Wednesday, January 22, 2025

ರಾತ್ರಿ ಸ್ನೇಹಿರೊಟ್ಟಿಗೆ ಪಾರ್ಟಿ ; ಬೆಳಗ್ಗೆ ಹೆಣವಾಗಿ ಪತ್ತೆ

ಬಳ್ಳಾರಿ : ಕೊಲೆ ಮಾಡೋದು ಅನ್ನೋದು ಇತ್ತೀಚೆಗೆ ತುಂಬಾ ಸುಲಭವಾಗಿದೆ, ಸಣ್ಣ, ಸಣ್ಣ ಕಾರಣಕ್ಕೆ ಹೆಣಗಳು ಬೀಳುತ್ತಲೇ ಇವೆ. ಅಂತಹದ್ದೊಂದು ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಬೆಳಗ್ಗೆ ಎದ್ದ ಕೂಡಲೆ ಕೊಲೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ರೈಲ್ವೇ ಟ್ರಾಕ್ ಬಳಿ ಬಿಸಾಕಿರೋ ಸುದ್ದಿ ತಿಳಿಯುತ್ತಿದ್ದಂತೆ ರೈಲ್ವೇ ಟ್ರಾಕ್ ಕಡೆ ಗಾಬರಿಯಿಂದ ಓಡೋಡಿ ಬಂದಿದ್ದಾರೆ.  ಯಮನೂರ(43) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ರೈಲ್ವೇ ಟ್ರಾಕ್ ಬಳಿ ಬಿಸಾಡಿದ್ದಾರೆ.

ನಿನ್ನೆ ರಾತ್ರಿ ಕೊಲೆಯಾದ ಯಮನೂರ ಸ್ನೇಹಿತರ ಜತೆ ಹೊರಗಡೆ ಹೋಗಿದ್ದ ಎನ್ನಲಾಗಿದೆ. ರಾತ್ರಿ ಪಾರ್ಟಿ ಕೂಡ ಮಾಡಿದ್ದಾರೆ ಅನ್ನೋ ಅನುಮಾನಕ್ಕೆ ರಸಂ ತುಂಬಿದ ಗ್ಲಾಸ್ ಪುಷ್ಠಿ ನೀಡುತ್ತಿದೆ. ರೈಲ್ವೇ ಟ್ರಾಕ್ ಗೆ ರಕ್ತದ ಕಲೆಗಳು ಅಂಟಿಕೊಂಡಿವೆ. ಇದಲ್ಲದೇ ಎಲ್ಲದಕ್ಕೂ ಮಿಗಿಲಾಗಿ ಮಚ್ಚು ಕೂಡ ಮೃತನ ದೇಹದ ಪಕ್ಕದಲ್ಲೇ ಇದೆ. ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇನ್ನೂ, ಕುಟುಂಬಸ್ಥರೇ ಗೊಂದಲದಲ್ಲಿದ್ದಾರೆ. ಇದು ಮೇಲ್ನೋಟಕ್ಕೆ ಕೊಲೆ ಅಂತ ಅನಿಸಿದೆ, ಈ ಸಂಬಂಧ ರೈಲ್ವೇ ಪೊಲೀಸರು ತನಿಖೆ ನಡೆಸಿದ್ದಾರೆ.

ಇನ್ನೂ ಕೊಲೆಗೆ ಸ್ಪಷ್ಟ ಕಾರಣ ತಿಳಿಯಬೇಕಾದ್ರೆ, ಪೊಲೀಸರು ತನಿಖೆ ನಡೆಸಬೇಕು. ಕೊಲೆ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿದೆ.

RELATED ARTICLES

Related Articles

TRENDING ARTICLES