ಗಂಟೆಯಿಂದ ಸಿರ್ಸಿ ಸರ್ಕಲ್ನಿಂದ ಆಟದ ಮೈದಾನದವರೆಗೆ ಬೃಹತ್ ರ್ಯಾಲಿ ಮಾಡಲು ನಿರ್ಧರಿಸಲಾಗಿದೆ. ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಲಿದ್ದಾರೆ. ಮನೆ ಮನೆಗೆ ತೆರಳಿ ಭಿತ್ತಿಪತ್ರ ನೀಡಿ, ಬಂದ್ನಲ್ಲಿ ಭಾಗಿಯಾಗುವಂತೆ ಕರೆ ನೀಡ್ತಿದ್ದಾರೆ. ಬಿಬಿಎಂಪಿ ದ್ವಂದ್ವ ಹೇಳಿಕೆಯಿಂದ ಇಷ್ಟೆಲ್ಲ ಅವಾಂತರಗಳು ಆಗ್ತಿದೆ. ಈ ವಿಚಾರವಾಗಿ ಆಟಬಾರದು ಅಂತ ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಚಾಮರಾಜಪೇಟೆಯ ಜಂಗಮ ಮಂಟಪದಲ್ಲಿ ನಡೆದ ಸಭೆಯಲ್ಲಿ, ಜಯಕರ್ನಾಟಕ ಸಂಘಟನೆ ಬಂದ್ ಗೆ ಕರೆ ನೀಡ್ತು. ಇದಕ್ಕೆ ಉಳಿದ ಸಂಘಟನೆಗಳು ಕೂಡ ಕೈಜೋಡಿಸಿದ್ವು. ಬಂದ್ ದಿನ ಜನ ಸ್ವಯಂ ಪ್ರೇರಿತವಾಗಿ ಆಗಮಿಸಲಿದ್ದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದಾರೆ.
ಮೊದಲಿಗೆ ಸಭೆ ಆರಂಭವಾಗುತ್ತಿದ್ದಂತೆ ಗದ್ದಲ ಶುರುವಾಗಿತ್ತು. ಶಾಸಕ ಜಮೀರ್ಗೆ ಆಹ್ವಾನ ನೀಡಿದ್ದರಿಂದ ಇತರೆ ಸದಸ್ಯರು ಕೆಂಡಾಮಂಡಲವಾಗಿದ್ದರು. ಜಮೀರ್ ಬಂದ್ರೆ ನಾವು ಹೊರಟು ಹೋಗ್ತೀವಿ ಅಂತ ಗಲಾಟೆ ನಡೆಸಿದ್ರು. ಮುಖಂಡರು ಮಧ್ಯ ಪ್ರವೇಶಿಸಿ, ನಾವು ಅವ್ರನ್ನ ಆಹ್ವಾನಿಸಿಲ್ಲ ಪರಿಸ್ಥಿತಿ ತಿಳಿಗೊಳಿಸಿದ್ರು. ಬಳಿಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕುತ್ತಾ, ಯಾವ್ದೇ ಕಾರಣಕ್ಕೂ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಆಟದ ಮೈದಾನವಾಗಿಯೇ ಇರಬೇಕು ಎಂದು ಒತ್ತಾಯಿಸಿದ್ರು.
ಒಟ್ಟಿನಲ್ಲಿ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ನಡುವಿನ ಜಟಾಪಟಿಗೆ ಅಂತ್ಯ ಹಾಡಲು ಸ್ಥಳೀಯರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜುಲೈ 12 ರಂದು ನಡೆಯೋ ಬಂದ್ ನ ಸ್ವರೂಪ ಹೇಗಿರುತ್ತೆ, ಆಟದ ಮೈದಾನ ಯಾರ ಪಾಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು