ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಬಿಜೆಪಿ ಹಿರಿಯ ನಾಯಕರಿಗೆ ಎದುರಾಯ್ತು ತಲೆನೋವು ಎದುರಾಗಿದೆ.
ಟಿಕೆಟ್ ಗಿಟ್ಟಿಸೋಕೆ ವಯಸ್ಸಿನ ಅಡ್ಡಿ ಎದುರಾಗಿದ್ದು, ೧೨೦ ಶಾಸಕರಲ್ಲಿ ಡಜನ್ ಮಂದಿಗೆ ದಾಟಿದೆ ೭೦ರ ಗಡಿ ದಾಟಿದ್ದು, ೭೦ ಮೀರಿದವರಿಗೆ ಟಿಕೆಟ್ ಇಲ್ಲವೆಂಬ ಅಲಿಖಿತ ನಿಯಮವಾಗಿದೆ. ಹೀಗಾಗಿ ವಯಸ್ಸು ಮೀರಿದ ನಾಯಕರಿಗೆ ಟೆನ್ಶನ್ ಶುರುವಾಗಿದೆ. ತಮ್ಮ ಮಕ್ಕಳು,ಕುಟುಂಬಸ್ಥರಿಗೆ ಟಿಕೆಟ್ ನೀಡಿ ಎಂಬ ವಾದ ಉಂಟಾಗಿದೆ.
ರಾಜ್ಯ ಬಿಜೆಪಿಯಲ್ಲಿ ೭೦ ದಾಟಿದವರು ಯಾರು?
ಮಾಜಿ ಸಿಎಂ ಬಿಎಸ್ ವೈ-೭೯,ದಾವಣಗೆರೆ ದಕ್ಷಿಣದ ಶಾಸಕ ಎಸ್.ಎ.ರವೀಂದ್ರ ನಾಥ್ -೭೫ ಕಲಘಟಕಿಯ ಸಿ.ಎಸ್.ನಿಂಬಣ್ಣನವರ್ ವಯಸ್ಸು೭೧ ಶಿವಮೊಗ್ಗ ನಗರ ಶಾಸಕ ಕೆ.ಎಸ್.ಈಶ್ವರಪ್ಪ -೭೪, ಚಿತ್ರದುರ್ಗ ನಗರ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ-೭೪, ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ-೭೪, ಮುಧೋಳದ ಸಚಿವ ಕಾರಜೋಳರಿಗೆ -೭೧, ಗೋವಿಂದರಾಜನಗರದ ವಿ.ಸೋಮಣ್ಣಗೆ -೭೧, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ -೭೧, ಆಳಂದದ ಸುಭಾಷ್ ಗುತ್ತೇದಾರ್ ವಯಸ್ಸು ೭೧, ಬೈಂದೂರಿನ ಸುಕುಮಾರ ಶೆಟ್ಟರ ವಯಸ್ಸು ೭೦, ಶಿರಹಟ್ಟಿಯ ರಾಮಣ್ಣ ಲಮಾಣಿಗೆ ೭೦