Monday, December 23, 2024

ಉದಯಪುರ ಹತ್ಯೆ ಹಿಂದೆ ಮದರಸಾ ಪ್ರಭಾವ : ಮುತಾಲಿಕ್​​ ಆರೋಪ

ಧಾರವಾಡ: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಹಿಂದೆ ಮಸೀದಿ, ಮೌಲ್ವಿಗಳ ಬೋಧನೆಯ ಪ್ರಭಾವವಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕನ್ಹಯ್ಯ ಲಾಲ್ ಹತ್ಯೆ ನಿಜಕ್ಕೂ ಖಂಡನೀಯ. ಮಸೀದಿ ಒಂದು ಪ್ರಾರ್ಥನಾ ಸ್ಥಳ, ಪ್ರಾರ್ಥನೆ ಎಂದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವುದು. ಆದರೆ ಮದರಸಾಗಳಲ್ಲಿ ಬೋಧನೆಯ ಪಾಠ ವಿಕೃತಿ ಕಡೆ ಹೋಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಕಾನೂನು ಬಾಹಿರ ಮದರಸಾಗಳನ್ನು ಅಲ್ಲಿನ ಸರ್ಕಾರ ಬಂದ್ ಮಾಡಿದೆ. ಅಸ್ಸಾಂನಲ್ಲಿ ಕೂಡ ಮದರಸಾರಗಳನ್ನು ಮುಚ್ಚಲಾಗಿದೆ. ಇದಲ್ಲದೇ, ಇಸ್ಲಾಂ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಸಹಿತ ಮದರಸಾಗಳನ್ನು ಬ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲೂ ಮದರಾಸಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

RELATED ARTICLES

Related Articles

TRENDING ARTICLES