Monday, December 23, 2024

ಉದಯಪುರ ಹತ್ಯೆ ಖಂಡಿಸಿ ‘ಹಿಂದೂಗಳ ಜೀವ ಮುಖ್ಯ’ ಎಂದ ನಟಿ ಪ್ರಣಿತಾ

ಬೆಂಗಳೂರು: ಉದಯಪುರ ವಿಡಿಯೋವನ್ನು ನಾನು ನೋಡಲೇಬಾರದಿತ್ತು. ನಿಜಕ್ಕೂ ಭಯಾನಕ ಎಂದು ಪ್ರಣಿತಾ ಸುಭಾಷ್​ ಪೋಸ್ಟ್​ ಮಾಡಿದ್ದಾರೆ. ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾಡಹಗಲೇ ಇಂಥ ಹೇಯ ಕೃತ್ಯ ನಡೆದಿರುವುದಕ್ಕೆ ಹಲವು ಸೆಲೆಬ್ರಿಟಿಗಳು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ನಟ-ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಅನುಪಮ್​ ಖೇರ್​ ಸ್ಯಾಂಡಲ್​ವುಡ್​ ನಟಿ ಪ್ರಣಿತಾ ಸುಭಾಷ್​ ಅವರು ಕೂಡ ಈ ಕುರಿತು ಪೋಸ್ಟ್​ ಮಾಡಿದ್ದಾರೆ.

‘ಹಿಂದೂಗಳ ಜೀವ ಮುಖ್ಯ’ ಎಂದು ಪ್ರಣಿತಾ ಅವರು ಫಲಕ ಹಿಡಿದು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದೆ. ಉದಯಪುರ ವಿಡಿಯೋವನ್ನು ನಾನು ನೋಡಲೇಬಾರದಿತ್ತು. ನಿಜಕ್ಕೂ ಭಯಾನಕ. ಹಿನ್ನೆಲೆಯಲ್ಲಿ ಕೇಳಿಸಿದ ಆ ಚೀರಾಟ ನಮ್ಮ ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ ಮತ್ತು ದೀರ್ಘ ಕಾಲದವರೆಗೆ ಕಾಡುತ್ತಲೇ ಇರುತ್ತದೆ. #JusticeForKanhaiyaLal ಎಂದು ಪ್ರಣಿತಾ ಸುಭಾಸ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES