ವಿಜಯನಗರ: ಕೂಡ್ಲಿಗಿ ಬಣವಿಕಲ್ಲು ಕೃಷಿ ಪತ್ತಿನ ಸಂಘದಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿ, ಗುಮಾಸ್ತನ ವಿರುದ್ಧ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಣವಿಕಲ್ಲು ಕೃಷಿ ಪತ್ತಿನ ಸಂಘದಲ್ಲಿ 2021-22 ರಲ್ಲಿ ರೈತರಿಗೆ ನೀಡಿದ ಬಡ್ಡಿರಹಿತ ಸಾಲವನ್ನು ಮರು ಪಾವತಿಸಿಕೊಂಡು BDCC ಬ್ಯಾಂಕಿಗೆ ಪಾವತಿಸದೆ 38.50 ಲಕ್ಷ ಹಣವನ್ನು ಸಹಕಾರ ಸಂಘದ ಕಾರ್ಯದರ್ಶಿ ಚನ್ನಯ್ಯ ಮತ್ತು ಗುಮಾಸ್ತ ಪ್ರದೀಪಕುಮಾರ್ 44 ರೈತರಿಂದ ಸಾಲ ಪಾವತಿಸಿಕೊಂಡು ರಸೀದಿ ನೀಡಿದ್ದಾರೆ.
ಆದರೆ, ರೈತರಿದ ವಸೂಲಿಯಾದ ಹಣವನ್ನು ವೈಯಕ್ತಿವಾಗಿ ಬಳಸಿಕೊಂಡು ಸಹಕಾರ ಸಂಘಕ್ಕೆ ವಂಚಿಸಿರುವುದು 2022 ಜ.31ರಂದು ಸಹಕಾರಿ ಸಂಘದ ಕ್ಷೇತ್ರಾಧಿಕಾರಿ ಕೋಟ್ರೇಶ ಸಂಘದ ದಾಖಲೆ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಅಲ್ಲದೆ ಬ್ಯಾಂಕ್ ಅಧ್ಯಕ್ಷರಿಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ 2022 ಫೆ.18ರಂದು 15 ಲಕ್ಷ ಅದೇ ತಿಂಗಳು 28 ರಂದು 2 ಲಕ್ಷ ಪಾವತಿಸಿದ್ದಾರೆ.
ಇನ್ನೂ 21.50 ಲಕ್ಷ ಪಾವತಿಸಿಲ್ಲ. ಸಂಘದ ಕಾರ್ಯದರ್ಶಿ ಮತ್ತು ಗುಮಾಸ್ತ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು BDCC ಬ್ಯಾಂಕ್ ಕ್ಷೇತ್ರಾಧಿಕಾರಿ ಕೊಟ್ರೇಶ್ ಇಬ್ಬರ ವಿರುದ್ಧ ನೀಡಿದ ದೂರಿನಂತೆ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.