Monday, December 23, 2024

ಅಪ್ಪನಂತೆ ಪೋಸ್​​ ಕೊಟ್ಟ ಜೂನಿಯರ್​ ರಾಕಿಭಾಯ್

ಗ್ಲೋಬಲ್​ ಐಕಾನ್​​ ರಾಕಿಭಾಯ್​​ ಜಿಂದಗಿ ಕೆಜಿಎಫ್​​ ನಂತ್ರ ಫುಲ್​ ಚೆಂಜ್​ ಆಗಿದೆ. 100ಕೋಟಿಗೂ ಮೀರಿದ ಸಂಭಾವನೆಯತ್ತ ಮುನ್ನುಗ್ತಿರೋ ರಾಕಿಂಗ್​ ಸ್ಟಾರ್​​ ನ್ಯಾಷನಲ್​ ಸ್ಟಾರ್​​ ಆಗಿ ಮಿಂಚ್ತಿದ್ದಾರೆ. ಇದೀಗ ಜ್ಯೂನಿಯರ್​ ರಾಕಿಭಾಯ್​ ಕೂಡ ಅಪ್ಪನಂತೆ ದೊಡ್ಡ ಮಟ್ಟದ ಸಾಧನೆ ಮಾಡೋ ಸಿಗ್ನಲ್​ ಕೊಟ್ಟಿದ್ದಾರೆ. ಅರೆ.. ಅಂತಾ ಸಾಧನೆ ಏನು ಅಂತೀರಾ..?

ಅಪ್ಪನಂತೆ ಪೋಸ್​​ ಕೊಟ್ಟ ಜೂನಿಯರ್​ ರಾಕಿಭಾಯ್

ಪುಟ್ಟ ಹೆಜ್ಜೆ.. ದೊಡ್ಡ ಕನಸು.. ವರ್ಲ್ಡ್​ ಈಸ್​ ಮೈ ಟೆರಿಟರಿ

ರಾಧಿಕಾ ಪಂಡಿತ್​​ ಫೋಟೋ ಶೇರ್​​​.. ಅಪ್ಪನಂತೆ ಮಗ

ಸ್ಟಾರ್​ ಮಾಡೋ ಕನಸಿನಲ್ಲಿ ರಾಕಿಭಾಯ್​ ಫ್ಯಾಮಿಲಿ..?

ಕೆಜಿಎಫ್​ ಸಿನಿಮಾ ಬರೋಕೆ ಮುಂಚೆ ರಾಕಿಭಾಯ್​​ ಹವಾ ಯಾವ ಲೆವೆಲ್​ಗೆ ಇತ್ತು. ಕೆಜಿಎಫ್​ ನಂತ್ರ ಯಶ್​​ ಹವಾ ಯಾವ ಮಟ್ಟಕ್ಕೆ ಹೋಯ್ತು ಅಂತಾ ಎಲ್ಲರಿಗೂ ಗೊತ್ತು. ನಾನ್​ ಬರೋವರೆಗೂ ಮಾತ್ರ ಬೇರೆಯವರ ಹವಾ, ನಾ ಬಂದಮೇಲೆ ನಂದೇ ಹವಾ ಅಂತಾ ಖಡಕ್​ ಡೈಲಾಗ್​ ಹೊಡೆದು ಎಚ್ಚರಿಕೆ ಕೊಟ್ಟಿದ್ದ ರಾಕಿಭಾಯ್​​ ಕೆಜಿಎಫ್​​ ನಂತ್ರ ಹೊಸ ರೂಲ್​ಗೆ ನಾಂದಿ ಹಾಡಿದ್ರು. ಕನ್ನಡದ ತಾಕತ್ತನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದ್ರು.

ಇಂದಿಗೆ ರಾಕಿಭಾಯ್​​ ಸಿನಿಮಾಗಳ ಮೇಲಿನ ನಿರೀಕ್ಷೆಯೂ ಬದಲಾಗಿದೆ. ಕೆಜಿಎಫ್​​ ಸಿನಿಮಾದಲ್ಲಿ ರಾಕಿಭಾಯ್​​ ಸಮುದ್ರದ ದಂಡೆ ಮೇಲೆ ನಿಂತು ಹೊಡೆದಿದ್ದ ಡೈಲಾಗ್​​ ಎಲ್ಲರಿಗೂ ನೆನಪಿದೆ. ನಾವು ಇಡೋ ಹೆಜ್ಜೆ ಎಷ್ಟೇ ಚಿಕ್ಕದಾಗಿದ್ರು ತಲುಪೋ ಗುರಿ ಮಾತ್ರ ತುಂಬಾ ದೊಡ್ಡದಾಗಿರಬೇಕಂತೆ. ಇಡೀ ಮುಂಬೈ ಡಾನ್​ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ರಾಕಿಭಾಯ್​​ ಗುರಿ ಕೂಡ ದೊಡ್ಡದಾಗಿತ್ತು. ಇಡೀ ಪ್ರಪಂಚವನ್ನೇ ರೂಲ್​ ಮಾಡೋ ದೊಡ್ಡ ಗುರಿ ರಾಕಿಭಾಯ್​​ಗೆ ಇತ್ತು. ಇದೀಗ ಅಪ್ಪನಂತೆ ಸಮುದ್ರದ ದಂಡೆ ಮೇಲೆ ನಿಂತು ಪೋಸ್​ ಕೊಟ್ಟಿದ್ದಾರೆ.

ರಾಕಿಭಾಯ್​​ಗೆ ಹೋಗೋ ದಾರಿ ಗೊತ್ತಿರಲಿಲ್ಲ. ತಲುಪೋ ಜಾಗ ಗೊತ್ತಿರಲಿಲ್ಲ. ಅಲ್ಲಿನ ಅಮಾನುಷ ಚರಿತ್ರಯ ಬಗ್ಗೆಯೂ ಗೊತ್ತಿರಲಿಲ್ಲ. ಆದ್ರೂ ಕೂಡ ಅಮ್ಮನ ಅಸೆ ಈಡೇರಿಸಬೇಕು ಅಂತಾ ಮಹಾರಕ್ಕಸರ ಕ್ರೂರ ಜಗತ್ತು ನರಾಚಿಗೆ ನುಗ್ಗಿದ. ರಕ್ತ ಹೀರೋ ನರರಕ್ಕಸರ ಬಗ್ಗು ಬಡಿದ ರಾಕಿಭಾಯ್​​ ತನ್ನದೆ ಹೊಸ ಸಾಮ್ರಾಜ್ಯ ಕಟ್ಟಿದ. ಇದೀಗ ಅಪ್ಪನ ಹಾದಿಯಲ್ಲೇ ಮಗ ಕೂಡ ಸಮುದ್ರ ದಂಡೆ ಮೇಲೆ ನಿಂತು ಅಪ್ಪನ ಆಸೆ ಈಡೇರಿಸೋ ಕನಸು ಕಾಣ್ತಿದ್ದಾನೆ. ಈ ಫೋಟೋವನ್ನ ರಾಧಿಕಾ ಪಂಡಿತ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಅಗಿದೆ.

ರಾಕಿಭಾಯ್​ ಸಿನಿಮಾಗಳಲ್ಲಿ ಸಖತ್​ ಬ್ಯುಸಿ ಇದ್ರು ಕೂಡ ಫ್ಯಾಮಿಲಿಗೆ ತುಂಬಾ ಸಮಯ ಮೀಸಲಿಡ್ತಾರೆ. ತಮ್ಮ ಫ್ಯಾಮಿಲಿಯೊಟ್ಟಿಗೆ ವೆಕೇಷನ್​​ ಹೋಗ್ತಿರ್ತಾರೆ. ಇದೀಗ ರಾಧಿಕಾ ಪಂಡಿತ್​ ಮಗ ಸಮುದ್ರದ ತೀರದಲ್ಲಿ ನಿಂತಿರೋ ಫೋಟೋ ತೆಗೆದು ಸಿಮಿಲರ್​ ಇದೆ ಎಂದು ಬರೆದುಕೊಂಡಿದ್ದಾರೆ. ಅಪ್ಪನಂತೆ ಮಗನು ಕೂಡ ಆಗಬೇಕು ಅನ್ನೋದು ರಾಧಿಕಾ ಪಂಡಿತ್ ಅವರ ಮಹದಾಸೆ ಅನ್ನೋದು ಇದ್ರ ಮೂಲಕ ಗೊತ್ತಾಗತ್ತೆ.

ಯಥರ್ವ್​​ ಕೊಟ್ಟಿರೋ ಪೋಸ್​ ನೋಡಿದ್ರೆ, ಕಡಲ ತೀರದಲ್ಲಿ ರಾಕಿಭಾಯ್​ ನಿಂತಿದ್ದ ಫೋಟೋ ನೆನಪು ಮಾಡುತ್ತದೆ. ಈ ಫೋಟೋವನ್ನು ಅಭಿಮಾನಿಗಳು ಸ್ಕ್ರೀನ್ಶಾಟ್​ ತೆಗೆದುಕೊಂಡು ಶೇರ್​ ಮಾಡ್ತಿದ್ದಾರೆ. ಎನಿವೇ ಅಪ್ಪನಂತೆ ಮಗನು ಕೂಡ ಭವಿಷ್ಯದಲ್ಲಿ ಕನ್ನಡ ನೆಲದ ಹೆಸರು ಉಳಿಸಲಿ ಎಂದು ಆಶೀಸೋಣ.

ರಾಕೇಶ್​ ಆರುಂಡಿ, ಪಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES