Monday, December 23, 2024

ದೇವರ ಆಶೀರ್ವಾದದಿಂದ ಎರಡು ಬಾರಿ ಸಿಎಂ ಆಗಿದ್ದೇನೆ : ಹೆಚ್​​ಡಿಕೆ

ಬೆಂಗಳೂರು : ಎರಡು ಬಾರೀ ದೇವರು ಮತ್ತು ಜನರ ಆಶೀರ್ವಾದದಿಂದ ಸಿಎಂ ಆಗಿ ಇತಿಹಾಸ ಪುಟ ಸೇರಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜನತಾ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಜೆಡಿಎಸ್ ಪಕ್ಷವನ್ನು ಬೆಂಗಳೂರು ನಗರದಲ್ಲಿ ಮುಂದಿನ ವಿಧಾನಸಭಾ ಮತ್ತು ಬಿಬಿಎಂಪಿ ಚುನಾವಣೆ ಪಕ್ಷದ ಕಾರ್ಯಕರ್ತರು ಸಂಘಟನೆ ಆಗುವುದೇ ಅಲ್ಲಾ. ಬೆಂಗಳೂರು ಬೆಳವಣಿಗೆ ಪ್ರಮುಖವಾದ ಕಾರಣ ಯಾರು ಎಂಬುದನ್ನು ತೋರಿಸಲಾಗುತ್ತೆ ಎಂದರು.

ಅದಲ್ಲದೇ, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಸಾರ್ವಜನಿಕರು ಇದ್ದಾರೆ. ಆದ್ರೆ ಚುನಾವಣೆ ಎದುರಿಸುವ ಶಕ್ತಿ ನಾಯಕರಿಗೆ ಇಲ್ಲ. ಯಶವಂತಪುರದಲ್ಲಿ ನಮ್ಮ ಪಕ್ಷ ಬಲಾಢ್ಯವಾಗಿದೆ. ದಾಸರಹಳ್ಳಿಯಲ್ಲಿ ಪಕ್ಷದ ದುಡಿಮೆ ಮತ್ತು ಕಾರ್ಯಕರ್ತರು ಹೆಗಲಿಗೆ ಎಗಲು ಕೊಟ್ಟಿದ್ರಿಂದ ಮಂಜುನಾಥ್ ಅವರು ಶಾಸಕರು ಆದ್ರು. ಇಲ್ಲಿ ಕುಮಾರಸ್ವಾಮಿ ಸಿಎಂ ಆಗುವುದು ಮುಖ್ಯವಲ್ಲ. ಈಗ ಪಕ್ಷದ ಗೆಲುವು ಜನರ ಸಮಸ್ಯೆಗಳನ್ನು ತಿರಿಸಲು ನಮ್ಮ ಪಕ್ಷಕ್ಕೆ ಅಧಿಕಾರ ಬೇಕು. ಬೆಂಗಳೂರಿನ ಅಭಿವೃದ್ಧಿಯಲ್ಲಿ ದೇವೇಗೌಡರ ಕೊಟ್ಟ ಕೊಡುಗೆ ಅಪಾರ. ನಗರ ಕೆರೆಗಳನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿಗೆ IT ಬ್ರಾಂಡ್ ಆಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಇನ್ನು, ಬೆಂಗಳೂರು ಕೆರೆಗಳು ನಾಶವಾಗಿದ್ದು ಸಿಂಗಪೂರ್ ಮಾಡಲು ಹೊರಟಾಗ. ನಾನು ಸಿಎಂ ಆಗಿದ್ದಾಗ ಡಾಲರ್ಸ್ ಕಾಲೋನಿ ಅಭಿವೃದ್ಧಿ ಮಾಡ್ದೆ. ಇವತ್ತು ಅಲ್ಲಿ ಮನೆಗಳಿಗೆ ನೀರು ನುಗ್ಗುತ್ತಿಲ್ಲ. ಆದ್ರೆ ಅಲ್ಲಿನ ಜನರು ಕುಮಾರಸ್ವಾಮಿ ಅವರನ್ನು ಮರೆತಿದ್ದಾರೆ. ಜೈಕರ್ ಜೈರಾಂ ಬಿಡಿಎ ಕಮಿಷನರ್ ಆದ ಮೇಲೆ ಬೆಂಗಳೂರು ಸಮುದ್ರ ಆಯ್ತು‌. ಪತ್ರಿ ವರ್ಷ ಮಳೆ ಬಂದಾಗಲು ರಾಜ್ ಕಾಲುವೆ, ಹಣ ಬಿಡುಗಡೆ ಮಾಡಿದ್ದೇವೆ ಎಂದು 10 ವರ್ಷಗಳಿಂದ ಹೇಳುತ್ತಿದ್ದಾರೆ. ಹೆಚ್ಚು ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ಏನ್ ಮಾಡಿದ್ರು. ಪ್ರತಿ ವರ್ಷ ರಾಜ್ ಕಾಲುವೆಗೆ ಬಿಡುಗಡೆಯಾಗುತ್ತಿರುವ ಹಣ ಎಲ್ಲಿ ಹೋಯ್ತು. ನಮ್ಮ ಪಕ್ಷದ ಕಾರ್ಯಕರ್ತರ ಪ್ರತಿ ಮನೆಗೂ ಈ ಕಾರ್ಯಕ್ರಮದ ಮೂಲಕ ನಮಗೆ 5 ಅವಕಾಶ ಸಾಕು, 25 ಬೇಕಿಲ್ಲ ಎಂದು ಕೇಳಿ ಎಂದರು.

RELATED ARTICLES

Related Articles

TRENDING ARTICLES