Thursday, January 23, 2025

ಗಾರ್ಬೇಜ್‌ ಸಿಟಿಯಾಗಲಿದ್ಯಾ ಸಿಲಿಕಾನ್​ ಸಿಟಿ

ಬೆಂಗಳೂರು : ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ದಿನ ಹತ್ರತ್ರ ನಾಲ್ಕೂವರೆ ಸಾವಿರ ಟನ್ ಕಸ ಉತ್ಪತ್ತಿಯಾಗುತ್ತೆ. ಇಡೀ ನಗರದ ಕಸವನ್ನ ವಿಲೇವಾರಿ ಮಾಡುವವರು ಇಂದು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಬಿಬಿಎಂಪಿ ಮೇಲೆ ತಿರುಗಿ ಬಿದ್ದಿದೆ, ನಮ್ಮ ಬೇಡಿಕೆ ಈಡೇರೋವರೆಗೂ ನಾವು ಕಸ ತಗಿಯಲ್ಲ ಅಂತ ಪೌರ ಕಾರ್ಮಿಕರು ಪಟ್ಟು ಹಿಡಿದ್ರು.
ಬ್ರಾಂಡ್ ಬೆಂಗಳೂರು ಸುಂದರವಾಗಿ ಇರೋದಕ್ಕೆ ಮುಖ್ಯ ಕರಣಕರ್ತರು ಅಂದ್ರೆ ಅದು ಬಿಬಿಎಂಪಿ ಪೌರಕಾರ್ಮಿಕರು, ಬೆಳಿಗ್ಗೆ 5 ಗಂಟೆಯಿಂದ ಸ್ವಚ್ಚತ ಕಾರ್ಯದಲ್ಲಿ ತೊಡಗಿ ನಗರದ ಕಸ ವಿಲೇವಾರಿ ಮಾಡ್ತಾರೆ, ಇಂತಹ ಕಾರ್ಮಿಕರಿಗೆ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಬೇಡಿಕೆ ಈಡೇರಿಸ್ತೀವಿ ಅಂತ ಕಾಗೆ ಹಾರಿಸುತ್ತಾ ಬರ್ತಿದೆ.

ಪೌರಕಾರ್ಮಿಕರ ಬೇಡಿಕೆಗಳೇನು?

ನೇರವೇತನ ಹಾಗೂ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು.
ಬೆಂಗಳೂರು ನಗರ ಮೇಲ್ವಿಚಾರಕರನ್ನ ಖಾಯಂ ಮಾಡಬೇಕು.
ಆಟೋಚಾಲಕರು, ಲಾರಿ ಚಾಲಕರು, ಲೋಡರ್ಸ್ ಸಹಾಯಕರನ್ನು ಖಾಯಂ ಮಾಡಬೇಕು.
ದಿವಂತಗ ಐ.ಡಿ.ಪಿ. ಸಾಲಪ್ಪರವರ ವರದಿಯನ್ನು ಜಾರಿಗೆ ತರಬೇಕು.
ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಖಾಯಂ ಮಾಡ್ಬೇಕು.
ನೇರವೇತನ ಪೌರಾ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಹೆಲ್ತ್ ಕಾಡ್೯, ಹೆಚ್ಚುವರಿ ವೇತನ ಹಾಗೂ ಬೋನಸ್ ನೀಡಬೇಕು.

ಹೀಗೆ ಹಲವು ಬೇಡಿಕೆಗಳನ್ನ ಈಡೇರಿಸೋವರೆಗೂ ನಗರದಲ್ಲಿ ಕಸ ಎತ್ತಲ್ಲ ಅಂತ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದೆ, ಈ ಪ್ರತಿಭಟನೆ ಹಾಗೂ ನಾಳೆ ವುಂಟಾಗುವ ಕಸದ ಸಮಸ್ಯೆ ಬಗ್ಗೆ ಬಿಬಿಎಂಪಿ ಯನ್ನ ಕೇಳಿದ್ರೆ. ಅದು ಬದಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಗರದಲ್ಲಿ ಯಾವುದೇ ಸಮಸ್ಯೆ ಆಗಲ್ಲ ಅಂತಿದೆ.

ಇತ್ತ ಸ್ವತಃ ಬೆಂಗಳೂರು ಉಸ್ತುವಾರಿ ಯಾಗಿರೋ ಸಿಎಂ ಸಹೇಬ್ರು ಮುಖಂಡರುಗಳನ್ನ ಪ್ರತಿಭಟನೆ ಕೈಬಿಟ್ಟು ಮತುಕಥೆಗೆ ಬರುವಂತೆ ಹೇಳಿದ್ದಾರೆ, ಇದಕ್ಕೆ ಜಗ್ಗೆದೆ ಪೌರಕಾರ್ಮಿಕರು,ಮೊದಲು ಬೇಡಿಕೆ ಈಡೇರಿಸೋ ಭರವಸೆ ನೀಡಿ ಅಂತ ಪ್ರತಿಭಟನೆಯಲ್ಲೆ ನಿರಂತರಾಗಿದ್ದಾರೆ. ಅದೇನೆ ಇದ್ರು ನಾಳೆ ಯಂತು ಬೆಂಗಳೂರು ಗಬ್ಬುನಾರೊದಂತು ತಪ್ಪಿದ್ದಲ್ಲ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

 

RELATED ARTICLES

Related Articles

TRENDING ARTICLES