ಕಲಬುರಗಿ : ಒಂದಲ್ಲ ಎರಡಲ್ಲ ಬರೊಬ್ಬರಿ 25 ವರ್ಷಗಳಿಂದ ಪೊಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ತಲೆ ಮರೆಸಿಕೊಂಡು ಓಡಾಡ್ತಿದ್ದ ಆರೋಪಿಯನ್ನ ಕೊನೆಗೂ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಪೊಲಿಸರು ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.
ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ನಿವಾಸಿಯಾಗಿರುವ ಕರಿಮಸಾಬ್‌ನನ್ನ ನಿಂಬರ್ಗಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 1997 ರಲ್ಲಿ ಆಳಂದ ತಾಲೂಕಿನ ಹಡಗಿಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ದತ್ತಪ್ಪ ದೊಡ್ಡಮನಿಯನ್ನ ಸುಪಾರಿ ಪಡೆದು ಈ ಕರೀಮ್ ಸಾಬ್ ಆಂಡ್ ಗ್ಯಾಂಗ್ ಕೊಲೆ ಮಾಡಿತ್ತು. ಕೊಲೆ ಪ್ರಕರಣ ಸಂಬಂಧ ಹಿಂದೆಯೆ 12 ಜನ ಆರೋಪಿಗಳನ್ನ ಪೊಲಿಸರು ಬಂಧಿಸಿ ಜೈಲಿಗೆ ಕಳಹಿಸಿದ್ದರು.ಇದೀಗ ಪ್ರಮುಖ ಆರೋಪಿ ಕರೀಂ ಸಾಬ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.
1997ರಲ್ಲಿ ಹಡಗಿಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿದ್ದ ದತ್ತಪ್ಪ ದೊಡ್ಡಮನಿ ರಾಜಕೀಯವಾಗಿ ಬೇಳೆಯೋದಕ್ಕೆ ಮುಂದಾಗಿದ್ದ. ಅಲ್ಲದೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅನ್ನೋ ಕಾರಣಕ್ಕೆ ಎದುರಾಳಿಗಳಿಗೆ ಅವಾಜ್ ಹಾಕಿ ಫುಲ್ ಸೈಲೆಂಟ್ ಮಾಡಿದ್ದ. ದತ್ತಪ್ಪ ದೊಡ್ಡಮನಿಯನ್ನ ರಾಜಕೀಯವಾಗಿ ಬೆಳೆಯೊದನ್ನ ಕಂಡು ಮಹಾರಾಷ್ಟ್ರದ ಉದ್ಯಮಿಯೊಬ್ಬ ಸೇರಿಕೊಂಡು ಆತನನ್ನ ಕೊಲೆ ಮಾಡಬೇಕು ಅಂತಾ ಡಿಸೈಡ್ ಮಾಡಿ ಸುಪಾರಿ ನೀಡಿದ್ದರು. ಅಂದ್ರಂತೆ ಸುಪಾರಿ ಪಡೆದ ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಪಾರಿ ಹಂತಕರು ಕಲಬುರಗಿಯಿಂದ ಆಳಂದ ಕಡೆಗೆ ವಾಪಸ್ ಬರ್ತಿದ್ದ ದತ್ತಪ್ಪ ದೊಡ್ಡಮನಿಯನ್ನ ಫಾಲೋ ಮಾಡಿಕೊಂಡು ಬಂದು ವೈಜಾಪುರ ಕ್ರಾಸ್ ಬಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ರು.
ಕೊಲೆಯಾಗಿ 25 ವರ್ಷಗಳೇ ಕಳೆದಿವೆ ಪೊಲೀಸರು ಪ್ರಕರಣವನ್ನ ಮುಚ್ಚಿ ಹಾಕಿದ್ದಾರೆ ಅಂತಾ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ಕರೀಮ್ ಸಾಬ್ ನನ್ನ ಕೊನೆಗಾಲದಲ್ಲಿ ಜೈಲು ಕಂಬಿ ಎಣಿಸುವಂತಾಗಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ