Monday, December 23, 2024

ಸಂಚಲನ ಮೂಡಿಸಿತ್ತು ಗಣಿಯ ಗೋಲ್ಡನ್​ ಟೈಮ್​​​

ನಗು ಮೊಗದ ಸರದಾರ, ಕೋಟಿ ಕೋಟಿ ಕನ್ನಡಿಗರ ಮನೆ ಮಗ, ನಮಸ್ಕಾರ ಎನ್ನುತ್ತಲೇ ಅಭಿಮಾನಿಗಳ ಎದೆಯಲ್ಲಿ ಪುಟ್ಟದೊಂದು ಗುಡಿ ಕಟ್ಟಿದ ಗೋಲ್ಡನ್​ ಹುಡುಗ ಗಣೇಶ್​​​. ಸಕ್ಕರೆಯಂತ ಮನಸ್ಸು, ಮಗುವಿನ ನಗು, ಗುಳಿ ಕೆನ್ನೆಯ ಚೆಲುವ ಗಣೇಶ್​ಗೆ ಇಂದು ಬರ್ತ್​ ಡೇ ಸಂಭ್ರಮ. ಯೆಸ್​​.. ಮುಂಗಾರಿನ ಸೋನೆ ಮಳೆ ಸುರಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ ಪ್ರತಿಭಾನ್ವಿತ ಕಲಾವಿದನಿಗೆ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ.

ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್​ ಟೈಮ್​​ ಒಂದಿತ್ತು. ಖಾಸಗಿ ವಾಹಿನಿಯಲ್ಲಿ ಕಾಮಿಡಿ ಮಾಡಿಕೊಂಡಿದ್ದ ಚೆಲ್ಲಾಟದ ಹುಡುಗ ಗಣೇಶ್​​​ ಮುಂಗಾರುಮಳೆ ಚಿತ್ರದ ನಂತ್ರ ಧಿಡೀರ್​​ ಗೆಲುವಿನ ಶಿಖರ ತಲುಪಿದ್ರು. ಗಣೇಶ್​​ ಅಭಿನಯದ ಮೋಡಿಗೆ ಇಡೀ ಕರುನಾಡೇ ಫಿದಾ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು, ಅಜ್ಜ ಅಜ್ಜಿಯರಿಗೂ ಗಣಿ ಅಂದ್ರೆ ಅಪರಿಮಿತ ಪ್ರೀತಿ. ಟೀನೇಜ್​ ಹುಡುಗೀರ ಪಾಲಿಗೆ ಫೇವರಿಟ್ ನಮ್​ ಗಣಿ​​​​. ಯೆಸ್​​​.. ಯಾವುದು ಅತಿಶಯೋಕ್ತಿಯಲ್ಲ. ಗೋಲ್ಡನ್​​​​ ಸ್ಟಾರ್​ ಗಣೇಶ್​​ ಅಕ್ಷರಶಃ ಸಿನಿಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದರು.

ಗಣೇಶ್​​ ತಮ್ಮ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ ಮಿರಾಕಲ್​ ಮಾಡಿದ್ದ ಮೋಸ್ಟ್​ ಟ್ಯಾಲೆಂಟೆಡ್​​ ಆ್ಯಕ್ಟರ್​​ಸಾಮಾನ್ಯನಂತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಅಸಮಾನ್ಯನಾಗಿ ಬೆಳೆದ ಸಿನಿಜರ್ನಿಯನ್ನು ನೋಡಿದ್ರೆ ಒಂದು ಕ್ಷಣ ಎಂತವ್ರಿಗೂ ಅಚ್ಚರಿಯಾಗುತ್ತೆ. ಗಣೇಶ್​​ ಜೀವನಹಾದಿಯೇ ಯುವಕಲಾವಿದರಿಗೆ ಒಂದು ಮಾದರಿ. ಇಂತಹ ಕನ್ನಡದ ಪ್ರತಿಭಾನ್ವಿತ ಕಲಾವಿದ ಇಂದು ಬರ್ತ್​ಡೇ ಖುಷಿಯಲ್ಲಿದ್ದಾರೆ. ಚಿತ್ರರಂಗದ ಸ್ಟಾರ್​ ನಟ ನಟಿಯರು, ಅಭಿಮಾನಿಗಳು ಪ್ರೀತಿಯ ಗಣೇಶ್​​ಗೆ ಬರ್ತ್​ ಡೇ ವಿಶ್​​ ತಿಳಿಸ್ತಿದ್ದಾರೆ.

ಆದ್ರೆ, ಅಕ್ಕರೆಯ ಅಭಿಮಾನಿಗಳಿಗೆ ಗೋಲ್ಡನ್​ ಗಣಿ ಭಾವನಾತ್ಮಕ ಪತ್ರ ಬರೆದು ಬೇಸರ ಮೂಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಗಣೇಶ್​​ ಅಭಿಮಾನಿಗಳೊಂದಿಗೆ ಬರ್ತ್​ಡೇ ಆಚರಿಸಿಕೊಂಡಿಲ್ಲ. ಈ ಭಾರಿಯಾದರೂ ಈ ಕನಸು ನನಸಾಗಲಿದೆ ಎಂದುಕೊಂಡಿದ್ದ ಮೆಚ್ಚಿನ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಯೆಸ್​​.. ನನ್ನ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ. ನಿಮಗೆ ನಾನು ಋಣಿಯಾಗಿದ್ದೀನಿ. ಆದ್ರೇ ಈ ಕೋವಿಡ್​​ ಕಾರಣ ನಾನು ಮನೆಯಲ್ಲಿರಲು ಸಾಧ್ಯವಿಲ್ಲ. ನನಗಾಗಿ ತರುವ ಹಾರ ತುರಾಯಿಗಳ ಬದಲಾಗಿ ನೀವಿದ್ದಲ್ಲಿಯೇ ಅಗತ್ಯ ಇರುವವರಿಗೆ ಸಹಾಯ ಮಾಡಿ ಎಂದಿದ್ದಾರೆ. ಈ ಮೂಲಕ ಸಮಾಜದ ಹಿತ ಸಾರುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಚೆಲ್ಲಾಟದಿಂದ ಶುರುವಾಗಿ, ಮುಂಗಾರುಮಳೆ, ಚೆಲುವಿನ ಚಿತ್ತಾರ, ಶೈಲೂ, ಕೃಷ್ಣ, ಗಾಳಿಪಟ, ಅರಮನೆ, ಮುಗುಳುನಗೆ ಹೀಗೆ ಸಾಲು ಸಾಲು ಹಿಟ್​ ಸಿನಿಮಾ ನೀಡಿದ ಕನ್ನಡದ ಅಕ್ಕರೆಯ ಕಲಾವಿದ ಗಣೇಶ್​​. ಇದೀಗ ಬಾನದಾರಿಯಲ್ಲಿ, ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇವ್ರ ಬರ್ತ್​ ಡೇ ಸಲುವಾಗಿ ಗಾಳಿಪಟ 2 ಚಿತ್ರತಂಡ ನಾನಾಡದ ಮಾತೆಲ್ಲವ ಲಿರಿಕಲ್​ ಸಾಂಗ್​ ರಿಲೀಸ್​ ಮಾಡಿ ಬರ್ತ್​ಡೇಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟಿದೆ. ಇಂತಹಾ ಮೇರು ಪ್ರತಿಭೆಗೆ ಪವರ್​ ಟಿವಿ ಕಡೆಯಿಂದ ಬರ್ತ್​ ಡೇ ವಿಶ್​ ತಿಳಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES