Friday, October 18, 2024

ದೇವಸ್ಥಾನದ ವಿಗ್ರಹವನ್ನೇ ಕದ್ದೋಯ್ದ ಖದೀಮರು

ಕಲಬುರಗಿ : ಅರೇ ಹಣ, ಚಿನ್ನಾಭರಣವನ್ನ ಸಾಲುಸಾಲಾಗಿ ಏನಕ್ಕೆ ಜೋಡಿಸಿ ಇಟ್ಟಿದ್ದಾರೆ ಅಂತಾ ನೀವು ತಲೆ ಕೆಡಿಸಿಕೊಳ್ತಿರಬಹುದು. ಅಷ್ಟಕ್ಕೂ ಇವೆಲ್ಲ ವಸ್ತುಗಳು ಕಳುವಾಗಿದ್ದವು. ಕಲಬುರಗಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿಂದು ಜಿಲ್ಲಾ ಪೊಲೀಸರು ಪ್ರಾಪರ್ಟಿ ರಿಕವರಿ ರಿಟರ್ನ್ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಕಳೆದ ವರ್ಷ ನವೆಂಬರ್​ನಿಂದ 2022ರ ಮೇ ತಿಂಗಳವರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಒಟ್ಟು 77 ಕಳ್ಳತನ ಪ್ರಕರಣಗಳನ್ನ ಬೇಧಿಸಿರುವ ಪೊಲೀಸರು ಒಟ್ಟು 133 ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನೂ ಬಂಧಿತರಿಂದ 1124.37 ಗ್ರಾಂ ಚಿನ್ನ, 8481 ಗ್ರಾಂ ಬೆಳ್ಳಿ, ನಗದು ಹಣ, ಸಂಗಮೇಶ್ವರ ದೇವರ ವಿಗ್ರಹ, ಹತ್ತಾರು ಬೈಕ್‌ಗಳು, ಮೋಟಾರ್ ಪಂಪ್‌ಸೆಟ್, ಕ್ರೂಸರ್, ಎತ್ತುಗಳು ಸೇರಿದಂತೆ ಹತ್ತು ಹಲವು ವಸ್ತುಗಳನ್ನ ವಶಪಡಿಸಿಕೊಂಡು ಇಂದು SP ಇಶಾ ಪಂತ್ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ.

ಇನ್ನೂ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಸಣ್ಣೂರ ಗ್ರಾಮದ ಬಳಿ ದರೋಡೆಕೋರರ ಗ್ಯಾಂಗ್ ಕಾರೊಂದು ನಿಲ್ಲಿಸಿದನ್ನ ಕಂಡು ಅಟ್ಯಾಕ್ ಮಾಡಿತ್ತು. ಚಾಕು ತೋರಿಸಿ ಕಾರಲ್ಲಿದ್ದ ಮಹಿಳೆಯೋರ್ವಳ 17 ಗ್ರಾಂ ಮಾಂಗಲ್ಯ ಸರ ಮತ್ತು 10 ಸಾವಿರ ರೂಪಾಯಿ ನಗದು ಹಣವನ್ನ ದೋಚಿಕೊಂಡು ಪರಾರಿಯಾಗಿದ್ದರು. ಅದು ಇಂದು ಮಹಿಳೆಯ ಕೈ ಸೇರಿದೆ.

ಅದೆನೇ ಇರಲಿ ಕಷ್ಟಪಟ್ಟು ಕೂಡಿಟ್ಟ ಹಣ, ಚಿನ್ನಾಭರಣ, ವಾಹನಗಳು ಮರಳಿ ಸಿಕ್ಕಿದ್ದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES