ಮಹರಾಷ್ಟ್ರ : ಅಮಿತ್ ಶಾ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದರೆ, ಈಗ ಬಿಜೆಪಿಯವರು ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಎರಡು ವರ್ಷಗಳಿಂದ ಮಾತು ಉಳಿಸಿಕೊಳ್ಳದ ಮತ್ತು ಬೆನ್ನಿಗೆ ಚೂರಿ ಹಾಕಿದ ಜನರ ಜೊತೆ ಬಂಡಾಯ ಶಾಸಕರು ಹೇಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ರು. ನನಗಿವತ್ತು ಬೇಜಾರಾಗಿದೆ. ನನ್ನಲ್ಲಿ ಅವರಿಗೆ ಸಿಟ್ಟು ಇದ್ದರೆ ನನ್ನ ಜೊತೆ ಜಗಳವಾಡಬೇಕಿತ್ತು ಎಂದ್ರು. ನಾವು ಅಭಿವೃದ್ಧಿಯನ್ನು ನಿಲ್ಲಿಸಿರಲಿಲ್ಲ.
ಮುಂಬೈನ ಪರಿಸರದೊಂದಿಗೆ ಚೆಲ್ಲಾಟ ಬೇಡ ಎಂದು ನಾನು ಮಹಾರಾಷ್ಟ್ರದ ನೂತನ ಸರ್ಕಾರದ ಮುಂದೆ ಕೈಮುಗಿದು ಬೇಡಿಕೊಳ್ಳುತ್ತೇನೆ. ನಿಮ್ಮ ಸಿಟ್ಟನ್ನು ಮುಂಬೈ ಮೇಲೆ ತೀರಿಸಬೇಡಿ ಎಂದು ಮನವಿ ಮಾಡಿದರು.