ಗದಗ : ಅದು ಮುದ್ರಣ ನಗರಿ ಹೃದಯ ಭಾಗದಲ್ಲಿರುವ ಬೃಹತ್ ಐತಿಹಾಸಿಕ ಕೆರೆ. ಐತಿಹಾಸಿಕ ಕೆರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆಗ ಒತ್ತುವರಿ ಮಾಡಿಕೊಂಡವ್ರಿಗೆ ಈಗ ಬುಲ್ಡೋಜರ್ ಭಯ ಆರಂಭವಾಗಿದೆ. ಕೆರೆ ಹಾಗೂ ಬಫರ್ ಝೋನ್ ವ್ಯಾಪ್ತಿಯ ಕಟ್ಟಡಗಳ ತೆರವು ನೋಟಿಸ್ ಸರ್ವ್ ಆಗಿವೆ. ಗದಗ ಐತಿಹಾಸಿಕ ಕೆರೆಯಲ್ಲಿನ ಕಟ್ಟಡಗಳಗಳಿಗೆ ಕಂಟಕ ಶುರುವಾಗಿರೋ ಕುರಿತು ಒಂದು ವರದಿ ಇಲ್ಲಿದೆ.
ಗದಗನಲ್ಲೂ ಬುಲ್ಡೋಜರ್ ಘರ್ಜಿಸುವಂತೆ ಸಾರ್ವಜನಿಕರ ಒತ್ತಾಯ..! ಹೌದು, ಗದಗ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆ ಭೂಗಳ್ಳರ ಹಾವಳಿಯಿಂದ ನಲುಗಿದೆ. 103 ಎಕರೆ ವಿಸ್ತೀರ್ಣ ಹೊಂದಿರೋ ಕೆರೆಯನ್ನು ಪ್ರಭಾವಿಗಳ ಒತ್ತುವರಿಯಿಂದ ಈಗ ಕೇವಲ 35 ಎಕರೆ ಮಾತ್ರ ಉಳಿದುಕೊಂಡಿದೆ. ಈ ಜಾಗೆಯಲ್ಲಿ ನಿವೇಶ, ವಾಣಿಜ್ಯ ಮಳಿಗೆ, ಹೊಟೆಲ್, ಆಸ್ಪತ್ರೆ ಸೇರಿದಂತೆ ಅನೇಕ ಕಟ್ಟಡಗಳನ್ನು ನಿರ್ಮಿಸಿ ಕೆರೆಯ ಜಾಗವನ್ನು ನುಂಗಿ ನೀರು ಕುಡಿದಿದ್ದಾರೆ. ಆದ್ರೆ, ಈವಾಗ ಕೆರೆ ಒತ್ತುವರಿ ಮಾಡಿಕೊಂಡ ಪ್ರಭಾವಿಗಳಿಗೆ ಕಾನೂನಿನ ಭಯ ಆರಂಭವಾಗಿದೆ. ಕೋರ್ಟ್ ಆದೇಶದಂತೆ ಭೀಷ್ಮ ಕೆರೆಯ ಬಫರ್ ಝೋನನಲ್ಲಿ ನಿರ್ಮಾಣವಾದ ಕಟ್ಟಡಗಳ ಮಾಲೀಕರಿಗೆ ನಗರಸಭೆ ಕೋರ್ಟ್ ನೋಟಿಸ್ ನೀಡಿದೆ. ಕೆರೆ ಸಂರಕ್ಷಣೆ ಮಾಡಬೇಕು, ಉಳಿಸಬೇಕು, ಕೆರೆಯಿಂದ ಅಂತರ್ಜಲ ಹೆಚ್ಚಳ ಮಾಡಬೇಕು, ಒತ್ತುವರಿ ಮಾಡಿದವರಿಗೆ ಯುಪಿ ಮಾದರಿಯಲ್ಲಿ ಬೋಲ್ಡೆಜರ್ ಭಯ ಜಾರಿಗೊಳಿಸಬೇಕು ಅಂತಿದ್ದಾರೆ ಪರಿಸರ ಪ್ರೇಮಿಗಳು.
ಐತಿಹಾಸಿಕ ಕೆರೆ ಒತ್ತುವರಿ, ನೋಟಿಸ್ ನೀಡಿರುವ ಅಕ್ರಮ ಕಟ್ಟಗಳ ಬಗ್ಗೆ ಚಿತ್ರೀಕರಣ ವೇಳೆ ಕೆಲವರು ಅಡ್ಡಿಪಡಿಸಲು ಮುಂದಾದ್ರು. ನಮ್ಮ ಕಟ್ಟಡ, ಈ ಜಾಗೆ ಶೂಟಿಂಗ್ ಮಾಡಿದ್ರೆ ಸರಿ ಇರಲ್ಲ ಅಂತ ಬೆದರಿಕೆ ಹಾಕಲು ಮುಂದಾದ್ರು. ಕೆಲ ರಾಜಕೀಯ ಹಾಗೂ ಅಧಿಕಾರಿಗಳ ಪ್ರಭಾವದಿಂದ ಕೆರೆ ಒತ್ತುವರಿ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಇನ್ವೆಸ್ಟ್ ಮಾಡಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಭೀಷ್ಮ ಕೆರೆಯ ಬಫರ್ ಝೋನ್ ನಲ್ಲಿರುವ ಅಕ್ರಮ ಕಟ್ಟಡಗಳ ಜಾಗವನ್ನು ಗದಗ ಬೆಟಗೇರಿ ನಗರಸಭೆ ಗುರುತು ಮಾಡಿದೆ. ಉಚ್ಛ ನ್ಯಾಯಾಲಯದ ಆದೇಶದಂತೆ ಗದಗ ಬೆಟಗೇರಿ ನಗರಸಭೆ ಯಿಂದ 87 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ನಗರಸಭೆಯಿಂದ ನೋಟಿಸ್ ನೀಡಿದ್ದು, ಫಲಾನುಭವಿಗಳಿಂದ ಉತ್ತರ ಬಂದ್ ಕೂಡಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವದು ಅಂತಿದ್ದಾರೆ ನಗರಸಭೆ ಆಯುಕ್ತರು.
ಒಟ್ಟಾರೆ ಐತಿಹಾಸಿ ಕೆರೆ ಉಳಿಯುವಿಕೆಗೆ ಕ್ಯಾಂಪೇನ್ ಶುರುವಾಗಿದೆ. ಕೆರೆ ಒತ್ತುವರಿ ಮಾಡಿಕೊಂಡ ಭೂಗಳ್ಳರಿಗೆ ಬುಲ್ಡೋಜರ್ ಬಿಸಿ ಮುಟ್ಟಿಸ್ತಾರಾ, ಅಥವಾ ನ್ಯಾಯಾಂಗದ ತೊಡಕು ನೀಡಿ ಮತ್ತೆ ಮುಂದೂಡ್ತಾರಾ ಕಾದು ನೋಡಬೇಕಿದೆ.
ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ