ಬೆಂಗಳೂರು : ಇನ್ನು ಮುಂದೆ ತರಕಾರಿ ಅಥವಾ ದಿನಸಿ ತರಲು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಿಡಿದು ಹೊರಗೆ ಹೋಗುವಂತಿಲ್ಲ. ಸಿಕ್ಕಾಪಟ್ಟೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಏಕಬಳಕೆ ಪ್ಲಾಸ್ಟಿಕ್ ದೇಶಾದ್ಯಂತ ನಿಷೇಧವಾಗಲಿದೆ. ಪ್ಲಾಸ್ಟಿಕ್‌ನ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಹಾಗೂ ಬಳಕೆ ಎಲ್ಲವನ್ನೂ ನಿಷೇಧಿಸಲಾಗಿದೆ.
ಏಕಬಳಕೆಯ ಪ್ಲಾಸ್ಟಿಕ್ನಲ್ಲಿ ಸುಮಾರು 16ಕ್ಕೂ ಹೆಚ್ಚು ಬಗೆಯ ಪ್ಲಾಸ್ಟಿಕ್ಗೆ ನಿಷೇಧ ಹೇರಲಾಗಿದೆ ಶಾಂಪೂ ಬಾಟಲ್‌ಗಳು, ಪ್ಲೋಯ್ಥೀನ್ ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡಬಹುದಾದ ಕಾಫಿ, ಟೀ ಕಪ್ಗಳಂತಹ ವಸ್ತುಗಳನ್ನು ನಿಷೇಧಿಸಲಾಗಿದೆ. ಇನ್ನೂ ಪಾಲಿಕೆ ವತಿಯಿಂದ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ 500 ರೂಪಾಯಿಯಿಂದ ಒಂದು ಲಕ್ಷದವರೆಗೆ ದಂಡವನ್ನ ವಿಧಿಸುವ ಪ್ಲಾನ್ ಇದೆ. ಸದ್ಯದ ಮಟ್ಟಿಗೆ ದಂಡವನ್ನ ಹೋಲ್ಡ್ ಮಾಡಲಾಗಿದ್ದು ಜನರಿಗೆ ಮುಂದಿನ ಕೆಲವು ದಿನ ಜಾಗೃತಿ ಮೂಡಿಸಲಾಗುತ್ತೆ ಅಂತ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಹುತೇಕ ಗ್ರಾಹಕರು ಪ್ಲಾಸ್ಟಿಕ್ ನಿಷೇಧವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ಲಾಸ್ಟಿಕ್ ನಿಷೇಧವನ್ನು ಉತ್ಪಾದನಾ ಹಂತದಲ್ಲೇ ಕಂಟ್ರೋಲ್ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಣ್ಣಪುಟ್ಟ ಅಂಗಡಿಗಳಿಗೆ ಬಂದು ಪ್ಲಾಸ್ಟಿಕ್ ಬಳಕೆ ಅಂತ ಹೇಳಿ ದಂಡ ವಿಧಿಸೋದು ಸರಿಯಲ್ಲ. ನಾವು ದೊಡ್ಡ ದೊಡ್ಡ ಅಂಗಡಿಗಳಿಂದ ಪ್ಲಾಸ್ಟಿಕ್ ಖರೀದಿ ಮಾಡಿ ಇಲ್ಲಿ ಮಾರುತ್ತೇವೆ. ಮೊದಲು ಉತ್ಪಾದನೆ ಹಂತದಲ್ಲೇ ಪ್ಲಾಸ್ಟಿಕ್ಗೆ ಕಡಿವಾಣ ಹಾಕಿ ಅಂತ ಗ್ರಾಹಕರು ತಿಳಿಸಿದ್ರು.
ಒಟ್ಟಿನಲ್ಲಿ 2016ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕರ್ನಾಟಕದಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಿತ್ತು. ಆದ್ರೂ ಕೂಡ ಬಹುತೇಕ ಎಲ್ಲಾ ಅಂಗಡಿಗಳಲ್ಲೂ ಕೂಡ ಪ್ಲಾಸ್ಟಿಕ್ ಲಭ್ಯ ಆಗ್ತಾ ಇತ್ತು. ಆದ್ರೆ ಇವತ್ತಿನಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸಬೇಕು ಅಂತ ಹೇಳಿ ತಿಳಿಸಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು