Monday, February 24, 2025

ಜುಲೈ 1ರಿಂದ ನೈಸ್​​ ಟೋಲ್​​ ಹೆಚ್ಚಳ

ಬೆಂಗಳೂರು: ನೈಸ್‌ ಕಂಪನಿ ರಸ್ತೆ ಬಳಕೆ ಶುಲ್ಕವನ್ನು ಜುಲೈ 1ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

ಹೊಸೂರಿನಿಂದ ಕನಕಪುರ ರಸ್ತೆವರೆಗೆ ರೂ. 70 ಇದ್ದ ಟೋಲ್‌ ಕಾರ್‌ಗೆ ರೂ.80 ಆಗಿದೆ. ಬಸ್‌ ರೂ.225 ನೀಡಬೇಕಿದೆ. ಮೈಸೂರು ರಸ್ತೆ ತುಮಕೂರು ರಸ್ತೆವರೆಗೆ ರೂ.75 ಇದ್ದ ಟೋಲ್‌ ಕಾರ್‌ಗೆ ರೂ.85 ಆಗಿದೆ. ಬಸ್‌ ರೂ. 145 ನೀಡಬೇಕಿದೆ.

ಒಪ್ಪಂದದಂತೆ ಪ್ರತಿ ವರ್ಷವೂ ಟೋಲ್‌ ಹೆಚ್ಚಿಸಬೇಕು. ಆದರೆ ಐದು ವರ್ಷಗಳ ನಂತರ ಟೋಲ್‌ ಹೆಚ್ಚಿಸಲಾಗಿದೆ. ಹೀಗಾಗಿ ವಾಸ್ತವವಾಗಿ ಹೆಚ್ಚಿಸಬೇಕಾದ ಟೋಲ್‌ಗಿಂತ ಇದು ಕಡಿಮೆಯಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Related Articles

TRENDING ARTICLES