Wednesday, December 25, 2024

ಕೂದಲು ಉದುರುವಿಕೆ ಸಮಸ್ಯೆ; ಯುವತಿ ಆತ್ಮಹತ್ಯೆ

ಮೈಸೂರು: ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸರಗೊಂಡು ಯುವತಿ ನೇಣಿಗೆ ಶರಣಾಗಿರುವಂತಹ ಘಟನೆ ಮೈಸೂರು ನಗರದ ರಾಘವೇಂದ್ರ ನಗರ ಬಡಾವಣೆಯಲ್ಲಿ ನಡೆದಿದೆ.

ಕಾವ್ಯಶ್ರೀ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹಲವು ದಿನಗಳಿಂದ ಅನಾರೋಗ್ಯದಿಂದ ಕಾವ್ಯಶ್ರೀ ಬಳಲುತ್ತಿದ್ದು, ನಿರಂತರವಾಗಿ ಕೂದಲು ಉದುರುತ್ತಿತ್ತು. ಸಾಕಷ್ಟು ಚಿಕಿತ್ಸೆ ಪಡೆದರೂ ಪರಿಹಾರ ದೊರೆತಿರಲಿಲ್ಲ. ಕೂದಲು ಸಂಪೂರ್ಣವಾಗಿ ಕಳೆದುಕೊಂಡ ಹಿನ್ನೆಲೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಸದ್ಯ ಪ್ರಕರಣ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES