Sunday, January 19, 2025

ವಿಂಡೋಸೀಟ್ ವಿನೂತನ ಪ್ರಯತ್ನ.. ಪಿಕ್ಚರ್ ಹೇಗಿದೆ..?

ಥಿಯೇಟರ್​​ನ ಕಾರ್ನರ್ ಸೀಟ್​ನಲ್ಲಿ ಕೂತು ವಿಂಡೋಸೀಟ್ ನೋಡೋಕೆ ಕಾತರರಾಗಿದ್ದ ಸಿನಿಪ್ರಿಯರಿಗೆ ಮಸ್ತ್ ಮನರಂಜನೆ ಕೊಡೋ ಮೂಲಕ ವ್ಹಾವ್ ಫೀಲ್ ಕೊಟ್ಟಿದೆ ಸಿನಿಮಾ. ಬೈರಾಗಿ ಒಂದು ಜಾನರ್ ಸಿನಿಮಾ ಆದ್ರೆ, ವಿಂಡೋಸೀಟ್ ಅದಕ್ಕಿಂತ ಡಿಫರೆಂಟ್ ಅಂತ ಪ್ರೂವ್ ಮಾಡಿದೆ. ಇಷ್ಟಕ್ಕೂ ಶೀತಲ್ ಪ್ರಮೋಷನಲ್ ಜಾಬ್ ಹೇಗಿದೆ ಅಂತೀರಾ..? ನೀವೇ ಓದಿ.

  • ವಿಂಡೋಸೀಟ್ ವಿನೂತನ ಪ್ರಯತ್ನ.. ಪಿಕ್ಚರ್ ಹೇಗಿದೆ..?
  • ಶೆಟ್ರ ಗ್ಯಾಂಗ್​ನಿಂದ ಮತ್ತೊಬ್ಬ ಕ್ರಿಯೇಟೀವ್ ಡೈರೆಕ್ಟರ್..!
  • ಮರ್ಡರ್ ಮಿಸ್ಟರಿ ಥ್ರಿಲ್ಲರ್​ನಿಂದ ಹುಬ್ಬೇರಿಸಿದ ಶೀತಲ್..!
  • ಇಂಡಸ್ಟ್ರಿ ಅಷ್ಟೇ ಅಲ್ಲ.. ಸಿನಿಪ್ರಿಯರಿಂದಲೂ ಬಹುಪರಾಕ್

ತುಘಲಕ್ ಅನ್ನೋ ಸಿನಿಮಾದಿಂದ ಶುರುವಾದ ಮಂಗಳೂರು ಶೆಟ್ರ ಗೆಳೆಯರ ಬಳಗದ ಸಿನಿಮಾಗಳು ಇಂದು ವಿಂಡೋಸೀಟ್​ವರೆಗೂ ಬಂದು ನಿಂತಿವೆ. ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡ್ತಿವೆ. ಅದ್ರಲ್ಲೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಆ ಶೆಟ್ರ ಗೆಳೆಯರ ಬಳಗದ ಲೀಡರ್ ಅಂದ್ರೆ ತಪ್ಪಾಗಲ್ಲ. ಅವ್ರ ಜೊತೆಯಲ್ಲೇ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಸಾಲು ಸಾಲು ಗೆಳೆಯರು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ.

ಇದೀಗ ಅವ್ರ ತಂಡದಿಂದ ಮತ್ತೊಬ್ಬ ಪ್ರತಿಭೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅವ್ರೇ ಶೀತಲ್ ಶೆಟ್ಟಿ. ಯೆಸ್ ನಿರೂಪಕಿ ಆಗಿದ್ದ ಇವ್ರು ಸಣ್ಣಪುಟ್ಟ ಪಾತ್ರಗಳನ್ನು ಮಾಡ್ತಾ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಆದ್ರೀಗ ವಿಂಡೋಸೀಟ್ ಚಿತ್ರದಿಂದ ನಿರ್ದೇಶಕಿಯಾಗಿ ಹೊರಹೊಮ್ಮಿದ್ದಾರೆ. ಆ ಸಿನಿಮಾ ಕೂಡ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಿದೆ.

ನಟಿಯಿಂದ ನಿರ್ದೇಶಕಿಯಾಗಿ ಪ್ರೊಮೋಷನ್ ಪಡೆದಿರೋ ಶೀತಲ್ ಶೆಟ್ಟಿ ನಿರ್ದೇಶನಾ ಕೌಶಲ್ಯವನ್ನು ಇಡೀ ಕರುನಾಡೇ ಕೊಂಡಾಡ್ತಿದೆ. ಸುದೀಪ್​ರ ಆಪ್ತ ಗೆಳೆಯ ಜಾಕ್ ಮಂಜು ಇದಕ್ಕೆ ಹಣ ಹೂಡಿದ್ದು, ಹೊಸ ಪ್ರತಿಭೆಗಳನ್ನ ಪ್ರೋತ್ಸಾಹಿಸಿದ್ದಾರೆ. ಸಿನಿಮಾ ರಿಲೀಸ್​ಗೂ ಮೊದಲೇ ಸ್ಪೆಷಲ್ ಪ್ರೀಮಿಯರ್​ನಲ್ಲಿ ಸ್ಯಾಂಡಲ್​ವುಡ್ ತಾರೆಯರು ಚಿತ್ರವನ್ನು ಕಣ್ತುಂಬಿಕೊಂಡು ಶಹಬ್ಬಾಶ್ ಅಂದಿದ್ರು. ಇದೀಗ ಸಿನಿರಸಿಕರು ಸಹ ಶೀತಲ್ ಶೆಟ್ಟಿಯ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಅಂದಹಾಗೆ ಇದರಲ್ಲಿ ರಂಗಿತರಂಗ ಫೇಮ್ ನಿರೂಪ್ ಭಂಡಾರಿ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ನಾಯಕಿಯರಾಗಿ ಸಲಗ ಸಂಜನಾ ಹಾಗೂ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ರಾಕ್​ಸ್ಟಾರ್ ರಘುವೀರ್ ಆಗಿ ನಿರೂಪ್ ಅಭಿನಯ ಪಕ್ವವಾಗಿದೆ. ಇನ್ನು ಅಮೃತಾ ಎಂದಿನಂತೆ ಬೋಲ್ಡ್ ರೋಲ್ ಮಾಡಿದ್ದಾರೆ. ಇತ್ತ ಚಿತ್ರಕ್ಕೆ ಮೇಜರ್ ಟ್ವಿಸ್ಟ್ ಕೊಡೋ ಪಾತ್ರದಾರಿಯಾಗಿ ಸಂಜನಾ ಗಮನ ಸೆಳೆಯುತ್ತಾರೆ.

ಟ್ರೈನ್​ನ ವಿಂಡೋಸೀಟ್​ನಿಂದ ಮರ್ಡರ್​ವೊಂದನ್ನ ನೋಡೋ ನಾಯಕನಟ, ನಂತ್ರ ಪೊಲೀಸ್ ಠಾಣೆಗೆ ದೂರು ನೀಡ್ತಾನೆ. ಆ ಮರ್ಡರ್ ಯಾರು ಮಾಡಿದ್ರು..? ಯಾಕೆ ಮಾಡಿದ್ರು..? ನಾಯಕ ನಟನಿಗೂ ಆ ಮರ್ಡರ್ ಆದ ಹುಡ್ಗಿಗೂ ಏನು ಸಂಬಂಧ ಅನ್ನೋದೇ ಚಿತ್ರದ ಸಸ್ಪೆನ್ಸ್. ಇದನ್ನ ಪ್ರೇಕ್ಷಕರು ಥಿಯೇಟರ್​​ನಲ್ಲೇ ನೋಡಿ ಎಂಜಾಯ್ ಮಾಡಬೇಕು. ಇನ್ನು ಒಳ್ಳೆಯ ಸಿನಿಮಾಗಳನ್ನ ಕನ್ನಡಿಗರು ಎಂದೂ ಕೈಬಿಟ್ಟಿಲ್ಲ. ಶೀತಲ್​ರ ಈ ವಿಂಡೋಸೀಟ್​ನ ಸಹ ಕೈಹಿಡಿಯಲಿದ್ದಾರೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES