Monday, December 23, 2024

ಬದುಕೋಕೆ ಹಣ ಬೇಕಲ್ವಾ ಎಂದ ನಟಿ ಪವಿತ್ರಾ ಲೋಕೇಶ್​​

ಬೆಂಗಳೂರು: ಪವಿತ್ರ ಬಂಧಕ್ಕಾಗಿ ತೆಲುಗು ನಟ ನರೇಶ್ ನಡೆಸುತ್ತಿರೋ ಯುದ್ಧದಲ್ಲಿ ಅವ್ರ ಪತ್ನಿ ರಮ್ಯಾ ರಘುಪತಿಗೆ ಅನ್ಯಾಯವಾಗಿದೆ. ನ್ಯಾಯಕ್ಕಾಗಿ ಎದುರು ನೋಡ್ತಿರೋ ಅವ್ರ ವಿರುದ್ಧ ಪತಿ ನರೇಶ್ ಕೂಡ ಬೆಂಗಳೂರಿಗೆ ಬಂದು ಇಲ್ಲಸಲ್ಲದ ಆರೋಪ ಮಾಡಿದ್ರು. ಇದೀಗ ಇವ್ರ ಸಾಂಸಾರಿಕ ಜಗಳಕ್ಕೆ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ.

ಪಕ್ಕದ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ ಪುತ್ರ ನರೇಶ್ ಹಾಗೂ ಅವ್ರ ಮೂರನೇ ಪತ್ನಿ ರಮ್ಯಾ ರಘುಪತಿ ಕೌಟುಂಬಿಕ ಕಲಹ ಹಲವು ದಿನಗಳಿಂದ ನಡೆಯುತ್ತಿದ್ದು, ಇದಕ್ಕೆ ಮೂಲ ಕಾರಣ ನಮ್ಮ ಕನ್ನಡದ ನಟಿಯಾಗಿರೋ ಪವಿತ್ರಾ ಲೋಕೇಶ್ ಎನ್ನಲಾಗಿತ್ತು. ಪವಿತ್ರ ಜೊತೆ ಹೊಸಬಾಳಿಗೆ ಕಾಲಿಡಲು ನರೇಶ್ ಅವ್ರು ರಮ್ಯಾಗೆ ವಿಚ್ಚೇದನ ನೀಡಲು ಮುಂದಾಗಿದ್ರು. ತನ್ನ ಅತ್ತೆಯ ದುಬಾರಿ ಒಡವೆಗಳನ್ನೆಲ್ಲಾ ಪವಿತ್ರಾಗೆ ಕೊಡ್ತಿದ್ದ ನರೇಶ್ ವಿರುದ್ದ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲದೆ, ನನಗೆ ನ್ಯಾಯ ಬೇಕು ಅಂತ ಪವರ್ ಟಿವಿ ಬಳಿ ತಮ್ಮ ಮನದಾಳ ಬಿಚ್ಚಿಟ್ಟಿದ್ರು ರಮ್ಯಾ ರಘುಪತಿ.

ಈ ಹಿನ್ನೆಲೆಯಲ್ಲಿ ಪವರ್ ಟಿವಿ ಎರಡ್ಮೂರು ದಿನದಿಂದ ನರೇಶ್ ಒಬ್ಬ ಹೆಣ್ಣುಬಾಕ ಅನ್ನೋ ವಿಸ್ತೃತ ಸುದ್ದಿಯನ್ನ ದಾಖಲೆ ಸಮೇತ ಪ್ರಸಾರ ಮಾಡಿತು. ಕೂಡಲೇ ಬೆಂಗಳೂರಿಗೆ ಓಡೋಡಿ ಬಂದ ನಟ ನರೇಶ್, ತಮ್ಮ ಪತ್ನಿ ರಮ್ಯಾ ವಿರುದ್ದ ಸಾಕಷ್ಟು ಆರೋಪಗಳನ್ನು ಹೊರೆಸಿದ್ರು. ಆದ್ರೆ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಅವ್ರನ್ನ ನೋಡ್ತಿದ್ದಂತೆ ಕಳ್ಳನಂತೆ ಓಡಿ ಹೋಗಿದ್ರು. ಕರ್ನಾಟಕದಲ್ಲಿ ಮಾಧ್ಯಮಗೋಷ್ಠಿ ಮಾಡಲು ಬಂದ ಅವ್ರು ಹೆದರಿ ಓಡೋಗೋ ಅಂತಹ ಪರಿಸ್ಥಿತಿ ಏನಿತ್ತೋ ಗೊತ್ತಿಲ್ಲ.

ಇದೀಗ ಇವ್ರ ಸಾಂಸಾರಿಕ ಜಗಳಕ್ಕೆ ಪವಿತ್ರ ಲೋಕೇಶ್ ಎಂಟ್ರಿ ಕೊಟ್ಟಿದ್ದು, ನರೇಶ್ ನಾನು ಒಳ್ಳೆಯ ಸ್ನೇಹಿತರು, ನನಗೆ ಅವ್ರ ಪತ್ನಿ ಯಾರು ಅಂತಾನೇ ಗೊತ್ತಿಲ್ಲ ಎಂದಿದ್ದಾರೆ. ನರೇಶ್ ಜೊತೆ ಕೆಲಸ ಮಾಡಿದ ಮಾತ್ರಕ್ಕೆ ಅವ್ರ ಜೊತೆ ಸಂಬಂಧ ಕಟ್ಟೋಕೆ ಆಗುತ್ತಾ ಎಂದಿದ್ದಾರೆ. ಅಷ್ಟೇ ಅಲ್ಲ, ಕೊನೆಯಲ್ಲಿ ಮನುಷ್ಯನಿಗೆ ಹಣ ಬೇಕಲ್ವಾ ಸರ್..? ಸಮಾಜದಲ್ಲಿ ಎಲ್ಲರಂತೆ ಬದುಕಲು ಹಣ ಮುಖ್ಯ ಅಲ್ಲವೇ ಅಂತ ಹಣದ ಮೇಲಿನ ವ್ಯಾಮೋಹದ ಬಗ್ಗೆ ಮನದ ಮಾತನ್ನ ಹೊರಹಾಕಿದ್ದಾರೆ.

ಸುಚೇಂದ್ರ ಪ್ರಸಾದ್ ಜೊತೆ 11 ವರ್ಷ ಸಹಬಾಳ್ವೆ ನಡೆಸಿದ ಪವಿತ್ರಾ, ಇದೀಗ ಆರು ವರ್ಷದಿಂದ ಜೊತೆಗಿಲ್ಲ ಅನ್ನೋದನ್ನೂ ಸ್ಪಷ್ಟಪಡಿಸಿದ್ದಾರೆ. ಇನ್ನೂ ಪವಿತ್ರಾ ಮಾಧ್ಯಮ ಹೇಳಿಕೆ ಹಾಗೂ ನರೇಶ್ ಅವ್ರ ಆರೋಪಗಳಿಗೆ ಪವರ್ ಟಿವಿ ಕಚೇರಿಯಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ್ರು ರಮ್ಯಾ. ಈ ವೇಳೆ ನನ್ನ ಅತ್ತೆ ಬಗ್ಗೆ ಮಾತನಾಡಲು ಪವಿತ್ರಾ ಲೋಕೇಶ್ ಯಾರು..? ನನ್ನ ಮಗ ನಟ ನರೇಶ್​ರ ವಾರಸುದಾರ. ನಾನು ಮನೆ ಬಿಟ್ಟು ಹೋಗಿದ್ದೇನೆ ಅಂತ ಹೇಳೋಕೆ ಆಕೆ ಯಾರು ಅಂತ ತಿರುಗೇಟು ನೀಡಿದ್ದಾರೆ.

ಅಲ್ಲದೆ, ನನ್ನ ಗಂಡ ಗನ್ ಮುಂದೆ ಇಟ್ಟು ನನಗೆ ಡಿವೋರ್ಸ್ ಬೇಕು ಅಂತ ಬೆದರಿಸಿದರು. ನಾಯಿಯನ್ನ ಬಿಟ್ಟು ಹೆದರಿಸುತ್ತಿದ್ದರು. ನನ್ನ ಅತ್ತೆ ಬಳಿಯ ಒಡವೆ ಪವಿತ್ರಾ ಲೋಕೇಶ್ ಬಳಿ ಹೇಗೆ ಹೋಯ್ತೋ ಗೊತ್ತಿಲ್ಲ. ಆದ್ರೆ ಪವಿತ್ರಾ ಲೋಕೇಶ್ ಧರಿಸಿದ್ದ ಡೈಮಂಡ್ ನೆಕ್ಲೆಸ್ ನಮ್ಮ ಅತ್ತೆಯದ್ದು ಎಂದಿದ್ದಾರೆ. ಒಟ್ಟಾರೆ ಇದು ಇನ್ನೆಲ್ಲಿ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬ್ಯೂರೋ ರಿಪೋರ್ಟ್, ಪವರ್ ಟಿವಿ

RELATED ARTICLES

Related Articles

TRENDING ARTICLES