Monday, December 23, 2024

ಮಂಗಳೂರಿನ ಉಳ್ಳಾಲದಲ್ಲಿ ಕಡಲ್ಕೊರೆತ

ಮಂಗಳೂರು : ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರಿನ ಉಳ್ಳಾಲದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.

ಉಳ್ಳಾಲದ ಸೋಮೇಶ್ವರ, ಬಟ್ಟಂಪಾಡಿ ಪ್ರದೇಶದಲ್ಲಿ ಕಡಲಿನ ಅಬ್ಬರ ತೀರ ನಿವಾಸಿಗಳನ್ನು ಭಯಕ್ಕೀಡು ಮಾಡಿದೆ.‌. ತೀರಕ್ಕೆ ಬಂದು ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳಿಂದ ಬೀಚ್ ರಸ್ತೆ ಕೊಚ್ಚಿಕೊಂಡು ಹೋಗಿದೆ. ಸೋಮೇಶ್ವರ, ಬಟ್ಟಂಪಾಡಿಯಲ್ಲಿ ರಸ್ತೆಯೇ ಕೊಚ್ಚಿ ಹೋಗಿದೆ.

ಇದಲ್ಲದೆ, ತೀರದಲ್ಲಿರುವ ತೆಂಗಿನ ಮರಗಳು ಕೂಡ ಸಮುದ್ರ ಪಾಲಾಗುತ್ತಿವೆ. ಈ ಭಾಗದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಕೊಟ್ಟರೂ, ಸೂಕ್ತವಾಗಿ ಸ್ಪಂದಿಸದೆ ಅವೈಜ್ಞಾನಿಕವಾಗಿ ಸಮುದ್ರಕ್ಕೆ ಕಲ್ಲು ಹಾಕಿದ ಕಾರಣ ಕಡಲ್ಕೊರೆತ ಮತ್ತಷ್ಟು ಹೆಚ್ಚುತ್ತಿದೆ.

RELATED ARTICLES

Related Articles

TRENDING ARTICLES