Monday, December 23, 2024

ಈ ರೇಂಜ್​ಗೆ ನನ್ನ ಹೆದರಿಸಬೇಡಿ ಎಂದ್ರು ಅಭಿನಯ ಚಕ್ರವರ್ತಿ

ಲೈಫನ್ನ ವಿಂಡೋಸೀಟಲ್ಲಿ ಕುಳಿತು ನೋಡಿದಾಗ ಆಗೋ ಫೀಲ್​ ಬೇರೆ. ಯೆಸ್​.. ನಟಿ ಹಾಗೂ ನಿರೂಪಕಿ ಮೊದಲ ಬಾರಿಗೆ ವಿಂಡೋಸೀಟ್​​ ಅನ್ನೋ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುವ ಮೂಲಕ ಎಲ್ಲರ   ಕುತೂಹಲ ಕೆರಳಿಸಿದ್ದಾರೆ. ಈ ಸಿನಿಮಾ ಸೆಟ್ಟೇರಿದ ದಿನದಿಂದ ಸಖತ್​ ಕ್ರೇಜ್​ ಕ್ರಿಯೇಟ್​ ಮಾಡಿದ್ದು, ಕಿಚ್ಚ ಸುದೀಪ್​ ಕೂಡ ಸಾಥ್​ ಕೊಟ್ಟಿದ್ದಾರೆ.

ಪ್ರೇಕ್ಷಕರಿಗೂ ಮುನ್ನ ಇಂಡಸ್ಟ್ರಿ ಮೆಚ್ಚಿದ ವಿಂಡೋಸೀಟ್​..!

ಈ ರೇಂಜ್​ಗೆ ಹೆದರಿಸಬೇಡಿ ಎಂದ್ರು ಅಭಿನಯ ಚಕ್ರವರ್ತಿ

ಹೇಗಿದೆ ವಿಂಡೋಸೀಟ್​​​​​​..? ಸ್ಯಾಂಡಲ್​ವುಡ್​​ ಅಚ್ಚರಿ

ಹಾಲಿವುಡ್​​ ಸಿನಿಮಾಗೆ ಹೋಲಿಸಿದ ಕಲಾವಿದರು..!

ರಂಗಿತರಂಗ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಹೆದರಿಸಿದ್ದ ನಿರೂಪ್​ ಭಂಡಾರಿ ಮತ್ತೊಮ್ಮೆ ಚಿತ್ರರಸಿಕರನ್ನು ಬೆಚ್ಚಿ ಬೀಳಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ವಿಂಡೋಸೀಟ್​​ ಪ್ರೀಮಿಯರ್​​ ಶೋಗೆ ಸಿಕ್ಕ ರೆಸ್ಪಾನ್ಸ್​ ಇದನ್ನು ಮತ್ತೆ ಪ್ರೂವ್​ ಮಾಡಿದೆ. ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ವಿಂಡೋಸೀಟ್​​ ಸಿನಿಮಾ ನೋಡಿ ಸಖತ್​ ಇಂಪ್ರೆಸ್​ ಆಗಿದ್ದಾರೆ. ಪ್ರಾಮಿಸಿಂಗ್​​ ಸಿನಿಮಾಗೆ ಬಹುಪರಾಕ್​ ಹೇಳಿದ್ದಾರೆ. ಶೀಥಲ್​ ಶೆಟ್ಟಿ ಆ್ಯಕ್ಷನ್​ ಕಟ್​ಗೆ ಜೈಕಾರ ಹಾಕಿದ್ದಾರೆ.

ಶೀಥಲ್​ ಶೆಟ್ಟಿ ಮೊದಲ ಬಾರಿಗೆ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾದ ಮೂಲಕ ಭಯಾನಕ ಕಥೆಯ ಎಳೆಯೊಂದನ್ನು ಬಿಚ್ಚಿಡಲಿದ್ದಾರೆ. ಮ್ಯುಜಿಷಿಯನ್​ ರೋಲ್​ನಲ್ಲಿ ರಹಸ್ಯ ಕಥೆಯೊಂದಕ್ಕೆ ನಿರೂಪ್​ ಬಣ್ಣ ಹಚ್ಚಿದ್ದಾರೆ. ಸಿನಿಮಾ ಸೆಟ್ಟೇರಿದ ದಿನದಿಂದ ಪ್ರೊಡಕ್ಷನ್​ ಹಂತದವರೆಗೂ ಫುಲ್​ ಸಫೋರ್ಟ್​ ಮಾಡಿರೋ ಸ್ಯಾಂಡಲ್​ವುಡ್​​ ಹೆಬ್ಬುಲಿ ಕಿಚ್ಚ ವಂಡರ್​​ಫುಲ್​ ಸಿನಿಮಾ ಎಂದಿದ್ದಾರೆ. ಚಿಕ್ಕ ಬಜೆಟ್​​ನಲ್ಲಿ ದೊಡ್ಡ ಸಿನಿಮಾ ಕೊಟ್ಟಿದ್ದೀರಿ ಎಂದಿದ್ದಾರೆ.

ವಿಂಡೋಸೀಟ್​ ಸಿನಿಮಾ ಟ್ರೈಲರ್​, ಪೋಸ್ಟರ್​​​ಗಳ ​ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಗಾಂಧಿನಗರ ಕೂಡ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ಕುತೂಹಲದಿಂದ ಎದುರು ನೋಡ್ತಿದೆ. ಜುಲೈ 01ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್​ ರಿಲೀಸ್​ ಆಗ್ತಿರೋ ವಿಂಡೋಸೀಟ್​​ ಹೊಸ ದಾಖಲೆ ಬರೆಯುವ ಸುಳಿವು ಕೊಟ್ಟಿದೆ. ಇದೀಗ, ಈ ಸಿನಿಮಾದ ಪ್ರೀಮಿಯರ್​ ಶೋ ನೋಡಿದ ಸ್ಯಾಂಡಲ್​ವುಡ್​​ ಸ್ಟಾರ್ಸ್​​ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಸ್ವತಃ ಶೀಥಲ್​ ಶೆಟ್ಟಿ ಅವರೇ ನಿಗೂಢ ಕಥೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಜಾಕ್​ ಮಂಜು ಬಂಡವಾಳ ಹೂಡಿದ್ದ, ಅರ್ಜುನ್​​ ಜನ್ಯಾ ಸಂಗೀತವಿದೆ. ಸಿನಿಮಾದಲ್ಲಿ ನಾಯಕಿಯರಾಗಿ ಅಮೃತಾ ಅಯ್ಯಂಗಾರ್​ ಹಾಗೂ ಸಂಜನಾ ಆನಂದ್​​ ಕಾಣಿಸಿಕೊಳ್ತಿದ್ದಾರೆ.  ಕಿಚ್ಚ ಸುದೀಪ್​​ ಹಾಡು ಹೊಗಳಿರುವ ವಿಂಡೋಸೀಟ್​ ಚಿತ್ರಕ್ಕೆ ಇನ್ನು ಅನೇಕರು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ವಿಂಡೋಸೀಟ್​​ ಸಿನಿಮಾ ನೋಡಿರುವ ಸ್ಯಾಂಡಲ್​ವುಡ್​​ ಸ್ಟಾರ್​ಗಳಿಗೆ ಅಚ್ಚರಿಯ ಅನುಭವ ಆಗಿದೆ. ಮೊದಲ ಪ್ರಯತ್ನದಲ್ಲೇ ದೊಡ್ಡ ಹೆಜ್ಜೆ ಇಟ್ಟಿರುವ ಶೀಥಲ್​​ ಶೆಟ್ಟಿ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರೋ ಕನಸು ಸಾಕಾರವಾಗೋ ಘಳಿಗೆ ಹತ್ತಿರವಾಗ್ತಾ ಇದೆ. ಏನೇ ಆದ್ರೂ ಜುಲೈ 01ಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಮೂಲಕ ಕನಸು ಸಾಕಾರವಾಗಲಿದೆ. ಒಟ್ನಲ್ಲಿ ವಿಂಡೋಸೀಟ್​ಗೆ ಪವರ್​ ಟಿವಿ ಕಡೆಯಿಂದ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES