ಬೆಂಗಳೂರು : ನಷ್ಟದ ಸುಳಿಯಿಂದ ಹೊರಬರಲು ಬಿಎಂಟಿಸಿ ಮೆಗಾ ಪ್ಲಾನ್ ಮಾಡಿದ್ದು, ಈ ಹಿನ್ನಲೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಇಡೀ ಬಿಎಂಟಿಸಿ ಬಸ್ ಗಳು ಕಂಡಕ್ಟರ್ ಲೆಸ್ ಆಗುತ್ತಾವಾ..? ಹಾಗಾದರೆ 12 ಸಾವಿರ ಕಂಡಕ್ಟರ್ ಗಳ ಕಥಯೇನು..? ಶೀಘ್ರದಲ್ಲಿ ಬಿಎಂಟಿಸಿಯಲ್ಲಿ ಟಿಕೆಟ್ ನೀಡಲು ಕಂಡೆಕ್ಟರ್ಸ್ ಇರೋದಿಲ್ಲ. ಡಿಜಿಟಲ್ ಮೂಲಕವೇ ಎಲ್ಲಾ ಟಿಕೆಟ್ ಕಲೆಕ್ಷನ್ ಆಗಲಿದ್ದು, ಹೀಗಾಗಿ ಬಿಎಂಟಿಸಿಯಿಂದ ಸಿದ್ಧವಾಗ್ತಿದೆ ಮೆಗಾ ಪ್ಲಾನ್ ಮಾಡಿದ್ದಾರೆ.
ಇನ್ನು, ನಷ್ಟದ ಸುಳಿಯಿಂದ ಹೊರಬರಲು ಬಿಎಂಟಿಸಿ ಮೆಗಾ ಪ್ಲಾನ್ ಮಾಡಲಾಗಿದ್ದು, ನಷ್ಟದಿಂದ ಹೊರಬರಲು ಹರಸಾಹಸ ಕಂಡಕ್ಟರ್ ಲೆಸ್ ಬಿಎಂಟಿಸಿ ಪ್ಲಾನ್ ಮಾಡಿದ್ದಾರೆ. ಸದ್ಯ ಬಸ್ ರಸ್ತೆಗಿಳಿಸೋದೇ ಕಷ್ಟ ಅನ್ನೋ ಪರಿಸ್ಥಿತಿ ತಲುಪಿರೋ ನಿಗಮ, ಈ ಹಿನ್ನಲೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಆದಷ್ಟು ಶೀಘ್ರದಲ್ಲಿ ಬಿಎಂಟಿಸಿ ಕಂಡೆಕ್ಟರ್ ಲೆಸ್ ಫಿಕ್ಸ್ ಆಗಿದ್ದು, ಕಂಡೆಕ್ಟರ್ ಇಲ್ಲದೇ ಬಸ್ಗಳನ್ನ ಓಡಿಸಲು ಪ್ಲಾನ್ ಮಾಡಿದ್ದಾರೆ.
ಅದಲ್ಲದೇ, ಕ್ಯೂ ಆರ್ ಕೋಡ್, ಕಾಮನ್ ಮೊಬಿಲಿಟಿ ಕಾರ್ಡ್ ಮೂಲಕ ಟಿಕೆಟ್ ಕಲೆಕ್ಷನ್ ಮಾಡಲಾಗಿದ್ದು, ಕೇವಲ ಡ್ರೈವರ್ ನಿಂದ ಮಾತ್ರ ಬಸ್ ನಿರ್ವಹಿಸಲು ತೀರ್ಮಾನಿಸಲಾಗಿದೆ. ಸದ್ಯ ಕಂಡೆಕ್ಟರ್ ಕೆಲಸ ಮಾಡ್ತಿರೋರೆಲ್ಲರೂ ಡ್ರೈವರ್ ಕಂಡಕ್ಟರ್ಸ್ ಇವರನ್ನ ಡ್ರೈವರ್ ಕೆಲಸಕ್ಕೆ ನೇಮಿಸಲು ಪ್ಲಾನ್ ಆಗುತ್ತಿದ್ದು, ಸದ್ಯ ಡ್ರೈವರ್ಸ್ ಕೊರತೆಯಿಂದ ಹಲವು ಬಸ್ ಲೈನ್ ರದ್ದಾಗುತ್ತಿದೆ.