Monday, December 23, 2024

ಡೆನ್ಮಾರ್ಕ್​​ನ ಮಾಲ್‌ನಲ್ಲಿ ಶೂಟೌಟ್‌

ಡೆನ್ಮಾರ್ಕ್ ರಾಜಧಾನಿ ಕೂಪನ್‌ ಹೆಗನ್‌ನ ಜನನಿಬಿಡ ಶಾಪಿಂಗ್‌ ಮಾಲ್‌ನಲ್ಲಿ ವ್ಯಕ್ತಿಯೊಬ್ಬ ಶೂಟೌಟ್‌ ನಡೆಸಿರುವ ಘಟನೆ ಭಾನುವಾರ ನಡೆದಿದೆ.

ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕಕ್ಕೂ ಅಧಿಕ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 22 ವರ್ಷದ ಡೆನ್ಮಾರ್ಕ್ ಪ್ರಜೆ ಆಗಿರುವ ಶೂಟರ್‌ ಅನ್ನು ಬಂಧಿಸಲಾಗಿದೆ.. ಈ ಬಗ್ಗೆ ಕೂಪನ್‌ ಹೆಗನ್‌ ಪೊಲೀಸ್‌ ಮುಖ್ಯಸ್ಥ ಸೊರೆನ್‌ ಥಾಮಸ್ಸೆನ್ ತಿಳಿಸಿದ್ದಾರೆ.

ಅಲ್ಲದೆ, ಈ ಘಟನೆಯಲ್ಲಿ ಈತನೊಬ್ಬನೇ ಇದ್ದು, ಬೇರೆಯವರು ಈ ಶೂಟೌಟ್‌ನಲ್ಲಿ ಭಾಗಿಯಾಗಿರುವ ಸಾಧ್ಯತೆ ಕಡಿಮೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣದ ಕುರಿತಾಗಿ ಇನ್ನೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES