Monday, December 23, 2024

ಸಂಚಲನ ಮೂಡಿಸಿದ ಗೋಲ್ಡನ್​ ಗಣಿ ಮಧುರ ಗೀತೆ

ನಗು ಮೊಗದ ಸರದಾರ, ಕೋಟಿ ಕೋಟಿ ಕನ್ನಡಿಗರ ಮನೆ ಮಗ, ನಮಸ್ಕಾರ ಎನ್ನುತ್ತಲೇ ಅಭಿಮಾನಿಗಳ ಎದೆಯಲ್ಲಿ ಪುಟ್ಟದೊಂದು ಗುಡಿ ಕಟ್ಟಿದ ಗೋಲ್ಡನ್​ ಹುಡುಗ ಗಣೇಶ್​​​. ಸಕ್ಕರೆಯಂತ ಮನಸ್ಸು, ಮಗುವಿನ ನಗು, ಗುಳಿ ಕೆನ್ನೆಯ ಚೆಲುವ ಗಣೇಶ್​ ಬರ್ತ್​​ ಡೇ ಗಿಫ್ಟ್​ ಆಗಿ ಸಿಕ್ಕ ಲಿರಿಕಲ್​​ ಸಾಂಗ್​​ ಸಖತ್​​ ಹೈಪ್​ ಕ್ರಿಯೇಟ್​ ಮಾಡ್ತಿದೆ. ಯೆಸ್​​.. ಗಾಳಿಪಟ 2 ಚಿತ್ರದ ಇಂಪಾದ ಹಾಡಿಗೆ ದನಿಯಾದವರು ಯಾರು..? ಈ ಸ್ಟೋರಿ ಓದಿ.

  • ಸೋನು ನಿಗಮ್​ ಸುಮಧುರ ಸ್ವರದಲ್ಲಿ ಗಾನಬಜಾನ

ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್​ ಟೈಮ್​​ ಒಂದಿತ್ತು. ಖಾಸಗಿ ವಾಹಿನಿಯಲ್ಲಿ ಕಾಮಿಡಿ ಮಾಡಿಕೊಂಡಿದ್ದ ಚೆಲ್ಲಾಟದ ಹುಡುಗ ಗಣೇಶ್​​​ ಮುಂಗಾರುಮಳೆ ಚಿತ್ರದ ನಂತ್ರ ಧಿಡೀರ್​​ ಗೆಲುವಿನ ಶಿಖರ ತಲುಪಿದ್ರು. ಗಣೇಶ್​​ ಅಭಿನಯದ ಮೋಡಿಗೆ ಇಡೀ ಕರುನಾಡೇ ಫಿದಾ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು, ಅಜ್ಜ ಅಜ್ಜಿಯರಿಗೂ ಗಣಿ ಅಂದ್ರೆ ಅಪರಿಮಿತ  ಪ್ರೀತಿ. ಟೀನೇಜ್​ ಹುಡುಗೀರ ಪಾಲಿಗೆ ಫೇವರಿಟ್ ನಮ್​ ಗಣಿ​​​​. ಯೆಸ್​​​.. ಯಾವುದು ಅತಿಶಯೋಕ್ತಿಯಲ್ಲ. ಗೋಲ್ಡನ್​​​​ ಸ್ಟಾರ್​ ಗಣೇಶ್​​ ಅಕ್ಷರಶಃ ಸಿನಿಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು.

ಗಣೇಶ್​​ ತಮ್ಮ  ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ಮಿರಾಕಲ್​ ಮಾಡಿದ್ದ ಮೋಸ್ಟ್​ ಟ್ಯಾಲೆಂಟೆಡ್​​ ಆ್ಯಕ್ಟರ್​​. ಸಾಮಾನ್ಯನಂತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಅಸಮಾನ್ಯನಾಗಿ ಬೆಳೆದ ಸಿನಿಜರ್ನಿಯನ್ನು ನೋಡಿದ್ರೆ ಒಂದು ಕ್ಷಣ ಎಂತವ್ರಿಗೂ ಅಚ್ಚರಿಯಾಗುತ್ತೆ. ಗಣೇಶ್​​ ಜೀವನಹಾದಿಯೇ ಯುವಕಲಾವಿದರಿಗೆ ಒಂದು ಮಾದರಿ. ಇಂತಹ ಕನ್ನಡದ ಪ್ರತಿಭಾನ್ವಿತ ಕಲಾವಿದನ ಬರ್ತ್​​ ಡೇಗೆ ಲಿರಿಕಲ್​​ ಸಾಂಗ್​ ರಿಲೀಸ್​ ಆಗಿದೆ. ಗಾಳಿಪಟ 2 ಚಿತ್ರತಂಡ ನಾನಾಡದ ಮಾತೆಲ್ಲವ ಲಿರಿಕಲ್​ ಗೀತೆ ರಿಲೀಸ್​ ಮಾಡಿದ್ದು, ಸೋಶೀಯಲ್​ ಮೀಡಿಯಾದಲ್ಲಿ ಹೈಪ್​ ಕ್ರಿಯೇಟ್​ ಮಾಡಿದೆ.

  • ನಾನು ನಿಮ್ಮ ಕನ್ನಡಿಗ.. ಜೈ ಕನ್ನಡ ಎಂದ್ರು ಸೋನು ನಿಗಮ್​​
  • ಮೋಡಿ ಮಾಡಿದ ಜಯಂತ್​​ ಸಾಹಿತ್ಯ.. ಜನ್ಯಾ ಸಂಗೀತ..!

ಬರ್ತ್​ ಡೇ ಸಲುವಾಗಿ ಗೋಲ್ಡನ್​ ಸ್ಟಾರ್​ ಗಣೇಶ್​​ ಕೂಡ ಅಕ್ಕರೆಯ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ನನ್ನ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ. ನಿಮಗೆ ನಾನು ಋಣಿಯಾಗಿದ್ದೀನಿ. ನನಗಾಗಿ ತರುವ ಹಾರ ತುರಾಯಿಗಳ ಬದಲಾಗಿ ನೀವಿದ್ದಲ್ಲಿಯೇ ಅಗತ್ಯ ಇರುವವರಿಗೆ ಸಹಾಯ ಮಾಡಿ ಎಂದಿದ್ದರು. ಇದ್ರ ಜೊತೆಯಲ್ಲಿ ಸೂನು ನಿಗಮ್​ ಕೂಡ ಗಣೇಶ್​ ಜೊತೆಗಿನ ಪ್ರೀತಿಯ ಸಂಬಂಧವನ್ನು ಹಂಚಿಕೊಂಡಿದ್ದಾರೆ. ನಾನು ನಿಮ್ಮ ಕನ್ನಡಿಗ, ಜೈ ಕನ್ನಡ ಎನ್ನುತ್ತಾ ಭಟ್ರು, ಗಣಿಯ ಜೊತೆಗಿನ ಫ್ರೆಂಡ್ಶಿಪ್​ ಬಗ್ಗೆ ಹೇಳಿಕೊಂಡಿದ್ದಾರೆ.

ಸದ್ಯ ಗಾಳಿಪಟ 2 ಸಿನಿಮಾ ಭಟ್ರ ಭತ್ತಳಿಕೆಯಲ್ಲಿ ಮೂಡಿ ಬರ್ತಾ ಇರೋ ಮೋಸ್ಟ್​ ಎಕ್ಸ್​​ಪೆಕ್ಟೆಡ್​​​​ ಸಿನಿಮಾ. ಗಣಿ, ದಿಗಂತ್​​​, ಪವನ್​ ಅಭಿನಯದಲ್ಲಿ ತೆರೆಗೆ ಬರೋಕೆ ಸಜ್ಜಾಗಿರೋ ಸಿನಿಮಾ. ಈಗಾಗ್ಲೇ ಪರೀಕ್ಷೆನಾ ಬಡಿಯಾ ಹಾಡು ಕೂಡ ಯ್ಯೂಟ್ಯೂಬ್​​ನಲ್ಲಿ ಹಿಟ್ಸ್​ ದಾಖಲೆ ಮಾಡಿ ಹೆಸರು ಮಾಡಿತ್ತು. ಇದೀಗ ರಿಲೀಸ್​ ಆಗಿರೋ ನಾನಾಡದ ಮಾತೆಲ್ಲವ ಹಾಡು ಎಲ್ಲರ ಹೃದಯ ಗೆದ್ದಿದೆ.

ಜಯಂತ್​ ಕಾಯ್ಕಿಣಿ ಸಾಹಿತ್ಯದಲ್ಲಿ ಪ್ರತಿ ಸಾಲುಗಳು ಕೂಡ ಅಂತರಾಳ ತಲುಪುತ್ತವೆ. ಈ ಸಾಹಿತ್ಯದ ಸಾಲುಗಳಿಗೆ ಸಂಗೀತದ ಕಂಪು ಹರಿಸಿದ್ದಾರೆ ಮ್ಯುಸಿಕ್​ ಡೈರೆಕ್ಟರ್​​ ಅರ್ಜುನ್ ಜನ್ಯಾ.  ಓದದಾ ಪುಸ್ತಕ ನಾನು, ಎದೆಗೆ ಒತ್ತಿಕೊಳ್ಳಲೇನು ಎಂಬ ಸಾಲುಗಳು ಹಾಡಿಗೆ ಜೀವ ತುಂಬಿವೆ. ಇನ್ನೂ ಈ ಹಾಡು ಸೋನು ಸ್ವರದಲ್ಲಿ ನೆಕ್ಸ್ಟ್​​ ಲೆವೆಲ್​​ ತಲುಪಿದೆ.  ಯೋಗರಾಜ್​ ಬಟ್​ ನಿರ್ದೆಶನದಲ್ಲಿ, ಉಮಾ ಎಮ್​ ರಮೇಶ್​ ರೆಡ್ಡಿ ನಿರ್ಮಾಣದಲ್ಲಿ ಆಗಸ್ಟ್​ 12ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ.

ಚಿತ್ರದಲ್ಲಿ ಅನಂತ್​ ನಾಗ್​​, ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಕೂಡ ತಾರಾಬಳಗದಲ್ಲಿ ಇದ್ದಾರೆ. ಗಾಳಿಪಟ ಸಿನಿಮಾ ನೋಡಿದ ಪ್ರತಿಯೊಬ್ಬ ಸಿನಿಪ್ರಿಯರು ಕೂಡ ಗಾಳಿಪಟ 2 ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಒಟ್ಟಾರೆ ಎಲ್ಲರ ನಿರೀಕ್ಷೆ ಹುಸಿ ಮಾಡದೇ ಸಿನಿಮಾ ಸಕ್ಸಸ್​ ಆಗಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES