Sunday, November 3, 2024

ಬಾಲಿವುಡ್​ಗೆ ಕನ್ನಡ ಡೈರೆಕ್ಟರ್ ; ಲಂಡನ್​ನಲ್ಲಿ ಶೂಟಿಂಗ್

ಕನ್ನಡಿಗರ ಸಿನಿಮಾ ಮೇಕಿಂಗ್​ ಸ್ಟೈಲ್​ಗೆ ಬಾಲಿವುಡ್​, ಹಾಲಿವುಡ್​​ ಕೂಡ ಬೆರಗಾಗಿ ನೋಡ್ತಿದೆ. ಸೌತ್​ ಸಿನಿಮಾಗಳ ಆರ್ಭಟಕ್ಕೆ ಮನಸೋತ ಬಾಲಿವುಡ್​​ ತಾಂತ್ರಿಕ ವರ್ಗ ಕನ್ನಡಿಗರಿಗೆ ಬಿಗ್​ ಆಫರ್​ ಕೊಟ್ಟಿದೆ. ಶಾಕ್​​ ಆದ್ರೂ ಇದು ಸತ್ಯ. ಲವ್​ ಜಾನರ್​ ಸಿನಿಮಾಗಳ ನಿಪುಣ ಹರಿ ಸಂತುಗೆ ಬಾಲಿವುಡ್​​ನಿಂದ ಬಿಗ್​ ಆಫರ್​ ಬಂದಿದೆ.

ಬಾಲಿವುಡ್​ಗೆ ಕನ್ನಡ ಡೈರೆಕ್ಟರ್.. ಲಂಡನ್​ನಲ್ಲಿ ಶೂಟಿಂಗ್

ಕನ್ನಡಿಗರ ಚಾಲಾಕಿತನ ಕಂಡು ಬಾಲಿವುಡ್​ ಕೂಡ ಬೆರಗು

ಬಾಲಿವುಡ್​​ ಪ್ರಾಜೆಕ್ಟ್​​ಗೆ ‘ಪಪ್ಪಿ ಲವ್’​​ ಟೈಟಲ್​ ಫೈನಲ್​

ಸಂಚಲನ ಮೂಡಿಸಲಿದೆ ಕನ್ನಡಿಗ ಹರಿಸಂತು ಕಸರತ್ತು

ಸೌತ್​ ಸಿನಿಮಾಗಳು ಅಂದ್ರೆ ಮೂಗು ಮುರಿತಿದ್ದ ಕಾಲ ಬದಲಾಗಿದೆ. ಸೌತ್​​ ಸಿನಿಮಾ ಮೇಕಿಂಗ್​ ಸ್ಟೈಲ್​ ಗಾಳಿ ಬಾಲಿವುಡ್​​ಗೂ ಬೀಸಿದೆ. ಇಲ್ಲಿನ ಸಿನಿಮಾಗಳ ಕಥಾವಸ್ತು, ಟೆಕ್ನಿಕಲ್ಲಿ ಬದಲಾಗಿರೋ ಪರಿ ನೋಡಿ ಬೆರಗುಗಣ್ಣಿನಿಂದ ಇಡೀ ಭಾರತೀಯ ಚಿತ್ರರಂಗವೇ ನೋಡ್ತಿದೆ. ಇದಕ್ಕೆ ಸಾಕ್ಷಿಯಾಗಿ ಕನ್ನಡದ ಫೇಮಸ್​​ ನಿರ್ದೇಶಕನಿಗೆ ಬಾಲಿವುಡ್​ ರೆಡ್ ಕಾರ್ಪೆಟ್​​ ವೆಲ್ಕಮ್​ ಮಾಡಿದೆ. ಬಾಲಿವುಡ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳೋಕೆ ಬಿಗ್​ ಆಫರ್​ ಕೊಟ್ಟಿದೆ.

ಅಲೆಮಾರಿ, ಕಾಲೇಜು ಕುಮಾರ, ಬೈ ಟು ಲವ್ ಅಂತಾ​ ಹಿಟ್​ ಸಿನಿಮಾ ಕೊಟ್ಟಿದ್ದ  ಮೋಸ್ಟ್​ ಫೇಮಸ್​ ಡೈರೆಕ್ಟರ್​ ಹರಿಸಂತು ಅವರಿಗೆ ಈ ಬಿಗ್​ ಆಫರ್​ ಸಿಕ್ಕಿದೆ. ಕನ್ನಡದ ಹಿರಿಯ ನಿರ್ದೇಶಕರಿಗೆ ಹೀಗೊಂದು ಅವಕಾಶ ಸಿಕ್ಕಿತ್ತು. ಅನೇಕ ವರ್ಷಗಳ ನಂತ್ರ ಇಂತಹ ಅದೃಷ್ಠ ಹರಿಸಂತು ಅವರಿಗೆ ಒಲಿದು ಬಂದಿದೆ. ಹರಿಸಂತು ಅವರ ನಿರ್ದೇಶನದ ಅಲೆಮಾರಿಗೆ ಪ್ರಶಸ್ತಿಯು ಒಲಿದು ಬಂದಿತ್ತು. ಹರಿಸಂತು ಅವರ ಕ್ರಿಯೇಟಿವಿಟಿ ಮೆಚ್ಚಿ ಆಫರ್​ ನೀಡಲಾಗಿದೆ.

ಹಾಂಟಿಂಗ್​ ಲವ್​ಸ್ಟೋರಿಗಳ ಮೂಲಕ ಸ್ಯಾಂಡಲ್​​ವುಡ್​ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರೋ ಖ್ಯಾತ ನಿರ್ದೇಶಕ ಹರಿಸಂತು. ಇದೀಗ ಹಿಂದಿಯ ಪಪ್ಪಿ ಲವ್​ ಅನ್ನೋ ಲವ್​ಸ್ಟೋರಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಬಾಲಿವುಡ್​ನಲ್ಲೂ ಕೂಡ ಲವ್​ಸಬ್ಜೆಕ್ಟ್​​ನ ಆಯ್ಕೆ ಮಾಡಿಕೊಂಡಿದ್ದಾರೆ.  ವೆಬ್​ ಸೀರೀಸ್​ ಮೂಲಕ ಹೆಸರು ಮಾಡಿದ್ದ ತನುಜ್​ ವಿರ್ವಾನಿ, ತ್ರಿಧಾ ಚೌದರಿ, ಸಪ್ನಪಬ್ಬಿ ಲೀಡ್​ ರೋಲ್​ನಲ್ಲಿ ಆ್ಯಕ್ಟ್​ ಮಾಡ್ತಿದ್ದಾರೆ.

ಪಪ್ಪಿ ಲವ್​ ಸಿನಿಮಾದ ಶೂಟಿಂಗ್​​ ಜುಲೈ ಆರಂಭದಲ್ಲಿ ಶುರುವಾಗಲಿದ್ದು ಕಂಪ್ಲೀಟ್​​ ಯುಕೆ, ಲಂಡನ್​ನಲ್ಲಿ ಶೂಟಿಂಗ್​ ನಡೆಯಲಿದೆ. ಕನ್ನಡದ ನಿರ್ದೇಶಕನೊಬ್ಬ ಹಿಂದಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳ್ತಾ ಇರೋ ಸುದ್ದಿ ಕೇಳಿ ಸ್ಯಾಂಡಲ್​ವುಡ್​​ ಕೂಡ ಹರ್ಷ ವ್ಯಕ್ತ ಪಡಿಸಿದೆ. ಹರಿಸಂತು ಸಿನಿಮಾಗಳಿಗೆ ಸ್ಯಾಂಡಲ್​ವುಡ್​ ಅಚೆಗೂ ಬೇಡಿಕೆ ಎಷ್ಟಿದೆ ಎಂಬುದು ತಿಳಿಯಲಿದೆ.

ನಿಕೇತ್ ಪಾಂಡೆ  ಸಂಭಾಷಣೆ ಚಿತ್ರಕ್ಕಿದ್ದು, ರಾಜಾರಾಂ ಕ್ಯಾಮೆರಾ ಕೈ ಚಳಕ ಮ್ಯಾಜಿಕ್​ ಮಾಡಲಿದೆ. ಬ್ಲೂ ಬ್ಲಿಂಗ್ ಪ್ರೊಡಕ್ಷನ್ಸ್ ನ ವಿಪುಲ್ ಶರ್ಮಾ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಬಾಹುಬಲಿ, ಆರ್​ಆರ್​ಆರ್​​, ಕೆಜಿಎಫ್​ ಸಿನಿಮಾಗಳ ನಂತ್ರ ಸೌತ್​ ಡೈರೆಕ್ಟರ್​ಗಳಿಗೆ ಭಾರಿ ಡಿಮ್ಯಾಂಡ್​ ಬಂದಿರೋದು ನಿಜ. ಸಿನಿಮಾ ಭಾಷೆ ಮೀರಿದ ಮಾಧ್ಯಮ ಅನ್ನೋದು ಇದ್ರಿಂದ ಮತ್ತೊಮ್ಮೆ ಪ್ರೂವ್ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​​ ಟಿವಿ

RELATED ARTICLES

Related Articles

TRENDING ARTICLES