Sunday, December 22, 2024

ಶ್ವಾನದೊಂದಿಗೆ ಚಾರ್ಲಿ ಕಣ್ತುಂಬಿಕೊಂಡ ಜನಾರ್ದನ ರೆಡ್ಡಿ

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳ ಗತ್ತು ಬೇರೆಯದ್ದೇ ಲೆವೆಲ್​ಗಿದೆ. ನಮ್ಮ ಕಂಟೆಂಟ್ ಹಾಗೂ ಮೇಕಿಂಗ್ ಪ್ಯಾಟ್ರನ್​ಗೆ ಬಾಲಿವುಡ್ ಮಂದಿ ದಂಗಾಗಿದ್ದಾರೆ. ಅವ್ರನ್ನ ಬಗ್ಗು ಬಡೆಯುತ್ತಿರೋ ಸಿನಿಮಾಗಳ ಸಾಲಿನಲ್ಲಿ ಚಾರ್ಲಿ ಕೂಡ ಸದ್ದು ಮಾಡ್ತಿದೆ. ಸದ್ಯ ಈ ಸಿನಿಮಾನ ಗಾಲಿ ಜನಾರ್ದನ ರೆಡ್ಡಿ ತಮ್ಮ ಪ್ರೀತಿಯ ಶ್ವಾನದೊಂದಿಗೆ ವೀಕ್ಷಿಸಿದ್ದಾರೆ.

ಶ್ವಾನದೊಂದಿಗೆ ಚಾರ್ಲಿ ಕಣ್ತುಂಬಿಕೊಂಡಿದ್ದಾರೆ ಜನಾರ್ದನ ರೆಡ್ಡಿ. ಹೌದು.. 2015ರಲ್ಲಿ ಒಂದಷ್ಟು ಕಷ್ಟದ ದಿನಗಳನ್ನು ಎದುರಿಸಿ ಮನೆಗೆ ಬಂದ ನಂತ್ರ ನೆಮ್ಮದಿಗಾಗಿ ನಾಯಿಯೊಂದನ್ನ ಸಾಕಿದ ರೆಡ್ಡಿ, ಅದಕ್ಕೆ ರಾಖಿ ಅಂತ ಹೆಸರಿಟ್ಟು, ಹೆಚ್ಚು ಕಾಲ ಅದರೊಟ್ಟಿಗೆ ಕಳೆಯುತ್ತಿದ್ರಂತೆ. ನಂಬಿಕೆ, ವಿಶ್ವಾಸಾರ್ಹ ರಾಖಿಯನ್ನ ಕಂಡು ರೆಡ್ಡಿ ಥ್ರಿಲ್ ಆಗಿದ್ರು. ಇದೀಗ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾನ ಕುಟುಂಬ ಸೇರಿದಂತೆ ರಾಖಿ ಜೊತೆ ಕೂತು ವೀಕ್ಷಿಸಿದ್ದಾರೆ. ಅದ್ರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಡಿಟೈಲ್ಡ್ ಆಗಿ ಬರೆದುಕೊಂಡಿದ್ದಾರೆ. ಮನಸು ಕರಿಗಿಸೋ ಚಾರ್ಲಿ ನಟನೆ, ರಕ್ಷಿತ್​ರ ಆ್ಯಕ್ಟಿಂಗ್​ನ ಶ್ಲಾಘಿಸಿದ್ದಾರೆ ಜನಾರ್ದನ ರೆಡ್ಡಿ. ಇಂತಹ ಒಳ್ಳೆಯ ಚಿತ್ರಕ್ಕೆ ಶ್ರಮಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಅಂತ ಪ್ರಶಂಸಿಸಿದ್ದಾರೆ.

ಕಿರಣ್ ರಾಜ್ ನಿರ್ದೇಶನದ ಹಾಗೂ ರಕ್ಷಿತ್ ನಟನೆಯ ಈ ಭಾವನಾತ್ಮಕ ಕಥೆ ನಿಜಕ್ಕೂ ನೋಡುಗರನ್ನ ಮಂತ್ರಮುಗ್ಧಗೊಳಿಸುತ್ತಿದೆ. ರಜಿನೀಕಾಂತ್​ರಂತಹ ಸೂಪರ್ ಸ್ಟಾರ್ ಈ ಚಿತ್ರ ನೋಡಿ ಭಲೇ ಎಂದಿದ್ರು. ಇದೀಗ ನೂರು ಕೋಟಿ ಗಡಿಯಲ್ಲಿರೋ ಚಾರ್ಲಿಯನ್ನ ಗಣಿ ದಣಿ ನೋಡಿ ಶಹಬ್ಬಾಶ್ ಅಂದಿರೋದು ಚಿತ್ರತಂಡದ ಸಿನಿಮೋತ್ಸಾಹವನ್ನು ಮತ್ತಷ್ಟು ಹಿಗ್ಗಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES