Friday, January 24, 2025

ರೆಡ್​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್​​ & ನರೇಶ್​​

ಮೈಸೂರು: ತೆಲುಗು ನಟ ವಿಜಯ್​ ಕೃಷ್ಣ ನರೇಶ್​ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್​ ಅವರಿಬ್ಬರ ಸಂಬಂಧಕ್ಕೆ ಕೊನೆಗೂ ಬಿಗ್​ಟ್ವಿಸ್ಟ್​​ ಸಿಕ್ಕಿದ್ದು, ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಇಬ್ಬರು ಒಂದೇ ರೂಮ್​​ನಲ್ಲಿರುವುದು ದೃಶ್ಯ ಸಮೇತವಾಗಿ ಸಿಕ್ಕಿ ಬಿದ್ದಿದ್ದಾರೆ.

ಕಳೆದ ಮೂರು ದಿನಳಿಂದ ನರೇಶ್​ ಪತ್ನಿ ರಮ್ಯಾ ರಘುಪತಿ ಅವರು ತಮ್ಮ ಪತಿ ನರೇಶ್​ ಮತ್ತು ಪವಿತ್ರಾ ಲೋಕೇಶ್​​ ನಡುವೆ ಅಕ್ರಮ ಸಂಬಂಧವಿದೆ ಎಂದು ಆರೋಪ ಮಾಡಿದ್ದರು. ಇದೀಗ ಈ ಆರೋಪವನ್ನು ದೃಶ್ಯ ಸಮೇತವಾಗಿ ಜನರಿಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೆಲುಗು ನಟ ನರೇಶ್-ಪವಿತ್ರಾ ಲೋಕೇಶ್ ಮೈಸೂರಿನ ದಿ ಕೋರಮ್ ಹೋಟೆಲ್​​​ನ ರೂಮ್ ನಂಬರ್ 3001ರಲ್ಲಿ ಇದ್ದರು. ಮುಂಜಾನೆಯಿಂದಲೂ ರಮ್ಯಾ ರಘುಪತಿ ಅವರು ರೂಮ್ ಹೊರಗೆ ಅವರ ಬರುವಿಕೆಗಾಗಿ ಕಾದು ಕುಳಿತಿದ್ದರು.

ಹೋಟೆಲ್​​​ನಲ್ಲಿ ನರೇಶ್ ತನ್ನ ಹೆಸರಿನಲ್ಲಿಯೇ ರೂಮ್ ಬುಕ್ ಮಾಡಿದನ್ನು ಪವರ್ ಟಿವಿಗೆ ಈ ಕುರಿತು ಹೋಟೆಲ್ ಮ್ಯಾನೇಜರ್ ರಕ್ಷಿತ್ ಅವರು​​ ಖಚಿತಪಡಿಸಿದ್ದರು.

ಅಲ್ಲದೇ ನರೇಶ್ ರೂಮ್​​ಗೆ ನಿನ್ನೆ ರಾತ್ರಿ ಪವಿತ್ರಾ ಲೋಕೇಶ್ ಡೈರೆಕ್ಟಾಗಿ ಹೋದರು ಎಂಬ ಸ್ಫೋಟಕ ಮಾಹಿತಿಯನ್ನು ಸಹ ಬಹಿರಂಗಪಡಿಸಿದ್ದಾರೆ.

RELATED ARTICLES

Related Articles

TRENDING ARTICLES