Friday, January 24, 2025

ಖಾಲಿ ಇದ್ದ ಪೀಣ್ಯ ಬಸ್ ನಿಲ್ದಾಣಕ್ಕೆ ಮತ್ತೆ ಮರುಜೀವ

ಬೆಂಗಳೂರು : ಸಿಲಿಕಾನ್​ ಸಿಟಿ ನಗರದೊಳಗೆ ಸಂಚಾರ ದಟ್ಟಣೆ ನಿವಾರಿಸಲು ನಾನಾ ಜಿಲ್ಲೆಗಳಲ್ಲಿ ಸಾಗುವ KSRTC ಮತ್ತು ಖಾಸಗಿ ಬಸ್​ಗಳನ್ನ ಪೀಣ್ಯ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸುವ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿಗೆ ಅಧಿಕಾರಿಗಳ ತಂಡ ಸಿಟಿ ರೌಂಡ್ಸ್ ಮಾಡಿದ ವೇಳೆ ಈ ಬಗ್ಗೆ ಚರ್ಚೆ ನಡೆದಿದ್ದು, KSRTC ಹಾಗೂ ಖಾಸಗಿ ಬಸ್​ಗಳು ನಗರ ಪ್ರವೇಶಿಸುವುದನ್ನ ನಿರ್ಬಂಧಿಸಿ ಪೀಣ್ಯ ಬಸ್ ನಿಲ್ದಾಣದಿಂದಲೇ ಕಾರ್ಯಾಚರಣೆಗೊಳಿಸಿದ್ರೆ ವಾಹನ ದಟ್ಟನೆ ನಿಯಂತ್ರಿಸಬಹುದು ಅಂತ ಲೆಕ್ಕಾಚಾರ ಮಾಡಲಾಗಿದೆ‌.

ನಾಲ್ಕೈದು ವರ್ಷದಿಂದ ಪ್ರಯಾಣಿಕರ ಕೊರತೆ ಕಾರಣದಿಂದ ಬಿಕೋ ಎನ್ನುತ್ತಿದ್ದ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 2014ರಲ್ಲಿ ಬಸ್ ನಿಲ್ದಾಣ ಉದ್ಘಾಟಿಸಿದ್ದ KSRTC, ಉಪಯೋಗಕ್ಕೆ ಬಾರದಂತೆ ಇತ್ತು. ಉತ್ತರ ಕರ್ನಾಟಕಕ್ಕೆ ತೆರಳುವ 380 ಬಸ್ ಗಳು KSRTC 111 ಬಸ್​​ಗಳನ್ನ ಮೆಜೆಸ್ಟಿಕ್​ನಿಂದ ಪೀಣ್ಯಕ್ಕೆ ಸ್ಥಳಾಂತರ ಮಾಡಿದ್ದರೂ ಪ್ರಯಾಣಿಕರು ಸ್ಪಂದನೆ ನೀಡದ ಕಾರಣ ಮೂರೇ ತಿಂಗಳಲ್ಲಿ ನಿಲ್ದಾಣವನ್ನು ಮುಚ್ಚಲಾಗಿತ್ತು. ಈಗ ಮುಚ್ಚಿರೋ ಈ ನಿಲ್ದಾಣವನ್ನು ಮತ್ತೆ ಇಲ್ಲಿಂದ ವಿವಿಧೆಡೆಗೆ ಬಸ್​ ಸಂಚಾರ ಮಾಡಲು ಫ್ಲಾನ್ ಮಾಡಲಾಗ್ತಿದೆ.

ನಿಲ್ದಾಣವನ್ನ ಬಳಸಿಕೊಂಡು ಸುತ್ತ ಮುತ್ತಲಿನ ಪ್ರದೇಶಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಬಿಎಂಟಿಸಿ ಯೋಜನೆ ರೂಪಿಸಿದ್ದು, ಬಿಎಂಟಿಸಿ ಬಸ್​​ಗಳು ಈ ನಿಲ್ದಾಣದಿಂದ ಕಾರ್ಯಾಚರಣೆ ಮಾಡಿದ್ರೆ..ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆಗಳಿಗೆ ಇಲ್ಲಿಂದಲ್ಲೇ ಬಸ್ ಸೇವೆ ಆರಂಭಿಸಲು ಯೋಜನೆ ಸಿದ್ದವಾಗ್ತಿದೆ.

ಒಟ್ಟಿನಲ್ಲಿ ನಗರದೊಳಗೆ ಸಂಚಾರ ದಟ್ಟನೆಯನ್ನ ನಿಯಂತ್ರಣ ಮಾಡಬೇಕು ಅಂತ ಪೀಣ್ಯ ಬಸ್ ನಿಲ್ದಾಣಕ್ಕೆ ಮರುಜೀವ ನೀಡಲು ಸರ್ಕಾರ ಹೊರಟಿದೆ‌. ಮತ್ತೆ ಈ ಯೋಜನೆಯನ್ನು ಅನುಷ್ಠಾನ ಮಾಡಿದ್ರೆ ಎಷ್ಟರ ಮಟ್ಟಿಗೆ ಫಲ ಕೊಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES