Monday, December 23, 2024

ಕೊರೋನಾ ಚಿಕಿತ್ಸೆ ದರ ಏರಿಕೆ

ಬೆಂಗಳೂರು : ಪೆಟ್ರೋಲ್, ಗ್ಯಾಸ್, ಕರೆಂಟ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಶಾಕ್ ಆಗಿದ್ದು, ಇನ್ಮುಂದೆ ನಿಮ್ಮ ಆರೋಗ್ಯದ ಚಿಕಿತ್ಸಾ ವೆಚ್ಚವು ದುಬಾರಿ ಆಗಲಿದೆ.

ಕೊರೊನಾ ಒಕ್ಕರಿಸಿದ್ರೆ ಮತ್ತೆ ಜೇಬಿಗೆ ಕತ್ತರಿ ಬೀಳೊದು ಫಿಕ್ಸ್ ಆಗಿದ್ದು, ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಲು ಜನರ ಕಣ್ಣೀರು ಹಾಕಿಸಲು ಮುಂದಾಯ್ತಾ ಆರೋಗ್ಯ ಇಲಾಖೆ..? ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಆರೋಗ್ಯ ಇಲಾಖೆ ಮುಂದಿಟ್ಟಿವೆ. ಹಾಗೆನೇ ಕೊವಿಡ್ ಚಿಕಿತ್ಸಾ ವೆಚ್ಚವನ್ನ ಹೆಚ್ಚಳ ಮಾಡುವಂತೆ ಪಟ್ಟು ಹಿಡದೀವೆ.

ಕೊವಿಡ್ ಚಿಕಿತ್ಸಾ ದರ ಜೊತೆ ಇತರೆ ಹಲವು 70ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆಗೂ ಪಟ್ಟು ಹಿಡಿದಿದ್ದು, ಕೊವಿಡ್ ಚಿಕಿತ್ಸೆ ಕೊಡಲು ಮೆಡಿಸಿನ್ ದರ ಸೇರಿದಂತೆ ಬೇರೆ ಬೇರೆಯ ಖರ್ಚು ಹೆಚ್ಚಾಗಿದೆ. ಮೆಡಿಸಿನ್ ದರ ಏರಿಕೆಯ ಎಫೆಕ್ಟ್ ಆಸ್ಪತ್ರೆಗೆ ತಟ್ಟತಿದೆ. ಹೀಗಾಗಿ ಕೊವಿಡ್ ಚಿಕಿತ್ಸಾಯ ವೆಚ್ಚ ಹೆಚ್ಚಳ ಮಾಡುವಂತೆ ಖಾಸಗಿ ಆಸ್ಪತ್ರೆಗಳ ಆರೋಗ್ಯ ಇಲಾಖೆಗೆ ಡಿಮ್ಯಾಂಡ್ ಮಾಡಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದೆ. ತಜ್ಞರ ವರದಿ ಪಡೆದು ಕೊವಿಡ್ ಚಿಕಿತ್ಸಾ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಖಾಸಗಿ ಆಸ್ಪತ್ರೆಗಳ ಸಮಸ್ಯೆ ಪರಿಹರಿಸಲು ಜನರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಮುಂದಾಯ್ತಾ ಅನ್ನೊ ಆತಂಕವು ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES