Sunday, December 22, 2024

ನಕಲಿ ಸೇವಂತಿಗೆ ನಾರು ಕೊಟ್ಟು ರೈತನಿಗೆ ಮಹಾನ್‌ ವಂಚನೆ..!

ಚಿಕ್ಕಬಳ್ಳಾಪುರ : ರೈತನ ಎದೆ ಎತ್ತರಕ್ಕೆ ಬೆಳೆದು ನಿಂತಿರೋ ಸೇವಂತಿಗೆ ತೋಟ. ಹಚ್ಚು ಹಸುರಾಗಿ ದಟ್ಟ ಕಾನನದಂತೆ ಕಾಣುತ್ತಿರೋ ಇದು ಸೇವಂತಿಗೆ ಹೂವಿನ ತೋಟ. ಆದ್ರೆ ಈ ಸೇವಂತಿಗೆ ನಾರು ನಾಟಿ ಮಾಡಿ ಐದೂವರೆ ತಿಂಗಳು ಕಳೆದ್ರೂ, ಇದುವರೆಗೂ ಹೂ ಬಿಟ್ಟಿಲ್ಲ..ಸೇವಂತಿಗೆ ಗಿಡಗಳು ಮಾತ್ರ ಹಚ್ಚು ಹಸುರಾಗಿ ಬೆಳೆದು ನಿಂತಿವೆ. ಆದ್ರೆ ಹೂ ಮಾತ್ರ ಬಿಡ್ತಾ ಇಲ್ಲ. ಇಂತಹ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಕುಂಟಚಿಕ್ಕನಹಳ್ಳಿಯ ರೈತ ಪ್ರಕಾಶ್ ಅಂತ. ರೈತ ಪ್ರಕಾಶ್ ರಮಾಪುರ ಗ್ರಾಮದ ಲೋಕೇಶ್ ಎಂಬಾತನ ನರ್ಸರಿಯಲ್ಲಿ ಸೆಂಟ್ ಎಲ್ಲೋ ನಾರು ನೀಡುವಂತೆ ಕೇಳಿದ್ದಾನೆ. ಆದ್ರೆ ನರ್ಸರಿ ಲೋಕೇಶ್ ಈ ಬಾರಿ ಸೂಪರ್ ಎಲ್ಲೋ ಅಂತ ಹೊಸ ನಾರು ಬಂದಿದೆ. ಸೂಪರ್ ಎಲ್ಲೋ ಸೇವಂತಿಗೆ ಸೂಪರ್ ಆಗಿ ಬರಲಿದೆ ಅಂತ ನಾರು ಕೊಟ್ಟಿದ್ದಾನೆ. ನರ್ಸರಿ ಲೊಕೇಶ್ ಮಾತು ನಂಬಿ ಸೂಪರ್ ಎಲ್ಲೋ ಹಾಕಿದ ರೈತ ಪ್ರಕಾಶ್ ಈಗ ಮೋಸ ಹೋಗಿದ್ದಾನೆ.

ರೈತ ಪ್ರಕಾಶ್ ತನ್ನ ಒಂದು ಎಕರೆಯಲ್ಲಿ ೪೦೦೦ ಸೆಂಟ್ ಎಲ್ಲೋ ನಾರು ಹಾಗೂ ನರ್ಸರಿ ಮಾಲೀಕ ಲೋಕೇಶ್ ಮಾತು ನಂಬಿ ಹೊಸದಾಗಿ ೬೦೦೦ ಸೂಪರ್ ಎಲ್ಲೋ ಸೇವಂತಿಗೆ ನಾರು ನಾಟಿ ಮಾಡಿದ್ದಾನೆ. ಸೆಂಟ್ ಎಲ್ಲೋ ನಾರು ಬಂಪರ್ ಇಳುವರಿ ಬಂದಿದೆ. ಆದ್ರೆ ಸೂಪರ್ ಎಲ್ಲೋ ಮಾತ್ರ ಇದುವರೆಗೂ ಹೂವನ್ನೇ ಬಿಡ್ತಾ ಇಲ್ಲ,. ಗಿಡ ಮಾತ್ರ ದಷ್ಟಪುಷ್ಟವಾಗಿ ಬೆಳೆದು ನಿಲ್ಲುತ್ತಿದೆ. ಮೂರು ತಿಂಗಳಿಗೆ ಹೂ ಬಿಡಬೇಕಾದ ಗಿಡಗಳು ಐದೂವರೆ ತಿಂಗಳು ಕಳೆದ್ರೂ ಹೂ ಬಿಡ್ತಾ ಇಲ್ಲ. ಇಂದು ಬಿಡುತ್ತೆ ನಾಳೆ ಬಿಡುತ್ತೆ ಅಂತ ಕಾದು ಕಾದು ರೈತ ಹೈರಾಣಾಗುವಂತೆ ಮಾಡಿದ್ದು ಸದ್ಯ ನ್ಯಾಯಕ್ಕಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮೊರೆ ಹೋಗಿದ್ದು ನ್ಯಾಯ ಕೊಡುವಂತೆ ಆಗ್ರಹಿಸಿದ್ದಾರೆ.

ರೈತ ಪ್ರಕಾಶ್ ನರ್ಸರಿ ಮಾಲೀಕ ಲೋಕೇಶ್ ಬಳಿ ಒಂದು ಸೇವಂತಿಗೆ ನಾರಿಗೆ ೨ ರೂಪಾಯಿಯಂತೆ ಖರೀದಿ ಮಾಡಿದ್ದು, ನಾರು ನಾಟಿ ಮಾಡಿ ಕಳೆದ ಐದೂವರೆ ತಿಂಗಳಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇನ್ನೂ ಸದ್ಯ ಮಾರುಕಟ್ಟೆಯಲ್ಲಿ ೧ ಕೆಜಿ ಸೇವಂತಿಗೆ ಹೂವಿಗೆ ೧೦೦ ರಿಂದ ೧೫೦ ರೂಪಾಯಿ ಇದೆ. ಆದ್ರೆ ಈಗ ರೈತ ಕಷ್ಟು ಪಟ್ಟು ಬೆಳೆದ ಸೇವಂತಿಗೆ ಗಿಡ ಹೂ ಬಿಡ್ತಾ ಇಲ್ಲ ಇದ್ರಿಂದ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಆದ್ರಲ್ಲೂ ರೈತನ ಐದೂವರೆ ತಿಂಗಳ ಶ್ರಮ, ದುಡ್ಡು ಸಮಯ ಎಲ್ಲವೂ ವ್ಯರ್ಥವಾಗಿದ್ದು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾನೆ.

ಮಲ್ಲಪ್ಪ. ಎಂ.ಶ್ರೀರಾಮ್.ಪವರ್ ಟಿವಿ. ಚಿಕ್ಕಬಳ್ಳಾಪುರ.

RELATED ARTICLES

Related Articles

TRENDING ARTICLES