Friday, January 10, 2025

ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಜನರು

ಗದಗ : ಮನೆ ಮುಂದೆ ಸೇರಿರುವ ನೂರಾರು ಜನ, ಮನೆಗೆ ಮಾಲಿಗೆ ಮೇಲೆ ಬಿದ್ದಿರುವ ಎರಡು ಹೆಣ, ಮೃತದೇಹಗಳ ಮುಂದೆ ಗೋಳಾಡುತ್ತಿರುವ ಘಟನೆ ಗದಗ ಜಿಲ್ಲೆ ಕೆರಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದಹಾಗೆ ಇಲ್ಲಿ ಕೊಲೆಯಾಗಿರೋರು 28 ವರ್ಷದ ಮಹಾಂತೇಶ ಮಾಚೇನಹಳ್ಳಿ ಹಾಗೂ 17 ವರ್ಷದ ಫಕೀರೇಶ ಛಬ್ಬಿ ಎಂಬ ಯುವಕರು ಮೃತ ದುರ್ದೈವಿಗಳು. ಕೆರಳ್ಳಿ ಪಕ್ಕದ ಅಲಗಿಲವಾಡ ಗ್ರಾಮದ ಮಂಜುನಾಥ ದೇಸಳ್ಳಿ ಎಂಬಾತ ಕೊಲೆ ಮಾಡಿದ್ದಾನೆ. ಆದರೆ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ. ಆರೋಪಿ ಮಂಜುನಾಥ ಮೃತ ಮಾಚೇನಹಳ್ಳಿ ಕುಟುಂಬದಲ್ಲಿ ಈ ಹಿಂದೆ ಕುರಿಗಾಹಿ ಆಗಿ ಕೂಲಿ ಕೆಲಸ ಮಾಡಿದ್ದ. ವಿಪರೀತ ಕುಡಿತಕ್ಕೊಳಗಾದ್ದರಿಂದ ಆರೋಪಿಯನ್ನು ಕೆಲಸದಿಂದ ಬಿಡಿಸಿದ್ರು. ಆದ್ರೆ ಆರೋಪಿ ಮುಂಗಡ ಹೆಚ್ಚಿನ ಹಣ ಪಡೆದಿದ್ದ. ಮುಂಗಡ ಹಣ ಕೊಡು ಇಲ್ಲವೆ ಕೆಲಸ‌ ಮಾಡು ಎಂದು ತಾಕೀತು ಮಾಡಿದ್ರು. ಮತ್ತೆ ಕೆಲಸ ಮಾಡುವುದಾಗಿ ತಪ್ಪೊಪ್ಪಿಕೊಂಡು ಬಂದಿದ್ದ. ರಾತ್ರಿ ಚಿಕನ್ ಊಟ ಮಾಡಿ ಮಾಲಿಕನ‌ ಮಗ ಮಹಾಂತೇಶ್, ಅವನ ಸ್ನೇಹಿತ ಫಕೀರೇಶ್ ಹಾಗೂ ಆರೋಪಿ ಮಂಜುನಾಥ, ಈ ಮೂವರು ಮನೆಯ ಮೆಳಗಿ ಮೇಲೆ ಮಲಗಿದ್ದರು. ಬೆಳಗಿನ ಜಾವ ಏಕಾಏಕಿ ಮಾಲಿಕನ ಮಗ ಮತ್ತೋರ್ವನಿಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ವಿಕೃತ ಮೇರೆದಿದ್ದಾನೆ.

ಘಟನಾ ಸ್ಥಳಕ್ಕೆ ಗದಗ ಎಸ್.ಪಿ ಶಿವಪ್ರಕಾಶ್ ದೇವರಾಜ್, ಡಿವೈಎಸ್ಪಿ ವಿಜಯ್ ಬಿರಾದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಕೊಲೆಯಾದ ಮಹಾಂತೇಶ್ ಮದುವೆಯಾಗುವ ಭರಾಟೆಯಲ್ಲಿದ್ದ.ಇಂದು ಹುಡುಗಿ ನೋಡಲು ನೋಡಲು ಹೋಗಬೇಕಿತ್ತು. ಆದ್ರೆ ಖುಷಿ ಕನಸು ಕಂಡು ಮಲಗಿದವ, ಬೆಳಗಾಗುವಷ್ಟರಲ್ಲಿ ಹೆಣವಾಗಿ ಮಲಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.

ಆರೋಪಿ ಮಂಜುನಾಥ ಕೊಲೆ ಮಾಡಿ ಏರಿಯಾ ಮಂದಿಗೆಲ್ಲಾ ಕೂಗಿ ಕೂಗಿ ಹೇಳಿದ್ದಾನೆ. ನಾನು ಈಗಾಗಲೇ ಇಬ್ಬರ ಕೊಲೆ ಮಾಡಿದ್ದೆನೆ. ಇಲ್ಲಿ ಯಾರಾದ್ರೂ ಬಂದ್ರೆ ಅವರ ಹೆಣ ಉರುಳಿಸುವುದಾಗಿ ಹೆದರಿಕೆ ಹಾಕಿದ್ದಾನೆ. ಹೀಗೆ ಆಳಾಗಿ ದುಡಿಯಲು ಬಂದವನು ಆಗಾಗ ದರ್ಪ ತೋರಿ ಅರಸನಾಗುತ್ತಿದ್ದ. ಈಗ ಪೊಲೀಸರ ಅತಿಥಿಯಾಗಿದ್ದನೆ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

RELATED ARTICLES

Related Articles

TRENDING ARTICLES