ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕನ್ಹಯ್ಯ ಲಾಲ್‌ನನ್ನು ಭೀಕರವಾಗಿ ಶಿರಚ್ಛೇದ ಮಾಡಿದ್ದ ಆರೋಪಿಗಳನ್ನು ಎನ್ಐಎ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನಾಲ್ವರು ಆರೋಪಿಗಳ ಮೇಲೆ ವಕೀಲರೇ ಹಲ್ಲೆ ಮಾಡಿದ್ದಾರೆ.
ವಿಚಾರಣೆಯ ವೇಳೆ ಕೋರ್ಟ್, ಇನ್ನೂ 10 ದಿನಗಳ ಕಾಲ ರಿಮಾಂಡ್ ನೀಡಲು ಒಪ್ಪಿಕೊಂಡಿದೆ. ಅದರಂತೆ, ನಾಲ್ವರು ಆರೋಪಿಗಳ ಪೈಕಿ ನೇರವಾಗಿ ಹತ್ಯೆಯಲ್ಲಿ ಭಾಗಿಯಾದ ಮೊಹಮದ್ ಗೌಸ್, ರಿಯಾಜ್ ಅಟ್ಟಾರಿ ಹಾಗೂ ಹತ್ಯೆಗೆ ಸಹಾಯ ಮಾಡಿದ ಮೊಹ್ಶಿನ್ ಹಾಗೂ ಆಸಿಫ್‌ನನ್ನು ಪೊಲೀಸ್ ವ್ಯಾನ್‌ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ವಕೀಲರು ಹಲ್ಲೆ ಮಾಡಿದ್ದಾರೆ. ಭಾರೀ ಜನಸ್ತೋಮದ ನಡುವೆ ಅವರನ್ನು ಕರೆದುಕೊಂಡು ಬರುವ ವೇಳೆ, ರಿಯಾಜ್ ಹಾಗೂ ಮೊಹಮದ್ ಅಂಗಿ ಹಿಡಿದು ಎಳೆದಾಡಿದ್ದಾರೆ.
ಇದಕ್ಕೂ ಮುನ್ನ ಭಾರಿ ಭದ್ರತೆಯಲ್ಲಿ ಎಲ್ಲರನ್ನೂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅದರಲ್ಲೂ, ರಿಯಾಜ್ ಹಾಗೂ ಮೊಹಮದ್‌ಗೆ ಎನ್ಐಎ ಸರಿಯಾಗಿ ಡ್ರಿಲ್ ಮಾಡಿದ್ದ ಕಾರಣಕ್ಕೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಬ್ಬರು ಪೊಲೀಸರು ಆತನಿಗೆ ಹೆಗಲು ಕೊಟ್ಟು ಕೋರ್ಟ್ಗೆ ಕರೆ ತಂದಿದ್ದರು. ವ್ಯಾನ್ಗೆ ಹಾಕುವ ವೇಳೆಯಲ್ಲೂ ಕೈಕಾಲುಗಳನ್ನು ಹಿಡಿದು ವ್ಯಾನ್ಗೆ ತುಂಬಿದ್ದಾರೆ.
ನ್ಯಾಯಾಲಯವು ಹಂತಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಜುಲೈ 12 ರವರೆಗೆ 10 ದಿನಗಳ ಕಸ್ಟಡಿಗೆ ಒಪ್ಪಿಸಿದೆ. ತಾಲಿಬಾನ್ ಮಾದರಿಯ ಹತ್ಯಾಕಾಂಡದ ಪ್ರಮುಖ ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಜಬ್ಬಾರ್ ನನ್ನು ಅಜ್ಮೀರ್‌ನಿಂದ ಜೈಪುರಕ್ಕೆ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿದೆ. ದೇಶಕ್ಕೆ ದ್ರೋಹ ಮಾಡಿದವರನ್ನು ಗಲ್ಲಿಗೇರಿಸಿ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದೆಡೆ, ರಾಜಸ್ಥಾನದಲ್ಲಿ ಎಲ್ಲೆಡೆ ಸ್ವಯಂ ಘೋಷಿತ ಬಂದ್ ಆಚರಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಒಟ್ನಲ್ಲಿ ದೇಶದಾದ್ಯಂತ ಹಂತಕರನ್ನು ಗಲ್ಲಿಗೇರಿಸಿ ಎನ್ನುವ ಕೂಗು ಜೋರಾಗ್ತಿದೆ.