Monday, December 23, 2024

ಶಿವಣ್ಣಂಗೆ ವಯಸ್ಸಾಗಲ್ವಾ..? ಮೇಕಿಂಗ್​​ ಆಫ್​ ಬೈರಾಗಿ

ಕಾಡ ಹುಲಿಯ ಘರ್ಜನೆಗೆ ಸ್ಯಾಂಡಲ್​ವುಡ್​ ಬೆಸ್ತು ಬಿದ್ದಿದೆ. ಬೈರಾಗಿಯ ಅಸಲಿ ಅವತಾರ ನೋಡಿ ಚಿತ್ರರಸಿಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಸ್ವೀಟ್​ 60 ಶಿವಣ್ಣನಿಗೆ ಖಂಡಿತ ವಯಸ್ಸಾಗಲ್ಲಾ ಬಿಡಿ ಸ್ವಾಮಿ ಅಂತಾ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಯೆಸ್​​.. ಬೈರಾಗಿ ಸಿನಿಮಾದ ಮೇಕಿಂಗ್​ ಆಫ್​ ವೀಡಿಯೋ ರಿಲೀಸ್​ ಆಗಿದ್ದು ಫ್ಯಾನ್ಸ್​ ಶಿವಣ್ಣನ ಎನರ್ಜಿ ಕಣ್ಣಾರೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶಿವಣ್ಣನ ರಿಯಲ್​ ಎನರ್ಜಿಯ ಫಿಟ್​ನೆಸ್​ ಪ್ರೂಫ್​ ಇಲ್ಲಿದೆ.

  • ಶಿವಣ್ಣನ ಎನರ್ಜಿಗೆ ಶಿವಣ್ಣನೇ ಸಾಟಿ.. ಫಿಟ್​​​ನೆಸ್​​ ಪ್ರೂಫ್​​

ದೊಡ್ಮನೆ ಫ್ಯಾಮಿಲಿಯ ಪ್ರತಿಯೊಬ್ಬ ಸ್ಟಾರ್​ ಕೂಡ ಒಂದೊಂದು ಮುತ್ತು. ಫಿಟ್​ನೆಸ್ ಕಾ ಬಾಪ್​ ನಮ್ಮ ಅಪ್ಪು ಅವರನ್ನ ಮರೆಯೋಕೆ ಸಾಧ್ಯ ಇಲ್ಲ ಬಿಡಿ. ಇನ್ನೂ ಬಂಗಾರ ಸನ್​ ಆಫ್​ ಬಂಗಾರದ ಮನುಷ್ಯ ಡಾ. ಶಿವಣ್ಣ ಅವ್ರ ಫಟ್​ನೆಸ್​ ಬಗ್ಗೆ ಹೇಳ್ತಾ ಹೋದ್ರೇ ಪದಗಳೆ ಸಾಲದು. 123 ಸಿನಿಮಾಗಳ ಸರದಾರ ನಮ್​ ಹ್ಯಾಟ್ರಿಕ್​ ಹೀರೋ ಶಿವಣ್ಣ. ಇಂದಿಗೂ 16ರ ಹರೆಯದ ಹುಡುಗನ ಎನರ್ಜಿ. ಆ್ಯಕ್ಷನ್​​ ಸೀಕ್ವೆನ್ಸ್​ಗಳಲ್ಲಿ ಶಿವ​​ಣ್ಣನ ಎನರ್ಜಿಗೆ ಸರಿಸಾಟಿಯಾಗೋ ಇನ್ನೊಬ್ಬ ನಟ ಇರೋಕೆ ಸಾಧ್ಯವೇ ಇಲ್ಲ. ಅದಕ್ಕೆ ಸಾಕ್ಷಿಯಂತಿದೆ ಬೈರಾಗಿ ಚಿತ್ರದ ಮೇಕಿಂಗ್​ ಆಫ್​ ವೀಡಿಯೋ.

ಶಿವಣ್ಣ ಅವರಿಗೆ ಡ್ಯಾನ್ಸಿಂಗ್​​ ಇರಲಿ ಆ್ಯಕ್ಟಿಂಗ್​ ಇರಲಿ, ಡ್ಯೂಪ್​ ಇಲ್ಲದ ಆ್ಯಕ್ಷನ್​ ಸೀಕ್ವೆನ್ಸ್​ ಇರಲಿ ಅದೇ ಹುಮ್ಮಸ್ಸು, ಅದೇ ತೇಜಸ್ಸು. ಶೂಟಿಂಗ್​​ ಸೆಟ್​ನಲ್ಲಿ ಶಿವಣ್ಣ ಇದ್ರೆ ಸಹಜವಾಗಿ ಎಲ್ರಿಗೂ ಎನರ್ಜಿ ಪಾಸ್​ ಅಗುತ್ತೆ. ಲವಲವಿಕೆಯ ಭಜರಂಗಿಯ ಲವಲವಿಕೆಯನ್ನ ಕಣ್ಣಾರೆ ಕಂಡವ್ರು ಹೇಳೋ ಮಾತು ಒಂದೇ. ಶಿವಣ್ಣ ನಿಮಗೆ ವಯಸ್ಸೇ ಆಗಲ್ವಾ ಅಂತಾ. ಈ ಮಾತನ್ನು ನಾವು ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಶಿವಣ್ಣನ ಎನರ್ಜಿ ಈ ವೀಡಿಯೋದಲ್ಲಿ ಎದ್ದು ಕಾಣ್ತಿದೆ.

  • ಮಳೆ ಇರಲಿ, ಚಳಿ ಇರಲಿ, ಶಿವಣ್ಣ ಫುಲ್​ ಆಫ್​ ಆ್ಯಕ್ಟಿವ್​..!
  • ಪ್ರತಿ ಫ್ರೇಮ್​​​​ನಲ್ಲೂ ಎಗರಿ ಬರೋ ಹುಲಿಯಾಗಿ ಡಾ.ಶಿವಣ್ಣ

ಶಿವಣ್ಣನ ಜೊತೆ ತೆರೆ ಹಂಚಿಕೊಂಡ ಪ್ರತಿಯೊಬ್ಬ ಸ್ಟಾರ್​ ನಟ ಕೂಡ ಅವ್ರ ಎನರ್ಜಿ ಮ್ಯಾಚ್​ ಮಾಡೋದೆ ಕಷ್ಟ ಅಂತಾ. ಇದೀಗ ಬೈರಾಗಿ ಸಿನಿಮಾದಲ್ಲಿ ಅದು ಮತ್ತೆ ಪ್ರೂವ್​ ಆಗಿದೆ. ಬೈರಾಗಿ ಸಿನಿಮಾದ ಮೇಕಿಂಗ್ ಆಫ್​ ವೀಡಿಯೋದಲ್ಲಿ ಶೂಟಿಂಗ್​ನ ಕೆಲವು ತುಣುಕುಗಳನ್ನು ಹಂಚಿಕೊಂಡಿದೆ. ಪ್ರತಿ ಫ್ರೇಮಿನಲ್ಲೂ ಶಿವಣ್ಣ ಜಾಸ್ತಿ ಡ್ಯೂಪ್​ ಮಾಡದೇ ಆ್ಯಕ್ಷನ್​ ಸೀಕ್ವೆನ್ಸ್​​ಗಳಲ್ಲಿ ಸ್ಟಂಟ್ ಮಾಡಿದ್ದಾರೆ. ಈ ವೀಡಿಯೋ ಹೊರತುಪಡಿಸಿ ಹೆಚ್ಚು ಆ್ಯಕ್ಷನ್​​ ಸೀನ್ಸ್​ಗಳು ಸಿನಿಮಾದಲ್ಲಿವೆ.

ಬೈಕ್​ ಏರಿ ವೀಲಿಂಗ್​ ಮಾಡೋದ್ರಲ್ಲೂ ಶಿವಣ್ಣ ಫಸ್ಟ್​ ಕ್ಲಾಸ್​. ಎತ್ತರದ ಕಂಬವನ್ನು ಚಿರತೆಯಂತೆ ವೇಗವಾಗಿ ಏರಿ ರೌಡಿಗಳ ಮೇಲೆ ಎಗರೋ ಕಾಡಹುಲಿಯಾಗಿ ಗಂಡುಗಲಿ ಶಿವಣ್ಣ ಮಿಂಚಿದ್ದಾರೆ. ರಿಧಮ್​ ಆಫ್​ ಶಿವಪ್ಪನ ಖದರ್​ಗೆ ಎಲ್ಲರೂ ಇಂಪ್ರೆಸ್​ ಅಗಿದ್ದಾರೆ. ಈ ವಯಸ್ಸಲ್ಲು ಭಜರಂಗಿಯ ಗತ್ತು, ಗಮ್ಮತ್ತು, ತಾಕತ್ತು ಎಲ್ಲರೂ ಮೆಚ್ಚಿ ಕೊಂಡಾಡುವಂತಿದೆ.

ವಿಜಯ್​ ಮಿಲ್ಟನ್​ ನಿರ್ದೇಶನದಲ್ಲಿ, ಕೃಷ್ಣ ಸಾರ್ಥಕ್​ ನಿರ್ಮಾಣದಲ್ಲಿ ಬೈರಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್​​ ಸಿನಿಮಾ ಬೈರಾಗಿ ಅಂತಾ ಪ್ರೇಕ್ಷಕರು ಪಾಸಿಟಿವ್​ ರೆಸ್ಪಾನ್ಸ್​​ ಕೊಟ್ಟಿದ್ದಾರೆ. ಟಗರು ಡಾಲಿ, ಶಿವಣ್ಣ, ದಿಯಾ ಪೃಥ್ವಿ ಕಾಂಬಿನೇಷನ್​​ಗೆ ಫ್ಯಾನ್ಸ್​ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಎಲ್ಲಾ ಥಿಯೇಟರ್​​ನಲ್ಲು​​​ ಫುಲ್​ ಹೌಸ್​ ಪ್ರದರ್ಶನ ಕಾಣ್ತಿದೆ. ಇದೀಗ ಬೈರಾಗಿ ಚಿತ್ರತಂಡ ಶೇರ್​ ಮಾಡಿರೋ ಮೇಕಿಂಗ್​ ಆಫ್​ ವೀಡಿಯೋ ಮೂಲಕ ಶಿವಣ್ಣ ಅವ್ರ ಫಿಟ್​ನೆಸ್​ ಮತ್ತೆ ಮುನ್ನೆಲೆಗೆ ಬಂದಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES