ಬೆಂಗಳೂರು : ಕಳೆದ 6 ತಿಂಗಳಿನಿಂದ ಪೀಣ್ಯ ಫ್ಲೈ ಓವರ್ ದುಸ್ಥಿತಿಗೆ ತಲುಪಿದ್ದು, ಕೇವಲ ದ್ವಿಚಕ್ರ ವಾಹನ, ಕಾರು ಸೇರಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಇದ್ರಿಂದ ಕಳೆದ ಆರು ತಿಂಗಳಿಂದ ತುಮಕೂರು ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ವುಂಟಾಗುತ್ತಿತ್ತು.ಆದ್ರೆ, ಈಗ ಫ್ಲೈ ಓವರ್ ಮೇಲೆ 20 ಟನ್ ವರೆಗಿನ ವೆಹಿಕಲ್ ಓಡಾಟಕ್ಕೆ ಅವಕಾಶ ನೀಡಬಹುದು ಅಂತ ತಙ್ಞರು ವರದಿ ನೀಡಿದ್ದಾರಂತೆ.
ಸದ್ಯ 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಪೀಣ್ಯ ಫ್ಲೈ ಓವರ್ ಮೇಲೆ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧದಿಂದ ಫುಲ್ ಟ್ರಾಫಿಕ್ ಜಾಮ್ ಆಗ್ತಿದ್ದು, ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಸಮಸ್ಯೆ ಹೆಚ್ಚಾಗ್ತಾ ಇತ್ತು. ಇದಕ್ಕೆ ಮುಖ್ಯ ಕಾರಣ ಪ್ಲೈ ಓವರ್ ನ ಎರಡು ಪಿಲ್ಲರ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೆವಿ ವೆಹಿಕಲ್ ನಿರ್ಬಂಧ ಮಾಡಲಾಗಿತ್ತು.
ಕಳೆದ ವರ್ಷ ಡಿಸೆಂಬರ್ 25 ನೇ ತಾರೀಕು ಹೆವಿ ವೆಹಿಕಲ್‌ಗಳ ನಿರ್ಬಂಧ ಮಾಡಲಾಗಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪಾಧಿಕಾರದವರು ಮತ್ತು ಐಐಎಸ್‌ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರಂತೆ.ಒಂದು ಟ್ರಕ್ ಭಾರ 10 ರಿಂದ 20 ಟನ್ ಇರುತ್ತೆ. ೨೦ ಟನ್ ಗಿಂತ ಹೆಚ್ಚು ಭಾರ ಹಾಕುವ ವೆಹಿಕಲ್ ಗಳನ್ನ ವೆಹಿಕಲ್ ಹಾಕಬಾರದು.
ಪ್ಲೈ ಓವರ್ ಮುಂಭಾಗದಲ್ಲಿ ಲೋಡಿಂಗ್ ಮಿಷನ್ ಇಟ್ಟು ಚೆಕ್ ಮಾಡಿ ವೆಹಿಕಲ್ ಬಿಡಬೇಕು.ಒಂದು ವಾಹನ ೨೦ ಟನ್ ಗಿಂತ ಹೆಚ್ಚು ಭಾರ ಹಾಕಬಾರದು. ಅದನ್ನ ಪರಿಶೀಲನೆ ಮಾಡಿ ವೆಹಿಕಲ್ ಮೂಮೆಂಟ್ ಗೆ ಸಮ್ಮತಿ ನೀಡಬೇಕು ಅಂತ IISC ವರದಿ ನೀಡಿದೆಯಂತೆ.
ಯಾವ್ಯಾವ ವೆಹಿಕಲ್ ಓಡಾಡಬಹುದು ? ಅಂತ ನೋಡೋದಾದ್ರೆ.
ಗೂಡ್ಸ್ ಟ್ರಕ್ಸ್
ಬಸ್ ಓಡಾಡಬಹುದು .
ಖಾಲಿ ಲಾರಿ ಓಡಾಡಬಹುದು
ಟ್ರಕ್ ಗಳು ೨೦ ಟನ್ ಗಿಂತ ಮೇಲ್ಪಟ್ಡು ಇರಬಾರದಯ
ಸದ್ಯ ಇವತ್ತಿನಿಂದನೇ 20 ಟನ್ ವರೆಗಿನ ವೆಹಿಕಲ್ ಓಡಾಡಬಹುದು ಅಂತ ಐ.ಐ.ಎಸ್.ಸಿ ವರದಿ ನೀಡಿದೆ. ಆದ್ರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆವಿ ವೆಹಿಕಲ್ ಓಡಾಟಕ್ಕೆ ಯಾವಾಗ ಅವಕಾಶ ಕೊಡುತ್ತೋ ಅಂತ ನೋಡಬೇಕಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು