Monday, December 23, 2024

ಪವರ್‌ ಟಿವಿ ಬಿಗ್​​ ಇಂಪ್ಯಾಕ್ಟ್: ನಟ ನರೇಶ್‌ರಿಂದ ಇಂದು ತುರ್ತು ಸುದ್ದಿಗೋಷ್ಠಿ

ಬೆಂಗಳೂರು :  ಪವರ್‌ ಟಿವಿ ವರದಿಗೆ ಬೆಚ್ಚಿಬಿದ್ದ ತೆಲುಗು ನಟ ನರೇಶ್‌, ವರದಿ ಬೆನ್ನಲ್ಲೇ ಇಂದು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ತುರ್ತು ಸುದ್ದಿಗೋಷ್ಠಿಯನ್ನು ಏರ್ಪಡಿಸಿದ್ದಾರೆ.

ತೆಲುಗು ನಟ ನರೇಶ್‌ ಕರ್ಮಕಾಂಡವನ್ನು ನಿಮ್ಮ ಪವರ್‌ ಟಿವಿ ಬಿಚ್ಚಿಟ್ಟಿತ್ತು. ಇದು ನಿಮ್ಮ ಪವರ್​​ ಟಿವಿಯ ಸ್ಟಿಂಗ್​​ ಆಪರೇಷನ್​​ಗೆ ಸಿಕ್ಕ ಮತ್ತೊಂದು ಗೆಲುವಾಗಿದೆ. ನಟಿ ಪವಿತ್ರ ಲೋಕೇಶ್​​ ನರೇಶ್ ಜೊತೆಗಿನ ನಂಟಿನ ಬಗ್ಗೆ ಬಾಯ್ಬಿಟ್ಟಿದ್ದಾರೆ. ನರೇಶ್ ಬಗ್ಗೆ ಹಾಡಿ ಹೊಗಳಿದ್ದಾರೆ. ನರೇಶ್​ ಅವರಿಗೆ ಯಾವುದೇ ಕೆಟ್ಟ ಬುದ್ದಿ ಇಲ್ಲ. ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ಪವಿತ್ರ ಲೋಕೇಶ್​ ಅವರು ನಿನ್ನೆ ವರದಿ ಮಾಡಿದ್ದ ರಹಸ್ಯ ಕಾರ್ಯಚಾರಣೆಯಲ್ಲಿ ತಿಳಿಸಿದರು.

ಅಲ್ಲದೇ ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಪವಿತ್ರಾ ಲೋಕೇಶ್​ ಹಾಗೂ ಮಹೇಶ್​ ಬಾಬು ಅಣ್ಣ ನರೇಶ್​ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿತ್ತು. ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಹೇಳಿರುವ ಮಾಹಿತಿ ವಿಚಾರಕ್ಕೆ ಸಂಬಂಧಿಸಿದಂತ ವಿಷಯಗಳಿಗೆ ತೆರೆ ಎಳೆಯುವ ಸಲುವಾಗಿಯೇ ಇಂದು ಟಾಲಿವುಡ್​​ನ ನವರಸ ನಾಯಕ ನರೇಶ್‌ರಿಂದ ಮಧ್ಯಾಹ್ನ 12 ಗಂಟೆಗೆ ಪ್ರೆಸ್‌ಮೀಟ್‌ ಮಾಡಲಿದ್ದಾರೆ.

ಇನ್ನು ಸುದ್ದಿಗೋಷ್ಠಿ ರಮ್ಯಾ ರಘುಪತಿ ಪ್ರಕರಣಕ್ಕೆ ಸ್ಪಷ್ಟನೆ ಕೊಡ್ತಾರಾ ನರೇಶ್‌? ಮೂರು.. ಮತ್ತೊಂದು ಕಥೆಗೆ ನರೇಶ್ ಹೇಳೋದೇನು ? ಕನ್ನಡತಿ ನರೇಶ್‌ ಮೂರನೇ ಪತ್ನಿ ರಮ್ಯಾರಿಗೆ ಸಿಗುತ್ತಾ ನ್ಯಾಯ? ‘ಪವಿತ್ರ’ ಬಂಧಕ್ಕೆ ನರೇಶ್‌ ಬಳಿ ಏನಿದೆ ಉತ್ತರ ? ಎಂಬುದನ್ನು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES