Monday, December 23, 2024

ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ : ಸಿ.ಟಿ ರವಿ

ಬೆಂಗಳೂರು : ತೆಲಂಗಾಣದ ಭಾಗ್ಯನಗರ ಈಗಿನ ಹೈದ್ರಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಜೆ.ಪಿ ನಡ್ಡಾ ನೇತೃತ್ವದಲ್ಲಿ ನಡೆಯಿತು ಎಂದು ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯದ ಸಿಎಂಗಳು, ಅಧ್ಯಕ್ಷರು,‌ಪದಾಧಿಕಾರಿಗಳು ಭಾಗಿಯಾಗಿದ್ರು. ಎರಡು ದಿನಗಳ ಕಾಲ ಪ್ರಧಾನಿಗಳು ಭಾಗಿಯಾಗಿದ್ದಲ್ಲದೆ ಮಾರ್ಹದರ್ಶನ ಮಾಡಿದ್ರು. ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದರು.

ಇನ್ನು, ಕರ್ನಾಟಕದ ನಂತರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ. ದೊಡ್ಡ ಪ್ರಮಾಣದಲ್ಲಿ ಯುವಕರು, ಮಹಿಳೆಯರನ್ನ ಒಳಗೊಂಡಂತೆ ದೊಡ್ಡ ಪ್ರಮಾಣದಲ್ಲಿ ಯಾರ್ಲಿಯಲ್ಲಿ ಭಾಗಿಯಾಗಿದ್ದು ಸ್ಪಷ್ಟ ಸಂದೇಶ ದೊರೆತಿದೆ. ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ. ತಮಿಳುನಾಡಿನಲ್ಲೂ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಮಲೈ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರೋದು ಅನುಭವಕ್ಕೆ ಬರ್ತಿದೆ. ಎಂದರು.

ಇನ್ನು, ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ. ಕೇಂದ್ರದ ವಿವಿಧ ಯೋಜನೆಗಳು 70ರಷ್ಟು ಜನರಿಗೆ ಮುಟ್ಟಬೇಕಿದೆ. ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸೋ ಕೆಲಸ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಅದರ ಲಾಭಾಂಶವನ್ನ ಪಕ್ಷದ ಜೊತೆ ಯಶಸ್ವಿಯಾಗಿ ಜೋಡಿಸಬೇಕಿದೆ. ಇದರಿಂದ ದಕ್ಷಿಣದಲ್ಲೂ ಬಿಜೆಪಿ ಸದೃಡವಾಗೋದ್ರಲ್ಲಿ ಅನುಮಾನವಿಲ್ಲ. ಪ್ರಧಾ‌ನಿಗಳು ಸ್ನೇಹಯಾತ್ರೆಯ ಕಲ್ಪನೆ ಬಿಂಬಿಸಿದ್ದಾರೆ. ಆ ಮೂಲಕ ಬಿಜೆಪಿ ವಿಚಾರದಾರೆ, ಯೋಜನೆಗಳನ್ನ ಜನರಿಗೆ ತಲುಪಲಿದೆ ಎಂದರು.

RELATED ARTICLES

Related Articles

TRENDING ARTICLES