Sunday, November 3, 2024

ಅಗಸೆಬೀಜದಿಂದ ಆಗುವ ಉಪಯೋಗಳೇನು ಗೊತ್ತಾ?

ಎಷ್ಟೋ ಜನರಿಗೆ ಅಗಸೆಬೀಜದ ಮಹತ್ವ ತಿಳಿದಿಲ್ಲ. ಭಾರತ ದೇಶ ಜನರು ಇದನ್ನ ಹೇರಳವಾಗಿ ಬಳಸುತ್ತಾರೆ. ಕಾರಣ ಅಗಸೆಬೀಜ ಬಹಳಷ್ಟು ಪೋಷಕಾಂಶಗಳಿಂದ ತುಂಬಿದೆ. ಅಗಸೆ ಬೀಜವನ್ನ ದಿನನಿತ್ಯ ಬಳಸುವುದರಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ನಾವು ಹೇಳ್ತೀವಿ.

ಅಗಸೆಬೀಜ ಆರೋಗ್ಯಕ್ಕೆ ಮಾತ್ರವಲ್ಲದೇ, ಬೇರೆ ಯಾವುದಕ್ಕೆ ಬಳಸಿದರೆ ಏನು ಲಾಭ, ಯಾವಾಗ ಬಳಸಿದರೆ ಎಷ್ಟು ಉಪಯುಕ್ತ ಅನೋದನ್ನ ತಿಳಿದುಕೊಂಡರೆ ಅಗಸೆಬೀಜದಿಂದ ಸಿಗುವ ಲಾಭಗಳನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಇನ್ನು ಇದರಿಂದ ಮಹಿಳೆಯರಿಗೆ ಬಹಳಷ್ಟು ಲಾಭಗಳಿವೆ. ಅನೇಕ ಸಮಸ್ಯೆಗಳನ್ನ ನಿವಾರಿಸುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ ಅಷ್ಟೇ ಅಲ್ಲದೇ, ತೂಕ ಇಳಿಸುವಲ್ಲಿ ಸಹಕಾರಿ ಹಾಗೇ ತಲೆಹೊಟ್ಟು ನಿವಾರಿಸಿ ಕೂದಲು ಬೆಳವಣಿಗೆಗೆ ಉಪಯುಕ್ತವಾಗಿದೆ. ಹಾಗೆಯೇ ಹೆಣುಮಕ್ಕಳ ಮುಟ್ಟಿನ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಅಗಸೆಬೀಜದಿಂದ ಆಗುವ ಪ್ರಯೋಜನಗಳು ಈ ಕೆಳಗಿನಂತಿವೆ.

* ದೇಹದ ತೂಕ ಇಳಿಕೆ

* ತಲೆಹೊಟ್ಟು ನಿವಾರಣೆ

* ತಲೆಕೂದಲ ಬೆಳವಣಿಗೆ

* ಆರೋಗ್ಯವೃದ್ಧಿ

* ಗ್ಯಾಸ್ಟಿಕ್, ಅಸಿಡಿಟಿಗೆ ರಾಮಬಾಣ

* ಮುಟ್ಟಿನ ಸಮಸ್ಯೆ ನಿವರಣೆ

ಅಗಸೆಬೀಜ ದೇಹದ ತೂಕದ ಇಳಿಕೆಗೆ ಸಹಕಾರಿ :

ಅಗಸೆ ಬೀಜವನ್ನ ಪುಡಿ ಮಾಡಿ ಬಿಸಿ ನೀರಿನೊಂದಿಗೆ ಬೆರೆಸಿ ದಿನನಿತ್ಯ ಸೇವನೆ ಮಾಡುವುದರಿಂದ ದೇಹದ ಕೊಬ್ಬನ್ನ ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಗ್ಯಾಸ್ಟಿಕ್, ಅಸಿಡಿಟಿ, ಜೀರ್ಣಕ್ರಿಯೆಗಳಂತಹ ಅನೇಕ ಸಮಸ್ಯೆಗಳನ್ನ ನಿವಾರಿಸುತ್ತದೆ. ದೇಹದ ಉಷ್ಣತೆಯನ್ನ ಕಡಿಮೆ ಮಾಡಬಲ್ಲ ಗುಣವನ್ನ ಈ ಅಗಸೆಬೀಜ ಹೊಂದಿದೆ.

ತಲೆಕೂದಲ ಬೆಳವಣಿಗೆಗೆ ಅಗಸೆಬೀಜ ಉಪಯುಕ್ತ :

ಅಗಸೆಬೀಜವನ್ನ ನೀರಿನೊಂದಿಗೆ ಕುದಿಸಿ ತಣ್ಣಗಾದ ನಂತರ ಅದನ್ನ ತಲೆಯಬುಡಕ್ಕೆ ಹಚ್ಚುವುದರಿಂದ ತಲೆಯಹೊಟ್ಟು ನಿವಾರಣೆಯಾಗುವುದರ ಜೊತೆಗೆ ಆ ಮಿಶ್ರಣವನ್ನ ಇಡೀ ಕೂದಲಿಗೆ ಹಚ್ಚಿ ಒಂದು ಘಂಟೆಯ ಬಳಿಕ ತೊಳೆಯುವುದರಿಂದ ನಯವಾದ, ದಟ್ಟವಾದ, ಹೊಳಪು ಸಹಿತ ಕೂದಲನ್ನ ಪಡಯಬಹುದಾಗಿದೆ.

ಮುಟ್ಟಿನ ಸಮಸ್ಯೆಗೆ ರಾಮಬಾಣ :

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಹೆಚ್ಚಾಗಿದೆ ಆದರೆ ಅಗಸೆಬೀಜವನ್ನ ಪ್ರತಿನಿತ್ಯ ಸೇವನೆ ಮಾಡುವುದರಿಂದ ಅಂದರೆ ಬಿಸಿ ನೀರಿನೊಂದಿಗೆ ಒಂದು ಚಮಚ ಅಗಸೆ ಬೀಜದ ಪುಡಿಯನ್ನ ಬೆರೆಸಿ ಅದನ್ನ ಸೇವಿಸುವುದು ಅಥವಾ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಬೆರೆಸಿ ತಿನ್ನುವುದರಿಂದ ಆ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಸಿಂಚನಗೌಡ, ಪವರ್​ಟಿವಿ

RELATED ARTICLES

Related Articles

TRENDING ARTICLES