Wednesday, January 22, 2025

ರೈತನ ಮೇಲೆ ದಾಳಿ ಮಾಡಿದ ಕರಡಿ

ಕಾರವಾರ : ಗದ್ದೆ ಕೆಲಸ ಮಾಡುತ್ತಿದ್ದ ರೈತನೋರ್ವ ನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಸಂದೀಪ ಅಣಶಿಕರ ( 32) ಎಂಬುವರೆ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಬದಲ್ಲಿ ಏಕಾಏಕಿಯಾಗಿ ಎರಗಿ ಬಂದ ಕರಡಿಯೊಂದು ಸಂದೀಪ ಅವರ ಮೇಲೆ ಹಾರಿ ದಾಳಿ ನಡೆಸಿದ್ದು, ಈ ವೇಳೆ ಕರಡಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ರು, ಸಹ ಸಾಧ್ಯವಾಗಿಲ್ಲ.

ಇನ್ನು, ಇವರ ಮೈ ಮೇಲೆ ಸಾಕಷ್ಟು ಕಡೆಯಲ್ಲಿ ಗಾಯವಾಗಿದ್ದು, ಗಾಯಗೊಂಡಿದ್ದ ಸಂದೀಪ ಅವರನ್ನ ತಕ್ಷಣ ಸ್ಥಳೀಯರು ಜೋಯಿಡಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES